ETV Bharat / sitara

ಏಪ್ರಿಲ್​​ 20ರಿಂದ 'ವೀಕೆಂಡ್​ ವಿತ್​​​​​​​​​​ ರಮೇಶ್​​' ಸೀಸನ್​​ 4 ಪ್ರಸಾರ

ರಮೇಶ್ ಅರವಿಂದ್ ನಡೆಸಿಕೊಡುತ್ತಿರುವ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್​​​​​​​​ ರಮೇಶ್' ಸೀಸನ್ ಏಪ್ರಿಲ್ 20ರಿಂದ ಆರಂಭವಾಗುತ್ತಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.30ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

author img

By

Published : Apr 10, 2019, 5:07 PM IST

ರಮೇಶ್ ಅರವಿಂದ್​​

ಖಾಸಗಿ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ 'ವೀಕೆಂಡ್ ವಿತ್​ ರಮೇಶ್' ಕೂಡಾ ಒಂದು. ಈಗಾಗಲೇ ಕಾರ್ಯಕ್ರಮದ 3 ಸೀಸನ್​ಗಳು ಪ್ರಸಾರವಾಗಿವೆ. ನಟ ರಮೇಶ್ ಅರವಿಂದ್ ಈ ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದಾರೆ.

ಇದೀಗ ಸೀಸನ್ 4 ಕೂಡಾ ಆರಂಭವಾಗುತ್ತಿದ್ದು, ಇದೇ ತಿಂಗಳ 20ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. 20ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಬಾರಿ ಈ ಕಾರ್ಯಕ್ರಮ ವಿಶೇಷತೆಯಿಂದ ಕೂಡಿದೆ. ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಮೇರು ವ್ಯಕ್ತಿತ್ವಕ್ಕೆ ರೆಡ್ ಹಾಟ್ ಸೀಟ್ ಕಾದಿದೆ. ಸಾಧಕರ ಸಾಧನೆ, ಅವರ ಸ್ನೇಹಿತರು, ಕುಟುಂಬದವರು, ಅವರ ಹಳೆಯ ನೆನಪುಗಳು, ಬಾಲ್ಯ, ಭಾವುಕ ಕ್ಷಣ, ತಮಾಷೆ, ನಗು ಹೀಗೆ ಎಲ್ಲವನ್ನೂ ನೆನೆಪಿಸಿಕೊಡಲಿದ್ದಾರೆ ರಮೇಶ್.

ವಿಶೇಷವೆಂದರೆ ಕಳೆದ ಮೂರು ಸೀಸನ್ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರಸಾರವಾಗುತ್ತಿತ್ತು. ಈ ಬಾರಿ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ವೀಕೆಂಡ್​​ನಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳು ವೀಕ್ಷಕರಿಗೆ ಕಾದಿವೆ. ಹೀಗಾಗಿ ಸಮಯ ಕೂಡಾ ಬದಲಾಗಿದೆ ಎನ್ನಲಾಗುತ್ತಿದೆ.

Intro:ವೀಕೆಂಡ್ ವಿಥ್ ರಮೇಶ್ ಸೀಸನ್ 4 ರ ಆರಂಭದ ದಿನಾಂಕವನ್ನು ವಾಹಿನಿ ರಿವಿಲ್ ಮಾಡಿದೆ.
ಹೌದು, ಇದೇ ಏಪ್ರಿಲ್ 20 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.30 ಕ್ಕೆ ಪ್ರಸಾರವಾಗಲಿದೆ.Body:ಇದುವರೆಗೂ ಕುತೂಹಲ ಮೂಡಿಸಿದ್ದ ಸೀಸನ್ 4 ರ ದಿನಾಂಕ ಕೊನೆಗೂ ಬಿಡುಗಡೆಯಾಗಿದೆ. ಸಾಧಕರ ಸೀಟ್ ಈ ಬಾರಿ ವಿಶೇಷವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಮೇರು ವ್ಯಕ್ತಿತ್ವಕ್ಕೆ ರೆಡ್ ಹಾಟ್ ಸೀಟ್ ಕಾದಿದೆ.
ಸಾಧಕರ ಸಾಧನೆ, ಅವರ ಸ್ನೇಹಿತರು, ಕುಟುಂಬದವರು, ಅವರ ಹಳೆಯ ನೆನಪುಗಳು, ಬಾಲ್ಯ, ಭಾವುಕ ಕ್ಷಣ, ತಮಾಷೆ, ನಗು ಹೀಗೆ ಎಲ್ಲವನ್ನೂ ನೆನೆಪಿಸಿಕೊಡಲಿದ್ದಾರೆ ರಮೇಶ್.
Conclusion:ವಿಶೇಷವೆಂದರೆ ಕಳೆದ ಮೂರು ಸೀಸನ್ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರಸಾರವಾಗುತ್ತಿತ್ತು. ಈ ಬಾರಿ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.
ವೀಕೆಂಡ್ ಹಲವು ಮನರಂಜನಾ ಕಾರ್ಯಕ್ರಮಗಳು ವೀಕ್ಷಕರಿಗೆ ಕಾದಿವೆ. ಹೀಗಾಗಿ ಸಮಯ ಕೂಡ ಬದಲಾಗಿರಬಹುದು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.