ಫೆಬ್ರವರಿ 28 ಭಾನುವಾರದಿಂದ ಬಿಗ್ಬಾಸ್- 8 ಕಾರ್ಯಕ್ರಮ ಆರಂಭವಾಗಿದೆ. ಈ ಬಾರಿ 17 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಶುಭ ಪೂಂಜಾ, ನಿಧಿ ಸುಬ್ಬಯ್ಯ, ಗೀತಾಭಾರತಿ ಭಟ್ನಂತ ಬೆಳ್ಳಿತೆರೆ, ಕಿರುತೆರೆ ನಟ-ನಟಿಯರು ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದು ಈಗಾಗಲೇ ದೊಡ್ಮನೆಯಲ್ಲಿ ಟಾಸ್ಕ್ ಕೂಡಾ ಆರಂಭವಾಗಿದೆ.
ಇದನ್ನೂ ಓದಿ: 'ಧಮಾಕಾ' ಚಿತ್ರದಲ್ಲಿನ ತಮ್ಮ ಪಾತ್ರದ ಪರಿಚಯ ಮಾಡಿಸಿದ ಕಾರ್ತಿಕ್ ಆರ್ಯನ್
ಈ ಬಾರಿ ಬಿಗ್ ಬಾಸ್ ಮನೆಯನ್ನು ಬಹಳ ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಇದಕ್ಕಾಗಿ ಹಲವು ತಿಂಗಳ ಕಾಲ ವಿನ್ಯಾಸ ಮಾಡಲಾಗಿದೆ. ಮನೆಯ ಅಂದ ಚಂದಕ್ಕೆ ಬಣ್ಣ ಹಾಗೂ ಪರಿಸರವನ್ನು ಹೊಂದಿಸಲಾಗಿದೆ. ವೀಕ್ಷಕರು ಕೂಡಾ ಬಿಗ್ಬಾಸ್ ಮನೆ ಒಳಗೆ ಪ್ರವೇಶಿಸಬಹುದಾಗಿದೆ. ನೀವು ಸ್ಪರ್ಧಿ ಅಲ್ಲದಿದ್ದರೂ ಕುಳಿತ ಸ್ಥಳದಿಂದಲೇ 3 ಡಿ ತಂತ್ರಜ್ಞಾನದ ಮೂಲಕ ಬಿಗ್ ಬಾಸ್ ಮನೆಯನ್ನು ನೋಡಬಹುದಾಗಿದೆ. ಕಲರ್ಸ್ ಕನ್ನಡ ವೆಬ್ಸೈಟ್ನಲ್ಲಿ ಬಿಗ್ ಬಾಸ್ ಮನೆಯ 3ಡಿ ವ್ಯೂ ಹಾಕಲಾಗಿದೆ. ಮನೆಯೊಳಗಿನ ಸ್ವಿಮ್ಮಿಂಗ್ ಪೂಲ್, ಲಿವಿಂಗ್ ರೂಂ, ಅಡುಗೆ ಮನೆ, ಸ್ಟೋರ್ ರೂಂ, ಜಿಮ್, ದೇವರ ಮನೆ ಹೀಗೆ ಮನೆಯ ಎಲ್ಲಾ ಸ್ಥಳಗಳನ್ನು ನೀವು 3ಡಿ ತಂತ್ರಜ್ಞಾನದ ಮೂಲಕ ಕುಳಿತಲ್ಲಿಯೇ ಸುತ್ತಾಡಬಹುದು. ಇದನ್ನು ಹೈ ಡೆಫಿನೇಷನ್ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದ್ದು, ಮನೆಯೊಳಗಿನ ಪ್ರತಿಯೊಂದು ವಸ್ತುವನ್ನೂ ಹತ್ತಿರದಿಂದ ವೀಕ್ಷಿಸಿದಂತಾಗುತ್ತದೆ.