ETV Bharat / sitara

ನಟನೆಯಷ್ಟೇ ಅಲ್ಲ, ನಿರೂಪಕಿಯಾಗಿ ಕೂಡಾ ನಿಮ್ಮ ಮುಂದೆ ಬರಲಿದ್ದಾರೆ ಉಮಾಶ್ರೀ..! - ಚಿಣ್ಣರ ಚಿಲಿಪಿಲಿ ನಡೆಸಿಕೊಡಲಿರುವ ಉಮಾಶ್ರೀ

ಇದುವರೆಗೂ ಆ್ಯಕ್ಟಿಂಗ್ ಮೂಲಕ ನಿಮ್ಮನ್ನೆಲ್ಲಾ ರಂಜಿಸಿದ ನಟಿ ಉಮಾಶ್ರೀ ಇದೀಗ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಚಿಣ್ಣರ ಚಿಲಿಪಿಲಿ' ಎಂಬ ಮಕ್ಕಳ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Umashree
ಉಮಾಶ್ರೀ
author img

By

Published : Dec 17, 2019, 7:11 PM IST

ಸ್ಯಾಂಡಲ್​​ವುಡ್ ಖ್ಯಾತ ನಟಿ, ರಾಜಕಾರಣಿ ಉಮಾಶ್ರೀ ಅವರು ಕಿರುತೆರೆ ಧಾರಾವಾಹಿಯೊಂದರಲ್ಲಿ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಉಮಾಶ್ರೀ ಪುಟ್ಮಲ್ಲಿ ಪಾತ್ರಧಾರಿಯಾಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಆ್ಯಕ್ಟಿಂಗ್ ಜೊತೆಗೆ ಇದೀಗ ಉಮಾಶ್ರೀ, ನಿರೂಪಕಿಯಾಗಿ ನಿಮ್ಮ ಮುಂದೆ ಬರಲಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಚಿಣ್ಣರ ಚಿಲಿಪಿಲಿ' ಎಂಬ ಮಕ್ಕಳ ಕಾರ್ಯಕ್ರಮವನ್ನು ಉಮಾಶ್ರೀ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮೊದಲ ಸೀಸನನ್ನು ಪಾಪ ಪಾಂಡು ಧಾರಾವಾಹಿ ಖ್ಯಾತಿಯ ನಟಿ ಶಾಲಿನಿ ನಡೆಸಿಕೊಟ್ಟಿದ್ದರು. ಇದೀಗ ಉಮಾಶ್ರೀ, ಈ ಎರಡನೇ ಸೀಸನ್ ನಡೆಸಿಕೊಡಲಿದ್ದಾರೆ.

'ಅನುಭವ' ಚಿತ್ರದ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಉಮಾಶ್ರೀ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದುವರೆಗೂ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಂದಹಾಗೆ 'ಚಿಣ್ಣರ ಚಿಲಿಪಿಲಿ' ಕಾರ್ಯಕ್ರಮ ಪ್ರಸಾರವಾಗುವ ದಿನಾಂಕವನ್ನು ವಾಹಿನಿ ಶೀಘ್ರದಲ್ಲೇ ತಿಳಿಸಲಿದೆ.

Intro:Body:ನಟನೆಯಷ್ಟೇ ಅಲ್ಲ ನಿರೂಪಕಿಯಾಗಿ ಕೂಡ ನಿಮ್ಮ ಮುಂದೆ ಬರಲಿದ್ದಾರೆ ನಟಿ ಉಮಾಶ್ರೀ.
ಕನ್ನಡದ ಹೆಸರಾಂತ ನಟಿ, ರಾಜಕಾರಣಿ ಉಮಾಶ್ರೀ ಅವರು ಕಿರುತೆರೆಗೆ ಬರುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಆರತಿಗೊಬ್ಬ ಕೀರ್ತಿಗೊಬ್ಬದಲ್ಲಿ ಪುಟ್ನಲ್ಲಿ ಪಾತ್ರಧಾರಿಯಾಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಉಮಾಶ್ರೀ ಸಜ್ಜಾಗಿದ್ದಾರೆ.

ಇದೀಗ ಉಮಾಶ್ರೀ ಅವರು ನಿರೂಪಕಿಯಾಗಿ ನಿಮ್ಮ ಮುಂದೆ ಬರಲಿದ್ದಾರೆ. ಆಶ್ಚರ್ಯಪಡಬೇಡಿ! ಇದು ಸತ್ಯ. ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಮಕ್ಕಳ ಶೋ ಚಿಣ್ಣರ ಚಿಲಿಪಿಲಿಯನ್ನು ನಿರೂಪಣೆ ಮಾಡುತ್ತಿರುವುದು ಬೇರಾರೂ ಅಲ್ಲ, ಇದೇ ಪುಟ್ಮಲ್ಲಿ ಆಲಿಯಾಸ್ ಉಮಾಶ್ರೀ! ಈ ಮೊದಲು ಪಾಪಾ ಪಾಂಡು ಪಾಚು ಎಂದೇ ಜನಪ್ರಿಯರಾಗಿದ್ದ ಶಾಲಿನಿ ಅವರು ಈ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಇದೀಗ ಆ ಜಾಗದಲ್ಲಿ ಉಮಾಶ್ರೀ ಬಂದಿದ್ದಾರೆ.

ಉಮಾಶ್ರೀ ಅವರು ನಟಿಯಾಗಿ ಸಾಕಷ್ಟು ಹೆಸರು ಮಾಡಿದ್ದಾರೆ ನಿಜ. ಧಾರವಾಹಿಯಲ್ಲೂ ಬಣ್ಣ ಹಚ್ಚುತ್ತಿರುವುದು ಕೂಡಾ ಇದೇ ಮೊದಲಲ್ಲ. ಆದರೆ ರಿಯಾಲಿಟಿ ಶೋ ಒಂದರ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು ಎಂದರೆ ತಪ್ಪಲ್ಲ.

ಚಂದನ ವನದಲ್ಲಿ ಹಾಸ್ಯ ನಟಿ ಎಂದೇ ಬಿರುದಾಂಕಿತರಾಗಿರುವ ಉಮಾಶ್ರೀ ಅವರು ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅದ್ಭುತ ಪ್ರತಿಭೆ. ಇದೀಗ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದ ನಿರೂಪಕರಾಗಿ ಉಮಾಶ್ರೀ ಮಿಂಚಲಿದ್ದಾರೆ. ಅಂದ ಹಾಗೇ ಈ ಕಾರ್ಯಕ್ರಮ ಅದ್ಯಾವಾಗ ಅರಂಭವಾಗಲಿದೆ ಎಂಬ ವಿಚಾರ ತಿಳಿಯಬೇಕಾಗಿದೆ.

https://www.instagram.com/p/B6HrCofgw0m/?igshid=m3u0f4oo93k5Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.