ETV Bharat / sports

ಎಕ್ಸ್​ಕ್ಲೂಸಿವ್​: ಪಿವಿ ಸಿಂಧು, ಪುರುಷರ ಡಬಲ್ಸ್​ ಜೋಡಿ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಬಹುದು: ಕೋಚ್​ ವಿಮಲ್ ಕುಮಾರ್​ ಭವಿಷ್ಯ - ಸಾತ್ವಿಕ್ ಸಾಯಿರಾಜ್ - ಚಿರಾಗ್ ಶೆಟ್ಟಿ

ಒಲಿಂಪಿಕ್ಸ್ ಕಂಚು ಪದಕ ವಿಜೇತ ಸೈನಾ ನೆಹ್ವಾಲ್​ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಬಹುದು ಎಂದಿರುವ ಅವರು ಪದಕದ ಬಗ್ಗೆ ನಿರೀಕ್ಷೆಯಿಲ್ಲ, 16 ಹಂತಕ್ಕೆ ತಲುಪಬಹುದು ಎಂದಿದ್ದಾರೆ. ಆದರೆ, ಸಿಂಧು ಮೇಲೆ ಪದಕ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ಸೈನಾ ಮಾಜಿ ಕೋಚ್ ಆಗಿರುವ ವಿಮಲ್​ ಕುಮಾರ್​ ತಿಳಿಸಿದ್ದಾರೆ.

ವಿಮಲ್ ಕುಮಾರ್​
ವಿಮಲ್ ಕುಮಾರ್​
author img

By

Published : Feb 25, 2021, 7:40 PM IST

ಹೈದರಾಬಾದ್​: ಮುಂಬರುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಹಾಲಿ ವಿಶ್ವಚಾಂಪಿಯನ್​ ಪಿವಿ ಸಿಂಧು ಮತ್ತು ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್​ ಸಾಯಿರಾಜ್ ಮತ್ತು ಚಿರಾಗ್​ ಶೆಟ್ಟಿ ಅವರಿಂದ ಪದಕ ನಿರೀಕ್ಷೆ ಮಾಡಬಹುದು ಎಂದು ಬ್ಯಾಡ್ಮಿಂಟನ್ ಕೋಚ್​ ಯು ವಿಮಲ್​ ಕುಮಾರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ, ಒಲಿಂಪಿಕ್ಸ್ ಕಂಚು ಪದಕ ವಿಜೇತ ಸೈನಾ ನೆಹ್ವಾಲ್​ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಬಹುದು ಎಂದಿರುವ ಅವರು ಪದಕದ ಬಗ್ಗೆ ನಿರೀಕ್ಷೆಯಿಲ್ಲ, 16 ಹಂತಕ್ಕೆ ತಲುಪಬಹುದು ಎಂದಿದ್ದಾರೆ. ಆದರೆ ಸಿಂಧು ಮೇಲೆ ಪದಕ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ ಸೈನಾ ಮಾಜಿ ಕೋಚ್ ಆಗಿರುವ ವಿಮಲ್​ ಕುಮಾರ್​ ತಿಳಿಸಿದ್ದಾರೆ.

ಇನ್ನು ಥಾಯ್ಲೆಂಡ್​ ಓಪನ್​ನಲ್ಲಿ ಭಾರತೀಯ ಶಟ್ಲರ್​ಗಳು ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಲು ಕೋವಿಡ್​ 19 ಲಾಕ್​ಡೌನ್​ ಕಾರಣವೇ ಎಂದು ಕೇಳಿದ್ದಕ್ಕೆ, ಸ್ವಲ್ಪ ಮಟ್ಟಿಗೆ, ಹೌದು ಎನ್ನಬಹುದು, ಇತರ ದೇಶಗಳ ಸ್ಟಾರ್​ ಆಟಗಾರರು ಈ ವೇಳೆ ದೇಶೀಯ ಸ್ಪರ್ಧೆಗಳನ್ನು ಹೊಂದಿದ್ದರು. ಆದ್ದರಿಂದ ಅವರು ನಮ್ಮ ಆಟಗಾರರಿಗಿಂತ ಬೇಗ ಹೊಂದಾಣಿಕೆಯಾಗಿದ್ದರು.

ಆದರೆ ನಮ್ಮ ಆಟಗಾರರು, ಬಹುಶಃ, ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆಡದಿರಲು ಲಾಕ್​ಡೌನ್​ ಒಂದು ಕಾರಣವಾಗಿದೆ. ಸಿಂಗಲ್ಸ್ ಪ್ರದರ್ಶನದಿಂದ ಸ್ವಲ್ಪ ನಿರಾಸೆಯಾದರೂ ಡಬಲ್ಸ್​ನಲ್ಲಿ ನಾವು ಚೆನ್ನಾಗಿ ಆಡಿದ್ದೇವೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್​ ಸಾಯಿರಾಜ್ ಮತ್ತು ಚಿರಾಗ್ ಉತ್ತಮ ಪ್ರದರ್ಶನ ನೀಡಿದರು. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಮತ್ತು ಸಾತ್ವಿಕ್ ಕೂಡ ಉತ್ತಮ ಪ್ರದರ್ಶನ ನೀಡಿದರು. ಒಂದು ರೀತಿಯಲ್ಲಿ, ಜೋಡಿಗಳು ಸಿಂಗಲ್ಸ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದವು ಎಂದಿದ್ದಾರೆ.

