ETV Bharat / sports

ಕ್ವಾರ್ಟರ್ ಫೈನಲ್​ನಲ್ಲಿ ಸೋಲು: ಡೆನ್ಮಾರ್ಕ್​ ಓಪನ್​ನಿಂದ ಕಿಡಂಬಿ ಶ್ರೀಕಾಂತ್ ಔಟ್ - ಕ್ವಾರ್ಟರ್ ಫೈನಲ್​ನಲ್ಲಿ ಕಿಡಂಬಿ ಶ್ರೀಕಾಂತ್​ಗೆ ಸೋಲು

ಚೌ ಟಿಯಾನ್ ಚೆನ್ ವಿರುದ್ಧ ಸೋಲು ಕಂಡ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Kidambi Srikanth knocked out of Denmark Open quarters
ಕಿಡಂಬಿ ಶ್ರೀಕಾಂತ್
author img

By

Published : Oct 17, 2020, 7:44 AM IST

ಕೋಪನ್​ಹ್ಯಾಗನ್(ಡೆನ್ಮಾರ್ಕ್): ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಹಂತದಲ್ಲಿ ಸೋಲು ಕಂಡ ಕಿಡಂಬಿ ಶ್ರೀಕಾಂತ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

62 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೀಕಾಂತ್ 22-20, 13-21, 16-21ರಲ್ಲಿ ಚೀನಾದ ಎರಡನೇ ಶ್ರೇಯಾಂಕದ ಆಟಗಾರ ಚೌ ಟಿಯಾನ್ ಚೆನ್ ವಿರುದ್ಧ ಸೋಲು ಕಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಚೌ 6-2 ಮುನ್ನಡೆ ಸಾಧಿಸಿದರು. ಆದರೆ ಮತ್ತೆ ಕಂಬ್ಯಾಕ್ ಮಾಡಿದ ಶ್ರೀಕಾಂತ್ 10-10 ಸಮಬಲ ಸಾಧಿಸಿದ್ರು. ಆದರೆ ಆಕ್ರಮಣಕಾರಿ ಆಟವಾಡಿದ ಚೌ 22-20ರಿಂದ ಮೇಲುಗೈ ಸಾಧಿಸಿದ್ರು.

ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಶ್ರೀಕಾಂತ್, ಟಿಯಾನ್ ಚೆನ್ ವಿರುದ್ಧ ಉತ್ತಮವಾಗಿ ಹೋರಾಡಿದರು. ಆದರೆ ಕೊನೆಯಲ್ಲಿ ಮಿಂಚಿದ ಟಿಯಾನ್ ಚೆನ್ ಪಂದ್ಯ ಜಯಿಸುವಲ್ಲಿ ಯಶಸ್ವಿಯಾದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.