ETV Bharat / sports

ಥಾಯ್ಲೆಂಡ್​ ಓಪನ್​ ಟೂರ್ನಿಯಿಂದ ಹೊರ ಬಿದ್ದ ಕಿಡಂಬಿ ಶ್ರೀಕಾಂತ್​ - ಭಾರತದ ಷಟ್ಲರ್​​​ ಕಿಡಂಬಿ ಶ್ರೀಕಾಂತ್​​

ಸ್ನಾಯು ಸೆಳೆತದಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವುದನ್ನು ನಿಮಗೆ ತಿಳಿಸಲು ಅತೀವ ದುಃಖವಾಗುತ್ತಿದೆ. ಆದರೆ, ಮುಂದಿನ ವಾರದಲ್ಲಿ ನಡೆಯಲಿರುವ ಮತ್ತೊಂದು ಸುತ್ತಿಗೆ ಫಿಟ್​ ಆಗುವ ಭರವಸೆ ಹೊಂದಿದ್ದೇನೆ ಎಂದು ಅವರು ಟ್ವೀಟ್​​ನಲ್ಲಿ ತಿಳಿಸಿದ್ದಾರೆ.

Kidambi Srikanth pulls out of Thailand Open
ಸ್ನಾಯು ಸೆಳೆತದಿಂದ 2ನೇ ಸುತ್ತಿನಿಂದ ಹಿಂದೆ ಸರಿದ ಶ್ರೀಕಾಂತ್​​
author img

By

Published : Jan 14, 2021, 4:22 PM IST

ಬ್ಯಾಂಕಾಕ್​​: ಸ್ನಾಯುಸೆಳೆತಕ್ಕೆ ಒಳಗಾಗಿರುವ ಭಾರತದ ಷಟ್ಲರ್​​​ ಕಿಡಂಬಿ ಶ್ರೀಕಾಂತ್​​ ಅವರು ಥಾಯ್ಲೆಂಡ್​ ಓಪನ್‌ ಟೂರ್ನಿಯ ಎರಡನೇ ಸುತ್ತಿನಿಂದ ಹೊರ ಬಿದ್ದಿದ್ದಾರೆ.

ಕಿಡಂಬಿ ಎರಡನೇ ಸುತ್ತಿನಲ್ಲಿ ಮಲೇಷ್ಯಾದ ಲೀ ಜೀ ಜಿಯಾ ವಿರುದ್ಧ ಆಡಬೇಕಿತ್ತು. ಆದರೆ, ಗಾಯದಿಂದ ಹೊರಗುಳಿದ ಕಾರಣ ಪಂದ್ಯಾವಳಿಯಲ್ಲಿ ಪ್ರತಿಸ್ಪರ್ಧಿ ಮುನ್ನಡೆ ಸಾಧಿಸಿದ್ದಾರೆ.

ಸ್ನಾಯು ಸೆಳೆತದಿಂದ ಟೂರ್ನಿಯ ಎರಡನೇ ಸುತ್ತಿನಿಂದ ಹೊರಬಿದ್ದಿರುವುದನ್ನು ನಿಮಗೆ ತಿಳಿಸಲು ಅತೀವ ದುಃಖವಾಗುತ್ತಿದೆ. ಆದರೆ, ಮುಂದಿನ ವಾರದಲ್ಲಿ ನಡೆಯಲಿರುವ ಮತ್ತೊಂದು ಸುತ್ತಿಗೆ ನಾನು ಸರಿಹೊಂದುವ ಭರವಸೆ ಹೊಂದಿದ್ದೇನೆ ಎಂದು ಟ್ವೀಟ್​​ನಲ್ಲಿ ತಿಳಿಸಿದ್ದಾರೆ.

  • Very sad to let you all know that I have been advised to pull out of Thailand Open due to a calf muscle strain. I am hoping to be fit by next week for the next round of the Thailand leg. pic.twitter.com/jXTr4P25QF

    — Kidambi Srikanth (@srikidambi) January 14, 2021 " class="align-text-top noRightClick twitterSection" data=" ">

ಬುಧವಾರದಂದು (ಜ.13) ನಡೆದ ಪಂದ್ಯದಲ್ಲಿ ಸ್ವದೇಶಿ ಸೌರಬ್​ ವರ್ಮಾ ವಿರುದ್ಧ ಸುಲಭ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದರು. ಸತತ ಎರಡು ಗಂಟೆಗಳ ಜರುಗಿದ ಸೆಟ್​​​ನಲ್ಲಿ 21-12, 21-11 ಅಂತರದಿಂದ ಪ್ರತಿಸ್ಫರ್ಧಿಯನ್ನು ಮಣಿಸಿದ್ದರು.

ಇದನ್ನೂ ಓದಿ: ಸೌರಭ್ ವರ್ಮಾರನ್ನು ಮಣಿಸಿ ಶುಭಾರಂಭ ಮಾಡಿದ ಶ್ರೀಕಾಂತ್​

ಕೊರೊನಾ ಪರೀಕ್ಷೆ ಸಂದರ್ಭದಲ್ಲಿ ಸಿಬ್ಬಂದಿ ಎಡವಟ್ಟಿನಿಂದ ಕಿಡಂಬಿಗೆ ಮೂಗಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಈ ಕುರಿತು ಫೋಟೋಗಳನ್ನು ಮಂಗಳವಾರ ಹಂಚಿಕೊಂಡಿದ್ದ ಕಿಡಂಬಿ, ಕೇವಲ 31 ನಿಮಿಷಗಳ ಕಾಲ ನಡೆದ ಪಂದ್ಯವೊಂದರಲ್ಲಿ ಸುಲಭ ಗೆಲುವು ಸಾಧಿಸಿದ್ದರು. ಸೈನಾ ನೆಹ್ವಾಲ್ ಇಂದು ಎರಡನೇ ಸುತ್ತಿನ ಪಂದ್ಯಕ್ಕೆ ಕಾರ್ಯಪ್ರವೃತ್ತರಾಗುತ್ತಿದ್ದಾರೆ. ಅವರು ನಿನ್ನೆ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: ಟೂರ್ನಿಯಲ್ಲಿ ಶುಭಾರಂಭ ಮಾಡಿದ ಸೈನಾ ನೆಹ್ವಾಲ್

ಪುರುಷರ ಡಬಲ್ಸ್ ಜೋಡಿ ಸಾತ್ವಿಕ್​ ಸೈರಾಜ್​ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎರಡನೇ ಸುತ್ತಿನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದರು. ಈ ಜೋಡಿಯನ್ನು 21-19, 21-17 ಅಂತರದಲ್ಲಿ ಇಂಡೋನೇಷ್ಯಾದ ಜೋಡಿ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯವಾನ್ ಸೋಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.