ಚೆನ್ನೈ: ವಿಶ್ವ ಬ್ಯಾಂಡ್ಮಿಂಟನ್ ಚಾಂಪಿಯನ್ ಶಿಪ್ನಲ್ಲಿ ಚಿನ್ನ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ವಿವಾಹವಾಗಬೇಕೆಂದು ತಮಿಳುನಾಡಿನ 70ರ ಹರೆಯದ ವೃದ್ಧ ರಾಮನಾಥಪುರಂ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾನೆ.
70 ವರ್ಷದ ಮಲೈಸಾಮಿ ಎಂಬ 24 ವರ್ಷದ ಸಿಂಧುರನ್ನು ವರಿಸಲು ಮನವಿ ಮಾಡಿ ಗಮನ ಸೆಳೆದ ವ್ಯಕ್ತಿ.
ಒಂದು ವೇಳೆ ಜಿಲ್ಲಾಡಳಿತ ಈ ಕುರಿತು ಸಿದ್ಧತೆಗೆ ಮುಂದಾಗದಿದ್ದರೆ, ತಾನು ಸಿಂಧು ಅವರನ್ನು ಅಪಹರಿಸಿ ಮದುವೆಯಾಗುತ್ತೇನೆ ಎಂದು ಆತ ಎಚ್ಚರಿಕೆ ನೀಡಿದ್ದಾನೆ.
ರಾಮನಾಥಪುರಂನಲ್ಲಿ ಜಿಲ್ಲಾಧಿಕಾರಿಯೊಂದಿಗೆ ನಡೆದ ಸಾರ್ವಜನಿಕರ ವಾರದ ಸಭೆಯಲ್ಲಿ ಈ ರೀತಿಯ ಅರ್ಜಿ ಸಲ್ಲಿಸಲಾಗಿದೆ. ಮಲೈಸ್ವಾಮಿ, ಪಿವಿ ಸಿಂಧು ಅವರ ಫೊಟೋ ನೀಡಿ ಮದುವೆಗೆ ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇಷ್ಟೇ ಅಲ್ಲ, ತನಗೆ ಇವಾಗ ಕೇವಲ 16 ವರ್ಷ! ನಾನು ಏಪ್ರಿಲ್ 4, 2004 ರಂದು ಹುಟ್ಟಿದ್ದೇನೆ. ನಾನು ಸಿಂಧು ಅವರ ವೃತ್ತಿ ಜೀವನದ ಬೆಳವಣಿಗೆಯಿಂದ ಆಕರ್ಷಿತನಾಗಿದ್ದೇನೆ. ಈಗ ಆಕೆಯನ್ನು ನನ್ನ ಜೀವನ ಸಂಗಾತಿಯಾಗಿ ಮಾಡಿಕೊಳ್ಳಲು ಬಯಸಿದ್ದೇನೆ ಎಂದು ಮನಸಿನ ಇಚ್ಚೆ ತೋಡಿಕೊಂಡಿದ್ದಾನೆ.