ETV Bharat / sitara

'ಪ್ರೇಮಲೋಕ' ಧಾರಾವಾಹಿ ಬಗ್ಗೆ ಶಿಶಿರ್ ಶಾಸ್ತ್ರಿ ಹೇಳಿದ್ದೇನು..? - Premaloka serial fame Vijya surya

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ರೇಮಲೋಕ' ಧಾರಾವಾಹಿ ಬಗ್ಗೆ ನಟ ಶಿಶಿರ್ ಶಾಸ್ತ್ರಿ ಮಾತನಾಡಿದ್ದಾರೆ. ಧಾರಾವಾಹಿ ವೀಕ್ಷಕರಿಗೆ ಬಹಳ ಮೆಚ್ಚುಗೆಯಾಗಿದ್ದು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನೊಂದಿದೆ.

Twist in Premaloka serial
ಶಿಶಿರ್ ಶಾಸ್ತ್ರಿ
author img

By

Published : Jul 11, 2020, 12:37 PM IST

ವಿಜಯ್ ಸೂರ್ಯ ನಟನೆಯ 'ಪ್ರೇಮಲೋಕ' ಧಾರಾವಾಹಿ ದಿನೇ ದಿನೆ ಹೆಚ್ಚು ವೀಕ್ಷಕರನ್ನು ಪಡೆದುಕೊಳ್ಳುತ್ತಿದೆ. ಲಾಕ್​​​ಡೌನ್​ ನಂತರ ಜೂನ್ 1 ರಿಂದ ಮತ್ತೆ ಚಿತ್ರೀಕರಣ ಆರಂಭಿಸಿದ ಧಾರಾವಾಹಿ ತಂಡ, ಹೊಸ ಸಂಚಿಕೆಗಳೊಂದಿಗೆ ಜೂನ್‌ 29 ರಿಂದ ಪ್ರಸಾರ ಆರಂಭಿಸಿದೆ.

ಶಿಶಿರ್ ಶಾಸ್ತ್ರಿ

ಲಾಕ್ ಡೌನ್​ಗೂ ಮುನ್ನ ಈ ಧಾರಾವಾಹಿ ಟ್ವಿಸ್ಟ್ ಪಡೆದುಕೊಂಡಿತ್ತು. ಆದರೆ ಅಷ್ಟರಲ್ಲಿ ಲಾಕ್​ಡೌನ್ ಆರಂಭವಾಗಿ ಧಾರಾವಾಹಿ ಚಿತ್ರೀಕರಣ ನಿಂತಿದ್ದರಿಂದ ಈ ಟ್ವಿಸ್ಟ್ ಏನು ಎಂಬುದು ಸಸ್ಪೆನ್ಸ್ ಆಗಿ ಉಳಿದಿತ್ತು. 'ಪ್ರೇಮಲೋಕ' ಧಾರಾವಾಹಿಗೆ ಶಿಶಿರ್ ಶಾಸ್ತ್ರಿ, ಸುಧೀರ್ ಪಾತ್ರಧಾರಿಯಾಗಿ‌ ಎಂಟ್ರಿ ಕೊಟ್ಟಿದ್ದರು. ಸೂರ್ಯ ಹಾಗೂ ಸುಧೀರ್ ಅದಲು ಬದಲಾಗಿರುತ್ತಾರೆ. ಶಿಶಿರ್‌ ನಿರ್ವಹಿಸಲಿರುವ ಸುಧೀರ್‌ ಪಾತ್ರ ಕಥೆಯಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆಯಂತೆ.

'ಪ್ರೇಮಲೋಕ' (ವಿಡಿಯೋ ಕೃಪೆ: ಸ್ಟಾರ್ ಸುವರ್ಣ)

ಈ ಹೊಸ ಸಂಚಿಕೆಗಳಲ್ಲಿ ವೀಕ್ಷಕರಿಗೆ ಮನರಂಜನೆ ನೀಡುವ ಸಾಕಷ್ಟು ಅಂಶಗಳು ಇವೆಯಂತೆ. ಜೊತೆಗೆ ಅನೇಕ ತಿರುವುಗಳನ್ನು ಧಾರಾವಾಹಿ ಹೊಂದಿದೆ ಎನ್ನಲಾಗಿದೆ. ಈ ಬಗ್ಗೆ ಶಿಶಿರ್ ಶಾಸ್ತ್ರಿ ಮಾತನಾಡಿದ್ದು, 'ಪ್ರೇಮಲೋಕ' ಧಾರಾವಾಹಿ ಹಿಂದಿಯ 'ಕಸೌಟಿ ಜಿಂದಗಿ ಕೇ' ರೀಮೇಕ್ ಆಗಿದೆ. ವಿಜಯ್ ಸೂರ್ಯ, ಅಂಕಿತಾ ಗೌಡ ಇಬ್ಬರೂ ಸೂರ್ಯ ಮತ್ತು ಪ್ರೇರಣಾ ಎಂಬ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಸ್ವಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ 'ಪ್ರೇಮಲೋಕ' ಸೀರಿಯಲ್ ಪ್ರಸಾರವಾಗಲಿದೆ.

'ಪ್ರೇಮಲೋಕ' ದ ಬಗ್ಗೆ ಮಾತನಾಡಿದ ಶಿಶಿರ್ ಶಾಸ್ತ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.