ETV Bharat / sports

Indonesia Open : ಸಿಂಧು ಬೆನ್ನಲ್ಲೇ ಟೂರ್ನಿಯಿಂದ ಹೊರ ಬಿದ್ದ ಸಾತ್ವಿಕ್-ಚಿರಾಗ್​ ಶೆಟ್ಟಿ ಜೋಡಿ - ಪಿವಿ ಸಿಂಧುಗೆ ಸೆಮಿಫೈನಲ್ಸ್​ನಲ್ಲಿ ಸೋಲು

ಶನಿವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತೀಯ ಜೋಡಿ ಹಾಲಿ ನಂಬರ್​ 1 ಮತ್ತು ಒಲಿಂಪಿಕ್ ಚಾಂಪಿಯನ್ ಆಗಿರುವ ಇಂಡೋನೇಷಿಯಾದ​ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ವಿರುದ್ಧ 21-16, 21-18ರಿಂದ ಸೋಲು ಕಂಡಿತು..

Satwik-Chirag lose in semifinals of Indonesia Open
ಸಾತ್ವಿಕ್-ಚಿರಾಗ್​ ಶೆಟ್ಟಿ ಜೋಡಿಗೆ ಸೋಲು
author img

By

Published : Nov 27, 2021, 7:05 PM IST

ಬಾಲಿ(ಇಂಡೋನೇಷಿಯಾ) : ಭಾರತದ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್​ ಸಾಯಿರಾಜ್​ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಇಂಡೋನೇಷಿಯಾ ಓಪನ್​ ಸೆಫೈನಲ್​ನಲ್ಲಿ ಸೋಲುಂಡು ಟೂರ್ನಿಯಿಂದ ಹೊರ ಬಿದ್ದಿದೆ.

ಶನಿವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತೀಯ ಜೋಡಿ ಹಾಲಿ ನಂಬರ್​ 1 ಮತ್ತು ಒಲಿಂಪಿಕ್ ಚಾಂಪಿಯನ್ ಆಗಿರುವ ಇಂಡೋನೇಷಿಯಾದ​ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ವಿರುದ್ಧ 21-16, 21-18ರಿಂದ ಸೋಲುಂಡಿತು.

44 ನಿಮಿಷಿಗಳ ಕಾಲ ನಡೆದ ಪಂದ್ಯದಲ್ಲಿ ಟೂರ್ನಿಯಲ್ಲಿ 6ನೇ ಶ್ರೇಯಾಂಕ ಪಡೆದಿರುವ ಭಾರತೀಯ ಜೋಡಿ ಪೈಪೋಟಿ ನೀಡಿತಾದರೂ ಒಂದೂ ಗೇಮ್​ ಗೆಲ್ಲುವಲ್ಲಿ ವಿಫಲವಾಯಿತು.

ಇದು ಸಾತ್ವಿಕ್ ಮತ್ತು ಚಿರಾಗ್​ಗೆ ಇಂಡೋನೇಷಿಯಾ ಜೋಡಿಯ ವಿರುದ್ಧ 10ನೇ ನೇರ ಸೋಲಾಯಿತು. ಈ ಸೋಲಿನೊಂದಿಗೆ ಭಾರತ ಟೂರ್ನಿಯಲ್ಲಿ ತನ್ನ ಸವಾಲನ್ನು ಅಂತ್ಯಗೊಳಿಸಿತು.

ಇದಕ್ಕೂ ಮುನ್ನ ಡಬಲ್ ಒಲಿಂಪಿಕ್ಸ್ ಮೆಡಲಿಸ್ಟ್​ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್​ನಲ್ಲಿ ಥಾಯ್ಲೆಂಡ್​ನ ರಚನಾಕ್ ಇಂಟನಾನ್ ವಿರುದ್ಧ 21-15, 9-21, 14-21ರ ಅಂತರದಲ್ಲಿ ಸೋಲು ಕಂಡಿದ್ದರು. ಸಿಂಧು ಈ ಸೋಲಿನ ಸತತ ಮೂರು ಟೂರ್ನಿಗಳಲ್ಲಿ ಸೆಮಿಫೈನಲ್​ನಲ್ಲೇ ಸೋಲು ಕಂಡಂತಾಯಿತು.

ಇದನ್ನೂ ಓದಿ:ತಮ್ಮ 4ನೇ ಟೆಸ್ಟ್​ ಪಂದ್ಯದಲ್ಲಿ 5ನೇ ಬಾರಿ 5 ವಿಕೆಟ್ ಪಡೆದು ದಾಖಲೆ ಬರೆದ ಅಕ್ಷರ್ ಪಟೇಲ್!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.