ETV Bharat / sports

ಡೆನ್ಮಾರ್ಕ್​ ಓಪನ್: ಇಂಗ್ಲೆಂಡ್​ ಆಟಗಾರನ ಮಣಿಸಿ ಮುಂದಿನ ಹಂತ ತಲುಪಿದ ಕಿಡಂಬಿ - ಭಾರತದ ಶುಭಂಕರ್ ಡೇ

ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಭಾರತೀಯ ಶಟ್ಲರ್ ಕಿಡಂಬಿ ಶ್ರೀಕಾಂತ್ ಇಂಗ್ಲೆಂಡ್ ಆಟಗಾರನನ್ನು ಸೋಲಿಸುವ ಮೂಲಕ ಮುಂದಿನ ಹಂತಕ್ಕೆ ತಲುಪಿದ್ದಾರೆ.

Kidambi Srikanth
ಕಿಡಂಬಿ ಶ್ರೀಕಾಂತ್
author img

By

Published : Oct 14, 2020, 5:14 PM IST

ಓಡೆನ್ಸ್( ಡೆನ್ಮಾರ್ಕ್​): ಭಾರತದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಇಂಗ್ಲೆಂಡಿನ ಟೋಬಿ ಪೆಂಟಿ ಅವರನ್ನು ಸೋಲಿಸುವ ಮೂಲಕ ಡೆನ್ಮಾರ್ಕ್​​ನ ಓಪನ್ ಟೂರ್ನಿಯಲ್ಲಿ ಮುಂದಿನ ಹಂತಕ್ಕೆ ತಲುಪಿದ್ದಾರೆ.

ಕೇವಲ 37 ನಿಮಿಷಗಳಲ್ಲಿ ನಡೆದ ಆಟದಲ್ಲಿ 21-12, 21-18 ಸೆಟ್​ಗಳ ಮೂಲಕ ಟೋಬಿ ಪೆಂಟಿ ಅವರನ್ನು ಮಣಿಸಿದ್ದಾರೆ. ಮೂರು ವರ್ಷದ ಹಿಂದೆ ಡೆನ್ಮಾರ್ಕ್​ ಓಪನ್​ನ ಪ್ರಶಸ್ತಿ ವಿಜೇತರಾಗಿದ್ದ ಅವರು ಮುಂದಿನ ಪಂದ್ಯದಲ್ಲಿ ಭಾರತದ ಶುಭಂಕರ್ ಡೇ ಅಥವಾ ಕೆನಡಾದ ಜಾಸನ್ ಆ್ಯಂಟೋನಿಯನ್ನು ಎದುರಿಸಲಿದ್ದಾರೆ.

  • DANISA Denmark Open I 2020
    MS - Round of 32
    21 21 🇮🇳Srikanth KIDAMBI🏅
    12 18 🇬🇧Toby PENTY

    🕗 in 37 minutes
    https://t.co/9WrDK32sXC

    — BWFScore (@BWFScore) October 14, 2020 ]" class="align-text-top noRightClick twitterSection" data=" ]"> ]

ಮಂಗಳವಾರ 19 ವರ್ಷದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಅವರು ಫ್ರೆಂಚ್ ಆಟಗಾರ ಕ್ರಿಸ್ಟೋ ಪೊಪೋವ್ ಅವರನ್ನು ಮಣಿಸುವ ಮೂಲಕ ಎರಡನೇ ಹಂತಕ್ಕೆ ಕಾಲಿಟ್ಟಿದ್ದಾರೆ.

ಇದರ ಜೊತೆಗೆ ಬ್ಯಾಡ್ಮಿಂಟನ್ ಆಟಗಾರ ಅಜಯ್ ಜಯರಾಮ್ ವಿಶ್ವದ ಮೂರನೇ ಕ್ರಮಾಂಕದಲ್ಲಿರುವ ಆಂಡರ್ಸ್ ಆಂಟೊನ್ಸೆನ್ ಅವರನ್ನು ಎದುರಿಸಲಿದ್ದಾರೆ. ಭಾರತೀಯ ಆಟಗಾರರು ಈ ಟೂರ್ನಿಯಲ್ಲಿ ಯಾವ ರೀತಿಯ ಪ್ರಭಾವ ಬೀರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.