ಲಕ್ನೋ: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಪಟು ಸೌರಭ್ ವರ್ಮಾ ದಕ್ಷಿಣ ಕೊರಿಯಾದ ಆಟಗಾರನನ್ನು ಮಣಿಸಿ ಸಯ್ಯದ್ ಮೋದಿ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ಏಕೈಕ ಆಟಗಾರನಾಗಿದ್ದ ಸೌರಭ್ ವರ್ಮಾ ಸೆಮಿಫೈನಲ್ನಲ್ಲಿ ದಕ್ಷಿಣ ಕೊರಿಯಾದ ಹಿಯೊ ಕ್ವಾಂಗ್ ಹೀ ಅವರನ್ನು 21-17, 16-21, 21-18ರಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.
-
@sourabhverma09 wins!!!!!!! 👏💪
— BAI Media (@BAI_Media) November 30, 2019 " class="align-text-top noRightClick twitterSection" data="
The crowd can't have enough of it!!!!
With a 21-17, 16-21, 21-18 win, he is through to the FINAL!!!!!!!
Well done! Go for gold!!!!!#badminton #indiaontherise pic.twitter.com/5C4NinJKGX
">@sourabhverma09 wins!!!!!!! 👏💪
— BAI Media (@BAI_Media) November 30, 2019
The crowd can't have enough of it!!!!
With a 21-17, 16-21, 21-18 win, he is through to the FINAL!!!!!!!
Well done! Go for gold!!!!!#badminton #indiaontherise pic.twitter.com/5C4NinJKGX@sourabhverma09 wins!!!!!!! 👏💪
— BAI Media (@BAI_Media) November 30, 2019
The crowd can't have enough of it!!!!
With a 21-17, 16-21, 21-18 win, he is through to the FINAL!!!!!!!
Well done! Go for gold!!!!!#badminton #indiaontherise pic.twitter.com/5C4NinJKGX
ಮೊದಲ ಗೇಮ್ನ್ನು 21-17ರಲ್ಲಿ ಸುಲಭವಾಗಿ ಗೆದ್ದ ಸೌರಭ್ ಎರಡನೇ ಗೇಮ್ನಲ್ಲಿ 16-21ರಲ್ಲಿ ಸೋಲು ಕಂಡರು. ಆದರೆ ಪಂದ್ಯ ಗೆಲುವಿಗೆ ನಿರ್ಣಾಯಕವಾಗಿದ್ದ ಕೊನೆಯ ಗೇಮ್ನಲ್ಲಿ ಇಬ್ಬರು ಆಟಗಾರರಿಂದಲೂ ಉತ್ತಮ ಪೈಪೋಟಿ ಕಂಡು ಬಂದಿತು. ಒಂದು ಹಂತದಲ್ಲಿ 18-18ರಲ್ಲಿ ಸಮ ಅಂಕವಿದ್ದ ಗೇಮ್ನ್ನು ಸೌರಭ್ 3 ಅಂಕ ವೇಗವಾಗಿ ಪಡೆದು 21-18ರಿಂದ ಗೆಲ್ಲುವಲ್ಲಿ ಯಶಸ್ವಿಯಾದರು.
ಸೌರಭ್ ಮುಂದಿನ ಸುತ್ತಿನಲ್ಲಿ ಚೈನಾ ತೈಪೆಯ(ತೈವಾನ್) ವಾಂಗ್ ಜು ವೈ ವಿರುದ್ಧ ಸೆಣಸಲಿದ್ದಾರೆ.