ETV Bharat / sitara

ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್​:​ 'ಯುವರತ್ನ' ರಿಲೀಸ್​ಗೆ​ ಡೇಟ್​ ಫಿಕ್ಸ್​ - Yuvaratna film release date fix

'ಯುವರತ್ನ' ಸಿನಿಮಾ ಬಿಡುಗಡೆ ಬಗ್ಗೆ ಬಿಗ್ ನ್ಯೂಸ್‌ವೊಂದು ಹೊರಬಿದ್ದಿದ್ದು, ಸಿನಿಮಾ ಬಿಡುಗಡೆ ದಿನವನ್ನು ಚಿತ್ರತಂಡ ಸ್ಪಷ್ಟಪಡಿಸಿದೆ.

ಯುವರತ್ನ ಸಿನಿಮಾ
ಯುವರತ್ನ ಸಿನಿಮಾ
author img

By

Published : Dec 7, 2020, 5:07 PM IST

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ನಟನೆಯ ಯುವರತ್ನ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್​​ವೊಂದು ಸಿಕ್ಕಿದ್ದು, ಸಿನಿಮಾ ಬಿಡುಗಡೆ ದಿನವನ್ನು ಚಿತ್ರತಂಡ ಸ್ಪಷ್ಟಪಡಿಸಿದೆ.

ಲಾಕ್​ಡೌನ್​ನಿಂದಾಗಿ ಈ ವರ್ಷ ಯಾವುದೇ ದೊಡ್ಡ ಬಜೆಟ್​ನ ಸಿನಿಮಾಗಳು ಬಿಡುಗಡೆಯಾಗಿಲ್ಲ. ಈ ವರ್ಷ ಬಿಡುಗಡೆಯಾಗಬೇಕಿದ್ದ ದೊಡ್ಡ ಚಿತ್ರಗಳೆಲ್ಲಾ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದ್ದು,​ ಜನವರಿ ಮೊದಲ ವಾರದಲ್ಲಿ ಧ್ರುವ ಸರ್ಜಾ ಅಭಿನಯದ 'ಪೊಗರು' ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಪೊಗರು ಬಿಡುಗಡೆಯಾದ ಎರಡು ವಾರಗಳ ನಂತರ ಪುನೀತ್​ ಅಭಿನಯದ 'ಯುವರತ್ನ' ಸಿನಿಮಾ ರಿಲೀಸ್​ ಆಗಲಿದೆ. ಜನವರಿ 22ರಂದು ಚಿತ್ರ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಯೋಚಿಸಿದ್ದು, ಒಂದು ಪಕ್ಷ ಈ ಡೇಟ್​ ಮಿಸ್​ ಆದ್ರೆ ಒಂದೆರಡು ವಾರಗಳ ಅಂತರದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಚಿತ್ರತಂಡ ಈಗಾಗಲೇ ಸೂಕ್ತ ತಯಾರಿ ನಡೆಸಿದೆಯಂತೆ.

ಇನ್ನು 'ಯುವರತ್ನ' ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗಷ್ಟೇ ಯುವರತ್ನ ಸಿನಿಮಾದ 'ಪವರ್​ ಆಫ್​ ಯೂಥ್​' ಎಂಬ ಹಾಡು ಎರಡು ಭಾಷೆಯಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.

ಸಂತೋಷ್​ ಆನಂದ ರಾಮ್​ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪುನೀತ್​ ರಾಜಕುಮಾರ್​ಗೆ ನಾಯಕಿಯಾಗಿ ಸಾಯೇಷಾ ಸೆಹಗಲ್​ ನಟಿಸಿದ್ದು, ಧನಂಜಯ್​ ಸೇರಿದಂತೆ ಹಲವರು ಅಭಿನಯಿದ್ದಾರೆ. ಹೊಂಬಾಳೆ ಪ್ರೊಡಕ್ಷನ್​​ನಡಿ ವಿಜಯ್​ಕುಮಾರ್​ ಕಿರಗಂದೂರು ನಿರ್ಮಾಪಕರಾಗಿದ್ದು, ಥಮನ್​ ಸಂಗೀತ ಸಂಯೋಜಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.