ಬಾಸೆಲ್(ಸ್ವಿಟ್ಜರ್ಲೆಂಡ್): ವಿಶ್ವ ಚಾಂಪಿಯನ್ ಸಿಂಧು ಸ್ವಿಸ್ ಓಪನ್ ಸೂಪರ್ 300 ಟೂರ್ನಮೆಂಟ್ ಸೆಮಿಫೈನಲ್ನಲ್ಲಿ ವಿಶ್ವದ 12ನೇ ಶ್ರೇಯಾಂಕದ ಮಿಯಾ ಬ್ಲಿಚ್‌ಫೆಲ್ಡ್ ವಿರುದ್ಧ ಗೆಲ್ಲುವ ಮೂಲಕ ಮಹಿಳೆಯರ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಪಿವಿ ಸಿಂಧು ಟೂರ್ನಿಯಲ್ಲಿ 4ನೇ ಶ್ರೇಯಾಂಕ ಪಡೆದಿದ್ದ ಡೆನ್ಮಾರ್ಕ್ನ ಬ್ಲಿಚ್‌ಫೆಲ್ಡ್ ವಿರುದ್ಧ 22-20, 21-10 ಗೇಮ್ಗಳ ಅಂತರದಲ್ಲಿ 43 ನಿಮಿಷ ನಡೆದ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರು. ಈ ಮೂಲಕ ಯುನೆಕ್ಸ್ ಥಾಯ್ಲೆಂಡ್ ಓಪನ್ನಲ್ಲಿನ ಮೊದಲ ಸುತ್ತಿನ ಸೋಲಿಗೆ ಸಿಂಧು ಸೇಡು ತೀರಿಸಿಕೊಂಡರು.
2019ರ ವಿಶ್ವಚಾಂಪಿಯನ್ಶಿಪ್ನಲ್ಲಿ ಫೈನಲ್ ಗೆದ್ದ ನಂತರ ಇದೇ ಮೊದಲ ಬಾರಿಗೆ ಟೂರ್ನಿಯೊಂದರಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
-
HIGHLIGHTS | A strong-willed @Pvsindhu1 🇮🇳 battles a gritty @blichfeldt_mia 🇩🇰 for a placing in tomorrow’s final 🏸#HSBCbadminton #BWFWorldTour #SwissOpen2021 pic.twitter.com/VcHYriKKQH
— BWF (@bwfmedia) March 6, 2021 " class="align-text-top noRightClick twitterSection" data="
">HIGHLIGHTS | A strong-willed @Pvsindhu1 🇮🇳 battles a gritty @blichfeldt_mia 🇩🇰 for a placing in tomorrow’s final 🏸#HSBCbadminton #BWFWorldTour #SwissOpen2021 pic.twitter.com/VcHYriKKQH
— BWF (@bwfmedia) March 6, 2021HIGHLIGHTS | A strong-willed @Pvsindhu1 🇮🇳 battles a gritty @blichfeldt_mia 🇩🇰 for a placing in tomorrow’s final 🏸#HSBCbadminton #BWFWorldTour #SwissOpen2021 pic.twitter.com/VcHYriKKQH
— BWF (@bwfmedia) March 6, 2021
ಇನ್ನು ಪುರುಷರ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ ವಿಶ್ವದ 2ನೇ ಶ್ರೇಯಾಂಕ ಹಾಗೂ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 13-21, 19-21 ರ ಅಂತರದಲ್ಲಿ ಸೋಲುವ ಮೂಲಕ ನಿರಾಸೆಯನುಭವಿಸಿದರು.
ಇದನ್ನು ಓದಿ: ಇಂಗ್ಲೆಂಡ್ ವಿರುದ್ಧ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಭಾರತ ಲಗ್ಗೆ: ರಾಷ್ಟ್ರಪತಿ ಅಭಿನಂದನೆ