ETV Bharat / sports

ಚೀನಾ ಓಪನ್​: ವಿಶ್ವ ಚಾಂಪಿಯನ್​ ಸಿಂಧುಗೆ ಆಘಾತ ನೀಡಿದ ಜಪಾನ್​ ಶೆಟ್ಲರ್​ - ಜಪಾನ್​ ಶೆಟ್ಲರ್​ ಪೊರ್ನ್‌ಪಾವೀ ಚೊಚುವಾಂಗ್‌

5ನೇ ಶ್ರೇಯಾಂಕದ ಭಾರತದ ಸ್ಟಾರ್​ ಶೆಟ್ಲರ್​ ಸಿಂಧು 15ನೇ ಶ್ರೇಯಾಂಕದ ಚೊಚುವಾಂಗ್​ ವಿರುದ್ಧ 12-21, 21-13, 21-19 ರಿಂದ ಸೋಲನುಭವಿಸಿದ್ದಾರೆ.

China Open
author img

By

Published : Sep 19, 2019, 4:48 PM IST

ಚಾಂಗ್​ಜೌ: ನೂತನ ವಿಶ್ವಚಾಂಪಿಯನ್​ ಭಾರತದ ಪಿವಿ ಸಿಂಧು ಚೈನಾ ಓಪನ್​ನಲ್ಲಿ ಥಾಯ್ಲೆಂಡ್​ನ ಪೊರ್ನ್‌ಪಾವೀ ಚೊಚುವಾಂಗ್‌ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

5ನೇ ಶ್ರೇಯಾಂಕದ ಭಾರತದ ಸ್ಟಾರ್​ ಶೆಟ್ಲರ್​ ಸಿಂಧು 15ನೇ ಶ್ರೇಯಾಂಕದ ಚೊಚುವಾಂಗ್​ ವಿರುದ್ದ 12-21, 21-13, 21-19 ರಿಂದ ಸೋಲನುಭವಿಸಿ ನಿರಾಶೆ ಅನುಭವಿಸಿದರು.

ಒಲಿಂಪಿಕ್​ ಸಿಲ್ವರ್​ ಮೆಡಲಿಸ್ಟ್​ ಸಿಂಧು ಮೊದಲ ಗೇಮ್​ ಕಳೆದುಕೊಂಡರು. ಆದರೆ, ಎರಡನೇ ಗೇಮ್​​ನಲ್ಲಿ ತಿರುಗಿಬಿದ್ದು 21-13 ರಲ್ಲಿ ಗೆದ್ದುಕೊಂಡರಾದರೂ, ನಿರ್ಣಾಯಕವಾದ ಮೂರನೇ ಸೆಟ್​ನಲ್ಲಿ ಕಠಿಣ ಪೈಪೋಟಿ ಹೊರತಾಗಿಯೂ 21-19ರಲ್ಲಿ ಕಳೆದುಕೊಂಡು ಚೈನಾ ಓಪನ್​ನಲ್ಲಿ ತಮ್ಮ ಅಭಿಯಾನ ನಿಲ್ಲಿಸಿದರು.

ಕೊನೆಯ ಗೇಮ್​ನಲ್ಲಿ 19-16ರಲ್ಲಿ ಮುನ್ನಡೆ ಸಾಧಿಸಿಯೂ ಸಿಂಧು ಸೋಲನುಭವಿಸಿದ್ದು, ಭಾರತೀಯ ಅಭಿಮಾನಿಗಳಿಗೆ ತುಂಬಾ ನಿರಾಶೆ ಮೂಡಿಸಿತು. ಈ ಸೋಲಿನೊಂದಿಗೆ ಭಾರತದ ಮಹಿಳಾ ಶೆಟ್ಲರ್​ಗಳ ಸಿಂಗಲ್ಸ್​ ಪಯಣ ಕೊನೆಗೊಂಡಿತು.

ಇನ್ನು ಮಿಕ್ಸ್​ ಡಬಲ್ಸ್​ನಲ್ಲಿ ಸಾಥ್ವಿಕ್ ಸಾಯಿರಾಜ್​​-ಆಶ್ವಿನಿ ಪೊನ್ನಪ್ಪ ಜೋಡಿ ಜಪಾನ್​ನ ಯುಕಿ ಕನೆಕೊ-ಮಿಸಕಿ ಮತ್ಸುತೊಮೊ ವಿರುದ್ಧ 11-21,21-16 ರಲ್ಲಿ ಸೋಲುಕಂಡರು. ಪುರುಷರ ಡಬಲ್ಸ್​​ ವಿಭಾಗದಲ್ಲಿ ಸಾಥ್ವಿಕ್ಸಾಯಿರಾಜ್​​​- ಚಿರಾಗ್​ ಶೆಟ್ಟಿ ಜೋಡಿ ಸಹಾ 19-21,8-21 ರಲ್ಲಿ ಜಪಾನ್​ನ ತಕೇಶಿ ಕಮುರಾ-ಕೀಗೋ ಸೊನೊಡಾ ವಿರುದ್ದ ಸೋಲನುಭವಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.