ನವದೆಹಲಿ: ಭಾರತದಲ್ಲಿ ಆಯೋಜನೆಯಾಗಿರುವ ಶೂಟಿಂಗ್ ವಿಶ್ವಕಪ್ನಲ್ಲಿ ಪಾಕಿಸ್ತಾನದ ಶೂಟರ್ಗಳಿಗೆ ಭಾರತ ವೀಸಾ ನಿರಾಕರಿಸಿರುವುದನ್ನು ಖಂಡಿಸಿ ಅಂತಾರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ಭಾರತ ಜೊತೆಗಿನ ಎಲ್ಲ ಮಾತುಕತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಒಲಂಪಿಕ್ಸ್ ಅರ್ಹತಾ ಸುತ್ತಿನ ಪುರುಷರ 25 ಮೀ. ರ‍್ಯಾಪಿಡ್ ಫೈರ್ ಸ್ಪರ್ಧೆ ಭಾರತದಲ್ಲಿ ಆಯೋಜನೆಯಾಗಿತ್ತು. ಒಲಂಪಿಕ್ಸ್ ಸಮಿತಿ ಈ ಸ್ಪರ್ಧೆಯನ್ನು ಸಹ ರದ್ದುಗೊಳಿಸಿದೆ.
ನವದೆಹಲಿಯಲ್ಲಿ ಫೆ. 20ರಿಂದ 28ರ ತನಕ ಶೂಟಿಂಗ್ ವಿಶ್ವಕಪ್ ಆಯೋಜನೆಯಾಗಿದೆ. ಪುಲ್ವಾಮಾದಲ್ಲಿನ ಉಗ್ರ ದಾಳಿ ಖಂಡಿಸಿ ಪಾಕಿಸ್ತಾನದ ಶೂಟರ್ಗಳಿಗೆ ಭಾರತ ವೀಸಾ ನಿರಾಕರಿಸಿತ್ತು.