ETV Bharat / sports

Denmark Open: ಬುಸನನ್ ಮಣಿಸಿ ಕ್ವಾರ್ಟರ್ ಫೈನಲ್ಸ್​ ಪ್ರವೇಶಿಸಿ ವಿಶ್ವಚಾಂಪಿಯನ್ ಸಿಂಧು - ಥಾಯ್ಲೆಂಡ್​ ಸ್ಟಾರ್​ ಬುಸನನ್​ ಒಗ್ಬಮ್​ರುಂಗ್ಫನ್ ವಿರುದ್ಧ ಸಿಂಧುಗೆ ಜಯ​

ಬುಧವಾರ ನಡೆದ ಫ್ರೀ ಕ್ವಾರ್ಟರ್ ಫೈನಲ್ಸ್​ನಲ್ಲಿ ಸಿಂಧು 21-16, 12-21, 21-15 ರ ಅಂತರದಿಂದ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಲಗ್ಗೆಯಿಟ್ಟರು. ಭಾರತ ಸ್ಟಾರ್ ಶಟ್ಲರ್ ಮುಂದಿನ ಸುತ್ತಿನಲ್ಲಿ ದಕ್ಷಿಣ ಕೊರಿಯಾದ 19 ವರ್ಷದ ಅನ್ ಸೆ ಯಂಗ್ ವಿರುದ್ಧ ಸೆಣಸಾಡಲಿದ್ದಾರೆ.

Denmark Open
ಪಿವಿ ಸಿಂಧು ಕ್ವಾರ್ಟರ್ ಫೈನಲ್ಸ್​
author img

By

Published : Oct 21, 2021, 4:55 PM IST

ಒಡೆನ್ಸ್: ಹಾಲಿ ವಿಶ್ವಚಾಂಪಿಯನ್ ಪಿವಿ ಸಿಂಧು ಡೆನ್ಮಾರ್ಕ್​ ಓಪನ್​ ಸೂಪರ್​ 1000 ಟೂರ್ನಮೆಂಟ್​ನಲ್ಲಿ ಕ್ವಾರ್ಟರ್​​ ಫೈನಲ್ಸ್​ಗೆ ಲಗ್ಗೆಯಿಟ್ಟಿದ್ದಾರೆ. 16 ಘಟ್ಟದಲ್ಲಿ ಥಾಯ್ಲೆಂಡ್​ ಸ್ಟಾರ್​ ಬುಸನನ್​ ಒಗ್ಬಮ್​ರುಂಗ್ಫನ್ ವಿರುದ್ಧ ಜಯ ಸಾಧಿಸಿದ್ದಾರೆ.

ಬುಧವಾರ ನಡೆದ ಫ್ರೀ ಕ್ವಾರ್ಟರ್ ಫೈನಲ್ಸ್​ನಲ್ಲಿ ಸಿಂಧು 21-16, 12-21, 21-15 ರ ಅಂತರದಿಂದ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಲಗ್ಗೆಯಿಟ್ಟರು. ಭಾರತ ಸ್ಟಾರ್ ಶಟ್ಲರ್ ಮುಂದಿನ ಸುತ್ತಿನಲ್ಲಿ ದಕ್ಷಿಣ ಕೊರಿಯಾದ 19 ವರ್ಷದ ಅನ್ ಸೆ ಯಂಗ್ ವಿರುದ್ಧ ಸೆಣಸಾಡಲಿದ್ದಾರೆ.

ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್​ 2ನೇ ಸುತ್ತಿನ ಪಂದ್ಯದಲ್ಲಿ ನಂಬರ್ 1 ಶಟ್ಲರ್ ಜಪಾನ್​ನ ಕೆಂಟೊ ಮೊಮೊಟ ವಿರುದ್ಧ 23-21, 21-9 ಗೇಮ್​ಗಳ ಅಂತರದಲ್ಲಿ ಸೊಲು ಕಂಡು ನಿರಾಸೆ ಅನುಭವಿಸಿದರು.

ಮಿಕ್ಸಡ್​ ಡಬಲ್ಸ್​ನಲ್ಲಿ ಧ್ರುವ್ ಕಪಿಲಾ ಮತ್ತು ಎನ್​ ಸಿಕ್ಕಿರೆಡ್ಡಿ ಜೋಡಿ ಕೂಡ ಹಾಂಕಾಂಗ್​ನ ತಂಗ್ ಚುನ್​ ಮನ್ ಮತ್ತು ಸೆ ಯಿಂಗ್​ ಸೂಟ್ ವಿರುದ್ಧ 17-21, 21-19, 11-21ರ ಅಂತರದಲ್ಲಿ ಸೋಲು ಕಂಡರು.

ಇಂದು ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ ಮತ್ತು ಎಂಆರ್ ಅರ್ಜುನ್​ ಮತ್ತು ಧ್ರುವ್​ ಕಪಿಲಾ ಜೋಡಿಗಳು ಪುರುಷರ ಡಬಲ್ಸ್​ನಲ್ಲಿ ಮತ್ತು ಲಕ್ಷ್ಯ ಸೇನ್ ಮತ್ತು ಸಮೀರ್ ವರ್ಮಾ ಪುರಷರ ಸಿಂಗಲ್ಸ್​ನಲ್ಲಿ ಕಣಕ್ಕಿಳಿಯಬೇಕಿದೆ.

ಇದನ್ನು ಓದಿ:ಅಭ್ಯಾಸ ಪಂದ್ಯದಲ್ಲಿ ಸೋಲು: ಭಾರತ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಪಾಕ್​​​ಗೆ ಆಘಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.