ನವದೆಹಲಿ: ವಿಶ್ವಚಾಂಪಿಯನ್ಸ್ ಬಾಕ್ಸಿಂಗ್ನ ಬೆಳ್ಳಿ ಪದಕ ವಿಜೇತರಾಗಿರುವ ಭಾರತ ಪ್ರತಿಭಾನ್ವಿತ ಬಾಕ್ಸರ್ ಅಮಿತ್ ಪಂಘಲ್ ಮತ್ತು ಸಂಜಿತ್ ಫ್ರೆಂಚ್ ಬಾಕಿಂಗ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಕೊರೊನಾ ವೈರಸ್ ಬ್ರೇಕ್ನ ನಂತರ್ ನಡೆದ ಮೊದಲ ಸ್ಪರ್ಧೆಯಲ್ಲಿ ಭಾರತೀಯ ಭಾಕ್ಸರ್ಗಳು ಭರ್ಜರಿ ಭೇಟಿಯಾಡಿದ್ದಾರೆ.
ಫ್ರಾನ್ಸ್‌ನ ನಾಂಟೆಸ್ನಲ್ಲಿ ನಡೆದ ಅಲೆಕ್ಸಿಸ್ ವ್ಯಾಸ್ಟೈನ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಏಷ್ಯನ್ ಚಾಂಪಿಯನ್ ಆಗಿರುವ ಅಮಿತ್ ಪಂಘಲ್ 52 ಕೆಜಿ ವಿಭಾಗದಲ್ಲಿ ಅಮೆರಿಕದ ರೇನ್ ಅಬ್ರಹಾಮ್ ಅವರನ್ನು 3-0 ಅಂಕಗಳ ಅಂತರದಿಂದ ಮಣಿಸಿದ್ದಾರೆ.
91ಕೆಜಿ ವಿಭಾಗದಲ್ಲಿ ಮಾಜಿ ಇಂಡಿಯಾ ಓಪನ್ ಚಾಂಪಿಯನ್ ಸಂಜೀತ್ ಅವರು ಫ್ರಾನ್ಸ್‌ನವರೇ ಆದ ಸೊಹೆಬ್‌ರನ್ನು ಸೋಲಿಸಿ ಚಿನ್ನದ ಪದಕ ಪಡೆದಿದ್ದಾರೆ.
ಇವರಿಬ್ಬರನ್ನು ಹೊರತುಪಡಿಸಿದರೆ ಏಷ್ಯನ್ ಬೆಳ್ಳಿ ಪದಕ ವಿಜೇತ ಕವಿಂದರ್ ಸಿಂಗ್ ಬಿಶ್ತ್ 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ಥಳೀಯ ಬಾಕ್ಸರ್ ಸ್ಯಾಮ್ಯುಯೆಲ್ ಕಿಸ್ಟೋಹರಿ ಅವರ ವಿರುದ್ಧ 2-1 ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಈ ಟೂರ್ನಿಯಲ್ಲಿ ಭಾರತಕ್ಕೆ ಮೂರು ಕಂಚು ಕೂಡ ಸಂದಿದೆ. ಶಿವ ತಾಪ(63ಕೆಜಿ) ಸುಮಿತ್ ಸಂಗ್ವಾನ್(81), ಸತೀಶ್ ಕುಮಾರ್(+91) ವಿಭಾಗದಲ್ಲಿ ಸ್ಪರ್ಧಿಸಿ ಸೆಮಿಫೈನಲ್ನಲ್ಲಿ ಸೋಲು ಕಂಡು ಕಂಚಿಗೆ ತೃಪ್ತಿ ಪಡೆದು ಕೊಂಡಿದ್ದಾರೆ.