ETV Bharat / sitara

50 ಎಪಿಸೋಡ್ ಪೂರೈಸಿದ 'ಪ್ರೇಮಲೋಕ'... ಗುಳಿಕೆನ್ನೆ ಹುಡುಗನಿಗೆ ಇನ್ನಷ್ಟು ಹೆಣ್ಮಕ್ಳು ಫಿದಾ

'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಖ್ಯಾತರಾದ ಗುಳಿಕೆನ್ನೆ ಚೆಲುವ ವಿಜಯ್ ಸೂರ್ಯ ಸದ್ಯಕ್ಕೆ ಪ್ರೇಮಲೋಕ ಧಾರಾವಾಹಿಯಲ್ಲಿ ನಟಿಸುತ್ತಿದ್ದು ಈ ಧಾರಾವಾಹಿ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಅಂಕಿತಾ ನವ್ಯಾಗೌಡ ಈ ಧಾರಾವಾಹಿಯಲ್ಲಿ ನಾಯಕಿ ಆಗಿ ನಟಿಸಿದ್ದಾರೆ.

ಪ್ರೇಮಲೋಕ
author img

By

Published : Oct 4, 2019, 5:43 PM IST

Updated : Oct 4, 2019, 7:06 PM IST

ಕಿರುತೆರೆಯ ಗುಳಿಕೆನ್ನೆ ಚೆಲುವ ವಿಜಯ್ ಸೂರ್ಯ ನಾಯಕನಾಗಿ ನಟಿಸಿರುವ ಪ್ರೇಮಲೋಕ ಧಾರಾವಾಹಿ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ನಾಯಕ ಸೂರ್ಯನ ಪಾತ್ರದಲ್ಲಿ ನಟಿಸಿದ್ದಾರೆ.

star suvarna
ಫೋಟೋಕೃಪೆ: ಸ್ಟಾರ್ ಸುವರ್ಣ

ಇನ್ನು ವಿಜಯ್ ಸೂರ್ಯ ಅವರಿಗೆ ಅಂಕಿತಾ ನವ್ಯಾಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. 'ಪ್ರೇಮಲೋಕ' ದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಂಕಿತಾ ಈ ಧಾರಾವಾಹಿಗಾಗಿ ಪ್ರೇರಣಾ ಆಗಿ ಬದಲಾಗಿದ್ದಾರೆ. ಈಗಾಗಲೇ 50 ದಿನಗಳನ್ನು ಪೂರೈಸಿರುವ ಪ್ರೇಮಲೋಕ ತನ್ನ ಪ್ರೋಮೋದಿಂದಲೇ ಸಾಕಷ್ಟು ಸುದ್ದಿ ಮಾಡಿತ್ತು. ವಿಭಿನ್ನ ಶೈಲಿಯ ಕಥಾ ಹಂದರವನ್ನು ಒಳಗೊಂಡಿರುವ ಪ್ರೇಮಲೋಕದಲ್ಲಿ ವಿಜಯ್ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಅಗ್ನಿಸಾಕ್ಷಿ ಧಾರಾವಾಹಿಯ ಸಿದ್ಧಾರ್ಥ್ ಆಗಿ ಹುಡುಗಿಯರ ಮನ ಕದ್ದಿರುವ ಚಾಕೋಲೇಟ್​​​ ಬಾಯ್ ಸೂರ್ಯನಾಗಿ ಬದಲಾದ ನಂತರವೂ ಹೆಣ್ಣು ಮಕ್ಕಳು ಅವರನ್ನು ಮರೆತಂತಿಲ್ಲ. ಇನ್ನು ಮೊದಲ ಧಾರಾವಾಹಿಯಲ್ಲೇ ಕಿರುತೆರೆ ವೀಕ್ಷಕರ ಮನ ಕದ್ದ ಅಂಕಿತಾ ನವ್ಯಾ ಗೌಡ ನಟನಾ ಲೋಕದಲ್ಲಿ ಮಿಂಚುವುದಂತೂ ನಿಜ ಎಂದು ಧಾರಾವಾಹಿ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

