ಈ ವಾರದ 'ವೀಕೆಂಡ್ ವಿತ್ ರಮೇಶ್' ಅತಿಥಿಗಳು ಯಾರೆಂದು ವಾಹಿನಿ ರಿವೀಲ್ ಮಾಡಿದೆ. ಭಾರತೀಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವ ಶಂಕರ್ ಬಿದರಿ ಮತ್ತು ಟೈಗರ್ ಅಶೋಕ್ ಕುಮಾರ್ ಈ ವಾರ ಸಾಧಕರ ಸೀಟ್ ಮೇಲೆ ಕುಳಿತುಕೊಳ್ಳಲಿದ್ದಾರೆ.
ಶಂಕರ್ ಬಿದರಿ ಬಾಗಲಕೋಟೆ ಮೂಲದವರು. ಅವರ ಪತ್ನಿ ಉಮಾದೇವಿ ವೃತ್ತಿಯಿಂದ ವೈದ್ಯರು. ಇವರ ಮಗಳು ವಿಜಯಲಕ್ಷ್ಮಿ ಬಿದರಿ ಐಎಎಸ್ ಟಾಪರ್. ಅಳಿಯ ಮಲ್ಲಿಕಾರ್ಜುನ ಪ್ರಸನ್ನ ಮುಂಬೈನಲ್ಲಿ ಡಿಸಿಪಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗ ವಿಜಯೇಂದ್ರ ಬಿದರಿ ತಿರುನೆಲ್ವೇಲಿಯಲ್ಲಿ ಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೊಸೆ ರೋಹಿಣಿ ಸೇಲಂನಲ್ಲಿ ಡಿಸಿಯಾಗಿದ್ದಾರೆ. 1978 ರಿಂದ 2012 ರವರೆಗೆ ಭಾರತೀಯ ಪೊಲೀಸ್ ಇಲಾಖೆಯಲ್ಲಿ ಶಂಕರ್ ಬಿದರಿ ಸೇವೆ ಸಲ್ಲಿಸಿದ್ದಾರೆ.
ಟೈಗರ್ ಅಶೋಕ್ ಕುಮಾರ್ 1977ರಲ್ಲಿ ಕರ್ನಾಟಕ ಪೊಲೀಸ್ ಸೇವೆಗೆ ಸೇರಿದರು. ತಮ್ಮ ಸೇವಾ ಅವಧಿಯಲ್ಲಿ 18 ಎನ್ಕೌಂಟರ್ ಮಾಡಿದ್ದಾರೆ. ಇವರ ಅವಧಿಯಲ್ಲಿ ಕಮ್ಮನಹಳ್ಳಿ ಎನ್ಕೌಂಟರ್ ಕೇಸ್ ಹೆಚ್ಚು ಸದ್ದು ಮಾಡಿತ್ತು. ಈ ಹಿಂದೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ರವಿ ಡಿ. ಚನ್ನಣ್ಣನವರ್ ಬಂದಿದ್ದರು.
ಶನಿವಾರ ರಾತ್ರಿ 9.30ಕ್ಕೆ ಶಂಕರ್ ಬಿದರಿ ಸಂಚಿಕೆ ಮತ್ತು ಭಾನುವಾರ ರಾತ್ರಿ 9.30ಕ್ಕೆ ಟೈಗರ್ ಅಶೋಕ್ ಕುಮಾರ್ ಸಂಚಿಕೆ ಪ್ರಸಾರ ಆಗಲಿದೆ.