ಸೈನಾ ನೆಹ್ವಾಲ್
ಸೈನಾ ನೆಹ್ವಾಲ್​

ಒಲಿಂಪಿಕ್ಸ್​ ತರಬೇತಿಗೆ ಇದ್ದ ಪ್ರಮುಖ ಸಮಯ ಕೋವಿಡ್​ನಿಂದ ವ್ಯರ್ಥವಾಯಿತೇ ಎಂದು ಕೇಳಿದ್ದಕ್ಕೆ , ಅದು ನಮಗೆ ಮಾತ್ರವಲ್ಲ ಎಲ್ಲರಿಗೂ ಅನ್ವಯಿಸುತ್ತದೆ. ಕೋವಿಡ್​ 19 ನಿಂದಾಗಿ ಪ್ರತಿ ದೇಶವೂ ತೊಂದರೆ ಅನುಭವಿಸುತ್ತಿದೆ. ನಾವು ಅದರ ಮೇಲೆ ಆರೋಪ ಹೊರಿಸಲು ಸಾಧ್ಯವಿಲ್ಲ. ಆದರೆ, ನಮ್ಮಲ್ಲಿ ಒಲಿಂಪಿಕ್ಸ್​ನಲ್ಲಿ ಇಬ್ಬರು ಸಿಂಗಲ್ಸ್ ಆಟಗಾರರು, ಮಹಿಳಾ ಸಿಂಗಲ್ಸ್‌ನಲ್ಲಿ ಇಬ್ಬರು, ಪುರುಷರ ಡಬಲ್ಸ್‌ನಲ್ಲಿ ಒಂದು ಜೋಡಿ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಒಂದು ಜೋಡಿ ಸ್ಪರ್ಧಿಸಲಿದೆ. ಇದು ಭಾರತದ ಬ್ಯಾಡ್ಮಿಂಟನ್​ ಪ್ರಗತಿಗೆ ಹಿಡಿದ ಕೈಗನ್ನಡಿ ಎಂದು ಅವರು ತಿಳಿಸಿದ್ದಾರೆ.

ಚಿರಾಗ್​ ಶೆಟ್ಟಿ- ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ

ಭಾರತದಲ್ಲಿ ಬ್ಯಾಡ್ಮಿಂಟನ್​ಗೆ ಸಾಕಷ್ಟು ನ್ಯೂನತೆಗಳು ಮತ್ತು ಮೂಲ ಸೌಕರ್ಯಗಳ ಕೊರತೆಗಳಿವೆಯೇ ಎಂಬುದಕ್ಕೆ ಉತ್ತರಿಸಿರುವ ಮಾಜಿ ರಾಷ್ಟ್ರೀಯ ಚಾಂಪಿಯನ್, ಖಂಡಿತವಾಗಿಯೂ, ಕೋಚಿಂಗ್ ಸೌಲಭ್ಯಗಳಲ್ಲಿ ನಮಗೆ ಹೆಚ್ಚಿನ ಮೂಲಸೌಕರ್ಯಗಳ ಅಗತ್ಯವಿದೆ. ಆದರೆ, ಹೆಚ್ಚಿನ ಕೇಂದ್ರಗಳಲ್ಲಿ ಕೋರ್ಟ್‌ಗಳು ಮತ್ತು ಶಟಲ್ ಕಾಕ್‌ಗಳ ಸೌಲಭ್ಯಗಳಿವೆ. ಕೋಚಿಂಗ್ ವಿಷಯದಲ್ಲಿ ನೋಡುವುದಾದರೆ ಪುರುಷರ ಡಬಲ್ಸ್‌ನಲ್ಲಿ ನಾವು ಸಾಕಷ್ಟು ಸುಧಾರಿಸಿದ್ದೇವೆ. ಪುರುಷರ ಸಿಂಗಲ್ಸ್‌ನಲ್ಲಿ ಸದೃಢ ತರಬೇತುದಾರರ ಅವಶ್ಯಕತೆಯಿದೆ. ಜೊತೆಗೆ ಆಟಗಾರರು ಸಹ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇನ್ನು 2021ರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ನಿಮ್ಮ ಪ್ರಕಾರ ಪದಕ ಗೆಲ್ಲುವ ಭರವಸೆ ಆಟಗಾರರು ಯಾರು ಎಂದು ಕೇಳಿದ್ದಕ್ಕೆ, ಖಂಡಿತ ಸಿಂಧು ಅವರ ಮೇಲೆ ಅಪಾರ ಭರವಸೆಯಿದೆ. ಜೊತೆಗೆ ಪುರುಷರ ಸಿಂಗಲ್ಸ್​ಗಿಂತಲೂ ಡಬಲ್ಸ್​ನಲ್ಲಿ ನನಗೆ ಹೆಚ್ಚಿನ ಭರವಸೆಯಿದೆ. ಯುವ ಆಟಗಾರರಾದ ಸಾತ್ವಿಕ-ಚಿರಾಗ್​ ಮೇಲೆ ನಂಬಿಕೆ ಇಡಬಹುದು ಎಂದಿದ್ದಾರೆ.

ಇದನ್ನು ಓದಿ:ಒಲಿಂಪಿಕ್ ಜ್ಯೋತಿ ಯಾತ್ರೆಗೂ ಮುನ್ನ ಸುರಕ್ಷತೆಗೆ ಹೆಚ್ಚಿನ ಆದ್ಯತೆ: ಸೀಕೊ ಹಶಿಮೊಟೊ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.