  • " class="align-text-top noRightClick twitterSection" data="">

ಇನ್ನು ವಿಜಯ ಸೂರ್ಯ ತಂದೆಯಾಗಿ ಬಾಲರಾಜ್ ಮತ್ತು ತಾಯಿಯಾಗಿ ವಾಣಿಶ್ರೀ ಬಣ್ಣ ಹಚ್ಚಿದ್ದಾರೆ. ನಾಯಕಿ ಅಂಕಿತಾ ನವ್ಯಾಗೌಡ ತಂದೆಯಾಗಿ ರವಿ ಭಟ್ ಮತ್ತು ತಾಯಿಯಾಗಿ ಮಾಲತಿ ಸರದೇಶ್ ಪಾಂಡೆ ಅಭಿನಯಿಸಿದ್ದಾರೆ. ಜೊತೆಗೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲೇಡಿ ವಿಲನ್ ಎಂದೇ ಖ್ಯಾತರಾದ ಅನಿಕಾ ಸಿಂಧ್ಯಾ ನಾಯಕನ ಅಕ್ಕನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

Intro:Body:ಕಿರುತೆರೆಯ ಗುಳಿ ಕೆನ್ನೆಯ ಚೆಲುವ ಎಂದೇ ಜನಪ್ರಿಯವಾಗಿರುವ ವಿಜಯ್ ಸೂರ್ಯ ನಾಯಕನಾಗಿ ನಟಿಸಿರುವ ಪ್ರೇಮಲೋಕ ಧಾರಾವಾಹಿ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರೇಮಲೋಕ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ನಾಯಕ ಸೂರ್ಯನಾಗಿ ಕಾಣಿಸಿಕೊಂಡಿದ್ದು ಇವರಿಗೆ ನಾಯಕಿಯಾಗಿ ಅಂಕಿತಾ ನವ್ಯಾ ಗೌಡ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿರುವ ಅಂಕಿತಾ ನವ್ಯಾ ಗೌಡ ಪ್ರೇಮಲೋಕಕ್ಕಾಗಿ ಪ್ರೇರಣಾ ಆಗಿ ಬದಲಾಗಿದ್ದಾರೆ.

ಈಗಾಗಲೇ 50 ದಿನಗಳನ್ನು ಪೂರೈಸಿರುವ ಪ್ರೇಮಲೋಕವು ತನ್ನ ಪ್ರೋಮೋದಿಂದಲೇ ಸಾಕಷ್ಟು ಸುದ್ದಿ ಮಾಡಿತ್ತು. ವಿಭಿನ್ನ ಶೈಲಿಯ ಕಥಾ ಹಂದರವನ್ನು ಒಳಗೊಂಡಿರುವ ಪ್ರೇಮ ಲೋಕದಲ್ಲಿ ಗುಳಿ ಕೆನ್ನೆಯ ಹುಡುಗ ವಿಜಯ್ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಅಗ್ನಿಸಾಕ್ಷಿ ಧಾರಾವಾಹಿಯ ಸಿದ್ಧಾರ್ಥ್ ಆಗಿ ಹುಡುಗಿಯರ ಮನ ಕದ್ದಿರುವ ಚಾಕಲೇಟ್ ಬಾಯ್ ಸೂರ್ಯನಾಗಿ ಬದಲಾದ ನಂತರವೂ ಹೆಣ್ ಮಕ್ಕಳು ಅವರನ್ನು ಮರೆತಂತಿಲ್ಲ! ಇನ್ನು ಮೊದಲ ಧಾರಾವಾಹಿಯಲ್ಲೇ ಕಿರುತೆರೆ ವೀಕ್ಷಕರ ಮನ ಕದ್ದ ಅಂಕಿತಾ ನವ್ಯಾ ಗೌಡ ನಟನಾ ಲೋಕದಲ್ಲಿ ಮಿಂಚುವುದಂತೂ ನಿಜ!

ಇನ್ನು ವಿಜಯ ಸೂರ್ಯ ತಂದೆಯಾಗಿ ಬಾಲರಾಜ್ ಮತ್ತು ತಾಯಿಯಾಗಿ ವಾಣಿಶ್ರೀ ಬಣ್ಣ ಹಚ್ಚಿದ್ದರೆ ನಾಯಕಿ ಅಂಕಿತಾ ನವ್ಯಾ ಗೌಡ ತಂದೆಯಾಗಿ ರವಿ ಭಟ್ ಮತ್ತು ತಾಯಿಯಾಗಿ ಮಲತಿ ಸರದೇಶ್ ಪಾಂಡೆ ಅಭಿನಯಿಸಿದ್ದಾರೆ. ಜೊತೆಗೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲೇಡಿ ವಿಲನ್ ಎಂದೇ ಖ್ಯಾತಿ ಪಡೆದಿರುವ ಅನಿಕಾ ಸಿಂಧ್ಯಾ ನಾಯಕನ ಅಕ್ಕನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.Conclusion:
Last Updated : Oct 4, 2019, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.