ಹೈದರಾಬಾದ್:ವಿಶ್ವದಾದ್ಯಂತ ಕೋವಿಡ್ 19 ವೈರಸ್ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ವಿದೇಶಿ ಕೋಚ್ಗಳನ್ನು ನಿಯೋಜಿಸಿಕೊಳ್ಳುವುದು ಕಷ್ಟಕರವಾಗಲಿರುವುದರಿಂದ ಭಾರತ ತಂಡದಲ್ಲಿ ಆಡಿರುವ ಮಾಜಿ ಆಟಗಾರರು ಕೋಚ್ ಜವಾಬ್ದಾರಿ ನಿರ್ವಹಿಸಲು ಮುಂದೆ ಬರಬೇಕು ಎಂದು ವಿಶ್ವಚಾಂಪಿಯನ್ ಶಟ್ಲರ್ ಪಿ.ವಿ. ಸಿಂಧು ತಿಳಿಸಿದ್ದಾರೆ.
ಎಸ್ಎಐಗೆ ಸಹಾಯಕ ನಿರ್ದೇಶಕರು ಆಯ್ಕೆಯಾದ ಸಂದರ್ಭದಲ್ಲಿ ಆನ್ಲೈನ್ನಲ್ಲಿ ಸಂವಾದದಲ್ಲಿ ಮಾತನಾಡಿದ ಸಿಂಧು, ಭಾರತಕ್ಕಾಗಿ ಹಲವಾರು ಆಟಗಾರರು ಆಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಆಟಗಾರರು ಈ ಸಂದರ್ಭದಲ್ಲಿ ಕೋಚ್ ಆಗುವ ಮೂಲಕ ಯುವ ಆಟಗಾರರಿಗೆ ನೆರವಾಗಬೇಕು ಎಂದು ಸಿಂಧು ಅಭಿಪ್ರಾಯಪಟ್ಟಿದ್ದಾರೆ.
ಈ ಜಾಗತಿಕ ಸಾಂಕ್ರಾಮಿಕ ರೋಗವು ಹೀಗೆ ಮುಂದುವರಿದರೆ, ವಿದೇಶದಿಂದ ತರಬೇತುದಾರರನ್ನು ಕರೆತರುವುದು ಕಷ್ಟಕರವಾಗಬಹುದು. ನಮ್ಮ ದೇಶದಲ್ಲಿ ಸಾಕಷ್ಟು ಉತ್ತಮ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ. ಅಂತಹವರನ್ನು ಕೋಚ್ಗಳಾಗಿ ಬಳಸಬಹುದು" ಎಂದು ಸಿಂಧು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸಿಂಧು, ಒಬ್ಬ ಕ್ರೀಡಾಪಟುವಿನ ಯಶಸ್ವಿನ ಹಿಂದೆ ಪೋಷಕರು ಮತ್ತು ಕೋಚ್ಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ವಿವರಿಸಿದರು.
ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆಲ್ಲಲು ಸಿಂಧು ಅವರ ಪೋಷಕರು ಪ್ರಮುಖ ಪಾತ್ರವಹಿಸಿದ್ದರು. ಅವರ ಅಮ್ಮ ಕೆಲಸವನ್ನೇ ಬಿಟ್ಟರೆ, ಅವರ ತಂದೆ 2 ವರ್ಷ ಸುದೀರ್ಘ ರಜೆ ತಗೆದುಕೊಂಡಿದ್ದರು ಎಂದು ಸಿಂಧು ಪೋಷಕರ ಪಾತ್ರವನ್ನು ವಿವರಿಸಿದ್ದಾರೆ.