ETV Bharat / sports

ಚೀನಾ ಓಪನ್​: ಸೆಮಿಫೈನಲ್​ನಲ್ಲಿ ನಿರಾಶೆಯನುಭವಿಸಿದ ಸಾತ್ವಿಕ್​-ಚಿರಾಗ್​ ಜೋಡಿ - ಸೆಮಿಫೈನಲ್​ನಲ್ಲಿ ಸೋಲುಕಂಡ ಸಾತ್ವಿಕ್​- ಚಿರಾಗ್​ ಶೆಟ್ಟಿ

ಚೀನಾ ಓಪನ್​ ಸೆಮಿಫೈನಲ್​ನಲ್ಲಿ ನಂಬರ್​ ಒನ್​ ಶ್ರೇಯಾಂಕದ ಇಂಡೋನೇಷ್ಯಾ ಜೋಡಿ ಮಾರ್ಕಸ್ ಫರ್ನಾಲ್ಡಿ ಗಿಡೆಯೊನ್‌ ಮತ್ತು ಕೆವಿನ್‌ ಸಂಜಯ ಸುಕಮುಲ್ಜೊ ವಿರುದ್ಧ ಚಿರಾಗ್​ ಶೆಟ್ಟಿ ಹಾಗೂ ಸಾತ್ವಿಕ್​ ಸಾಯಿರಾಜ್​ ರಾಂಕಿರೆಡ್ಡಿ ಜೋಡಿ 16-21, 20-22 ರಲ್ಲಿ ಸೋಲುಕಂಡರು.

ಸಾತ್ವಿಕ್​- ಚಿರಾಗ್​ ಶೆಟ್ಟಿSatwiksairaj-Chirag Shetty
author img

By

Published : Nov 9, 2019, 5:51 PM IST

ಫೂಜೋ(ಚೀನಾ): ಚೀನಾ ಓಪನ್​ನಲ್ಲಿ ಭಾರತಕ್ಕೆ ಪದಕ ಭರವಸೆ ಮೂಡಿಸಿದ್ದ ಚಿರಾಗ್​ ಶೆಟ್ಟಿ ಹಾಗೂ ಸಾತ್ವಿಕ್​ ಸಾಯಿರಾಜ್​ ರಾಂಕಿರೆಡ್ಡಿ ಜೋಡಿ ಸೆಮಿಫೈನಲ್​ನಲ್ಲಿ ಸೋಲುಕಾಣುವ ಮೂಲಕ ಕೋಟ್ಯಂತರ ಭಾರತೀಯರ ನಿರಾಶೆಯನುಭವಿಸಿದ್ದಾರೆ.

ಇಂದು ನಡೆದ ಸೆಮಿಫೈನಲ್​ನಲ್ಲಿ ನಂಬರ್​ ಒನ್​ ಶ್ರೇಯಾಂಕದ ಇಂಡೋನೇಷ್ಯಾ ಜೋಡಿ ಮಾರ್ಕಸ್ ಫರ್ನಾಲ್ಡಿ ಗಿಡೆಯೊನ್‌ ಮತ್ತು ಕೆವಿನ್‌ ಸಂಜಯ ಸುಕಮುಲ್ಜೊ ವಿರುದ್ಧ 16-21, 20-22 ರಲ್ಲಿ ಸೋಲುಕಂಡರು.

9ನೇ ಶ್ರೇಯಾಂಕದ ಭಾರತೀಯ ಜೋಡಿ ಮೊದಲ ಗೇಮ್​ ಅನ್ನು ಸುಲಭವಾಗಿ ಕಳೆದುಕೊಂಡರು, ಎರಡನೇ ಗೇಮ್​ನಲ್ಲಿ ಟಾಪ್​ ಶ್ರೇಯಾಂಕದ ಜೋಡಿಗೆ ಕಠಿಣ ಸವಾಲು ನೀಡಿದರಾದರು ಗೆಲುವು ಸ್ಪಲ್ಪದರಲ್ಲೇ ಕೈತಪ್ಪಿತು. ಒಟ್ಟಾರೆ ಭಾರತದ ಘಟನಾಘಟಿಗಳೆ ಆರಂಭಿಕ ಸುತ್ತುಗಳಲ್ಲಿ ನಿರ್ಗಮಿಸಿ ನಿರಾಶೆ ಮೂಡಿಸಿದರೆ ಈ ಯುವ ಜೋಡಿಯ ಆಟ ಮಾತ್ರ ಸಮಾಧಾನ ತಂದಿದೆ.

ಸೈನಾ, ಸಿಂಧು, ಶ್ರೀಕಾಂತ್​ ಮೊದಲ ಸುತ್ತಿನಲ್ಲಿ ನಿರ್ಗಮಿಸಿದರೆ, ಪ್ರಣೀತ್​, ಕಶ್ಯಪ್​ ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದರು. ಒಟ್ಟಾರೆ ವಿಶ್ವಚಾಂಪಿಯನ್​ಶಿಪ್​ನಂತರ ಭಾರತದ ಆಟಗಾರರು ಪ್ರಶಸ್ತಿಯಿಲ್ಲದ ಮತ್ತೊಂದು ಲೀಗ್​ನಿಂದ ನಿರ್ಗಮಿಸಿ ನಿರಾಶೆ ಮೂಡಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.