ಬರ್ಮಿಂಗ್ಹ್ಯಾಮ್: ಇಂಡೋನೇಷ್ಯಾದ ಬ್ಯಾಡ್ಮಿಂಟನ್ ತಂಡ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಒಬ್ಬರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಆಲ್ ಇಂಗ್ಲೆಂಡ್ ಓಪನ್‌ನಿಂದ ಈ ತಂಡ ಹೊರ ಬಂದಿದೆ.
10 ದಿನಗಳ ಕಾಲ ಈ ತಂಡವನ್ನು ಕ್ವಾರಂಟೈನ್ನಲ್ಲಿ ಇಡಲಾಗುವುದು ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಮತ್ತು ಬ್ಯಾಡ್ಮಿಂಟನ್ ಇಂಗ್ಲೆಂಡ್ ನಿನ್ನೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಲು ತೆರಳಿದ ಭಾರತೀಯ ಸ್ಪರ್ಧಿಗಳಿಗೆ ಕೊರೊನಾ!
ಇಂಡೋನೇಷ್ಯಾದ ಆಟಗಾರರು ಪ್ರಸ್ತುತ ಅಥವಾ ಮುಂದಿನ ಸುತ್ತಿನ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಯೋನೆಕ್ಸ್ ಆಲ್ ಇಂಗ್ಲೆಂಡ್ ಓಪನ್ 2021 ರಿಂದ ಇಂಡೋನೇಷ್ಯಾದ ಬ್ಯಾಡ್ಮಿಂಟನ್ ತಂಡ ಹಿಂದೆ ಸರಿದಿದೆ.