ಮಳೆ ಹಾಗೂ ಚಳಿ ನಡುವೆ ಬೆಚ್ಚಗೆ ಇರಲು ಅಗ್ನಿಸಾಕ್ಷಿ ಸನ್ನಿಧಿ ಔಷಧವೊಂದನ್ನು ಕಂಡುಕೊಂಡಿದ್ದಾರೆ. ಇದು ಕೊರೊನಾ ಬಾರದಂತೆ ತಡೆಯುವ ಕೂಡಾ ಆಗಿದೆ. ಈ ಕಷಾಯ ಮಾಡುವ ವಿಡಿಯೋವನ್ನು ವೈಷ್ಣವಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
![Agnisakshi fame Vaishnavi Gowda](https://etvbharatimages.akamaized.net/etvbharat/prod-images/kn-bng-07-vaishnavigowda-kashaya-vis-ka10018_20072020190443_2007f_1595252083_227.jpg)
ಇಂದು ಕೊರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಹೀಗಾಗಿ ನಾವು ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು. ಎಲ್ಲಕ್ಕಿಂತಲೂ ಮುಖ್ಯವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಕ್ರಮಗಳ ಕುರಿತು ಚಿಂತಿಸಬೇಕು. ಕೊರೊನಾ ವೈರಸ್ ಎಂಬ ಮಹಾಮಾರಿ ಹರಡದಂತೆ ಎಲ್ಲರೂ ಜಾಗ್ರತೆ ವಹಿಸಬೇಕಾದುದು ತುಂಬಾ ಅನಿವಾರ್ಯ. ಅದರಲ್ಲೂ ಸೆಲಬ್ರಿಟಿಗಳು ಸದಾ ಜಾಗೃತಿ ಮೂಡಿಸುತ್ತಿರುವಲ್ಲಿ ಕಾರ್ಯ ನಿರತರಾಗಿದ್ದು , ಸಾಮಾಜಿಕ ಜಾಲತಾಣಗಳ ಮೂಲಕ ಈ ಕಾರ್ಯ ಮಾಡುತ್ತಿದ್ದಾರೆ.
ಈ ಹಿಂದೆ ಕಿರುತೆರೆ ನಟ ಕಿರಣ್ ರಾಜ್, ನಟಿ ಅನುಶ್ರೀ ಜನಾರ್ಧನ್ ಮಾಸ್ಕ್ ಧರಿಸಿ ಎಂದು ಕರೆ ನೀಡಿದ್ದರು. ಇದೀಗ ವೈಷ್ಣವಿ ಗೌಡ ಸರದಿ. ಕಷಾಯ ಮಾಡುವ ವಿಡಿಯೋವನ್ನು ವೈಷ್ಣವಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಮಾತ್ರವಲ್ಲ ಕಷಾಯ ಕುಡಿದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಎಂದು ಆಕೆ ಮನವಿ ಮಾಡಿದ್ದಾರೆ. ಶುಂಠಿ , ಅರಿಶಿಣ , ನೆಲ್ಲಿಕಾಯಿ ಮುಂತಾದ ನೈಸರ್ಗಿಕವಾಗಿ ಸಿಗುವ ಮನೆಮದ್ದುಗಳಿಂದ ವೈಷ್ಣವಿ ಈ ಕಷಾಯ ತಯಾರಿಸಿದ್ದಾರೆ.