ETV Bharat / sports

ಕೊರಿಯಾ ಓಪನ್​: ಸೆಮಿಫೈನಲ್​ನಲ್ಲಿ ಮುಗ್ಗರಿಸಿದ ಕಶ್ಯಪ್​, ಬರಿಗೈಯಲ್ಲಿ ವಾಪಸಾದ ಭಾರತ!

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಹಿರಿಯ ಅನುಭವಿ ಶಟ್ಲರ್​ ಪರುಪ್ಪಳ್ಳಿ ಕಶ್ಯಪ್ ಸೆಮಿಫೈನಲ್​ನಲ್ಲಿ ಸೋಲು ಕಾಣುವ ಮೂಲಕ ಭಾರತದ ಏಕೈಕ ಪ್ರಶಸ್ತಿ ಭರವಸೆಗೆ ನಿರಾಸೆ ಮೂಡಿಸಿದ್ದಾರೆ.

Korea Open
author img

By

Published : Sep 28, 2019, 7:31 PM IST

ಇಂಚಿಯಾನ್: ಕೊರಿಯಾ ಓಪನ್​​ನಲ್ಲಿ ಭಾರತಕ್ಕೆ ಪ್ರಶಸ್ತಿ ನಿರೀಕ್ಷೆ ಮೂಡಿಸಿದ್ದ ಏಕೈಕ ಆಟಗಾರ ಪರುಪಳ್ಳಿ ಕಶ್ಯಪ್​ ಸೆಮಿಫೈನಲ್​ನಲ್ಲಿ ಜಪಾನ್​ನ ಕೆಂಟೊ ಮೊಮೊಟ ವಿರುದ್ಧ ಸೋಲು ಕಂಡಿದ್ದಾರೆ.

ಕೊರಿಯಾ ಓಪನ್​ನಲ್ಲಿ ಪ್ರಶಸ್ತಿ ತಂದು ಕೊಡುವ ಆಟಗಾರರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್​ ಹಾಗೂ ಸಾಯಿ ಪ್ರಣೀತ್​ ಆರಂಭದಲ್ಲೇ ಸೋಲನುಭವಿಸಿದ್ದರು. ಆದರೆ ಕಶ್ಯಪ್​ ಮಾತ್ರ ಅಚ್ಚರಿಯ ಜಯ ಸಾಧಿಸಿ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟು ಪ್ರಶಸ್ತಿ ಆಸೆ ಹುಟ್ಟಿಸಿದ್ದರು.

ಆದರೆ ವಿಶ್ವದ ನಂಬರ್​ ಒನ್​ ಅಟಗಾರನಾದ ಜಪಾನ್​ ಕೆಂಟೊ ಮೊಮೊಟಾ ವಿರುದ್ಧ 13-21, 15-21ರ ನೇರ ಸೆಟ್​​ಗಳಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ಇವರ ಸೋಲಿನ ಮೂಲಕ ಕೊರಿಯಾ ಓಪನ್​ನಲ್ಲಿ ಭಾರತದ ಸವಾಲು ಕೂಡ ಪ್ರಶಸ್ತಿ ರಹಿತವಾಗಿ ಅಂತ್ಯಗೊಂಡಿತು. ಕೊರಿಯಾ ಓಪನ್ 2019 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಹಿರಿಯ ಅನುಭವಿ ಶಟ್ಲರ್​​ ಪಟು ಪರುಪ್ಪಳ್ಳಿ ಕಶ್ಯಪ್ ಸೆಮಿಫೈನಲ್ ಹಂತದಿಂದ ಹೊರಬಿದ್ದಿದ್ದಾರೆ. ಇದರಿಂದಾಗಿ ಪ್ರಶಸ್ತಿ ಕನಸು ಭಗ್ನಗೊಂಡಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.