ETV Bharat / sports

ಕ್ರೀಡಾಪಟುವಾಗಲು ಪ್ರೇರಣೆಯಾದವರ ಬಗ್ಗೆ ಬಹಿರಂಗಪಡಿಸಿದ ವಿಶ್ವಚಾಂಪಿಯನ್​ ಪಿ ವಿ ಸಿಂಧು - ವಿಶ್ವಚಾಂಪಿಯನ್​ ಪಿವಿ ಸಿಂಧು

ಬ್ಯಾಡ್ಮಿಂಟನ್​ ಹೊರೆತುಪಡಿಸಿ ಯಾವ ಉದ್ಯೋಗ ಮಾಡಲು ಬಯಸುವಿರಿ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು, ಬಾಲ್ಯದಲ್ಲಿ ವೈದ್ಯಳಾಗಬೇಕೆಂದು ಬಯಸಿದ್ದೆ. ಆದರೆ, ಪ್ರಸ್ತುತ ಬ್ಯಾಡ್ಮಿಂಟನ್​ ಆಡುತ್ತಿರುವುದೇ ಉತ್ತಮವಾಗಿದೆ..

ವಿಶ್ವಚಾಂಪಿಯನ್​ ಸಿಂಧು
ವಿಶ್ವಚಾಂಪಿಯನ್​ ಸಿಂಧು
author img

By

Published : Aug 30, 2020, 4:59 PM IST

ಮುಂಬೈ : ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ ಮೊದಲ ಬೆಳ್ಳಿ ಹಾಗೂ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಮೊದಲ ಚಿನ್ನ ತಂದುಕೊಟ್ಟಿರುವ ಪಿವಿ ಸಿಂಧು ತಾವೂ ಕ್ರೀಡೆಯನ್ನು ಆಯ್ದುಕೊಳ್ಳಲು ತಮ್ಮ ತಂದೆಯೇ ಕಾರಣ ಎಂದು ತಿಳಿಸಿದ್ದಾರೆ.

2016ರ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತ ಬ್ಯಾಡ್ಮಿಂಟನ್​ ಲೋಕವನ್ನೇ ಬದಲಿಸಿದ್ದರು. ನಂತರ ಘಟಾನುಘಟಿಗಳನ್ನು ಬಗ್ಗು ಬಡಿದು ವಿಶ್ವಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಆದರೆ, ಇಷ್ಟೆಲ್ಲಾ ಸಾಧನೆ ಮಾಡಿರುವ ಹೈದರಾಬಾದ್​ ಬೆಡಗಿಗೆ ಅವರ ತಂದೆಯೇ ಬಹುದೊಡ್ಡ ಪ್ರೇರಣೆ ಎಂದು ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ತಮಗೆ ಪ್ರೇರಣೆಯಾದವರು ಯಾರ ಎಂದು ಕೇಳಿದ್ದಕ್ಕೆ ಸಿಂಧು, ನಾನು ಬ್ಯಾಡ್ಮಿಂಟನ್ ಆಯ್ಕೆಮಾಡಿಕೊಂಡಾಗ ಅಪ್ಪ ನನ್ನನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ತುಂಬಾ ಪ್ರೇರೇಪಿಸಿದರು ಎಂದು ತಿಳಿಸಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್​ ಹೊರೆತುಪಡಿಸಿ ಯಾವ ಉದ್ಯೋಗ ಮಾಡಲು ಬಯಸುವಿರಿ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು," ಬಾಲ್ಯದಲ್ಲಿ ವೈದ್ಯಳಾಗಬೇಕೆಂದು ಬಯಸಿದ್ದೆ. ಆದರೆ, ಪ್ರಸ್ತುತ ಬ್ಯಾಡ್ಮಿಂಟನ್​ ಆಡುತ್ತಿರುವುದೇ ಉತ್ತಮವಾಗಿದೆ" ಎಂದಿದ್ದಾರೆ.

ಪಿವಿ ಸಿಂದು ಮತ್ತು ಅವರ ತಂದೆ ಪಿವಿ ರಮಣ
ಪಿವಿ ಸಿಂಧು ಮತ್ತು ಅವರ ತಂದೆ ಪಿವಿ ರಮಣ

ಇನ್ನು ಲಾಕ್​ಡೌನ್​ ಬಗ್ಗೆ ಮಾತನಾಡಿರುವ ಅವರು, ಕುಟುಂಬವರ ಜೊತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಆದರೆ, ಲಾಕ್​ಡೌನ್​ನಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ. ಕೆಲವು ಹವ್ಯಾಸಗಳನ್ನು ರೂಢಿಸಿಕೊಂಡಿದ್ದೇನೆ. ಮೊದಲೆಲ್ಲ ನನಗೆ ಇದಕ್ಕೆ ಸಮಯ ಸರಿ ಹೊಂದುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಬ್ಯಾಡ್ಮಿಂಟನ್​ ಪುನರಾರಂಭದ ಬಗ್ಗೆ ಮಾತನಾಡಿದ್ದು, ಕೊರೊನಾ ವೈರಸ್​ ಸಾಂಕ್ರಾಮಿಕವೂ ನಮ್ಮೆಲ್ಲರ ಮೇಲೆ ಪರಿಣಾಮ ಬೀರಿದೆ. ನನ್ನ ಪ್ರಕಾರ ಎಲ್ಲಾ ಆಟಗಾರರು ಪ್ರೇಕ್ಷರಿಲ್ಲದೆ ಭವಿಷ್ಯದ ಪಂದ್ಯಗಳಲ್ಲಿ ಆಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.