ಭಾನುವಾರ ವಿಶ್ವ ಅಮ್ಮಂದಿರ ದಿನ. ಅಮ್ಮ ಎಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಹೀಗಾಗಿ ಕಿರುತೆರೆ ನಟಿಯರು ಅಮ್ಮಂದಿರ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ.
ನಮ್ಮ ಮುದ್ದಿನ ಅಮ್ಮನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ, ನಮ್ಮ ತಾಯಿ ಮಾತ್ರವಲ್ಲ. ಪ್ರತಿಯೊಬ್ಬ ತಾಯಿಯರಿಗೂ ಹ್ಯಾಟ್ಸಾಫ್ ಹೇಳುತ್ತೇನೆ. ಯಾವುದೇ ಆಸೆ ಆಕಾಂಕ್ಷೆಯಿಲ್ಲದೇ ಗಂಡ ಮಕ್ಕಳಿಗಾಗಿ ಹಗಲಿರುಳು ದುಡಿಯುವ ಏಕೈಕ ವ್ಯಕ್ತಿಯೆಂದರೆ ತಾಯಿ. ತಾಯಿಯನ್ನ ಮಕ್ಕಳು ಅತಿ ಹೆಚ್ಚು ಗೌರವ ಮತ್ತು ಪ್ರೀತಿಯಿಂದ ಕಾಣಬೇಕು. ಅಮ್ಮನನ್ನ ಎಂದಿಗೂ ನೋಯಿಸಬಾರದು ಎಂದಿದ್ದಾರೆ.
![Television actresses sharing a photo with Mom](https://etvbharatimages.akamaized.net/etvbharat/prod-images/kn-bng-03-mothersday-photo-actress-ka10018_10052020201217_1005f_1589121737_1065.jpg)
![Television actresses sharing a photo with Mom](https://etvbharatimages.akamaized.net/etvbharat/prod-images/kn-bng-03-mothersday-photo-actress-ka10018_10052020201217_1005f_1589121737_154.jpg)
![Television actresses sharing a photo with Mom](https://etvbharatimages.akamaized.net/etvbharat/prod-images/kn-bng-03-mothersday-photo-actress-ka10018_10052020201217_1005f_1589121737_781.jpg)
ಜೊತೆ ಜೊತೆಯಲಿ ಧಾರಾವಾಹಿಯ ನಟಿ ಮೇಘಾ ಶೆಟ್ಟಿ, ಅಮ್ಮನಿಗೆ ಪರೋಟಾ ಎಂದರೆ ತುಂಬಾ ಇಷ್ಟ. ಅಮ್ಮನ ಜೊತೆ ಕುಳಿತು ಅವರಿಗೆ ಇಷ್ಟವಾದ ಮೂಲಂಗಿ ಪರೋಟಾ ಮಾಡಿ, ನಾನೇ ತಿನ್ನಿಸಿದೆ. ನನಗೆ ಪ್ರತಿ ದಿನವೂ ಅಮ್ಮನ ದಿನ. ಅಮ್ಮ ಐ ಲವ್ ಯೂ ಎಂದಿದ್ದಾರೆ.
![Television actresses sharing a photo with Mom](https://etvbharatimages.akamaized.net/etvbharat/prod-images/kn-bng-03-mothersday-photo-actress-ka10018_10052020201217_1005f_1589121737_210.jpg)
![Television actresses sharing a photo with Mom](https://etvbharatimages.akamaized.net/etvbharat/prod-images/kn-bng-03-mothersday-photo-actress-ka10018_10052020201217_1005f_1589121737_591.jpg)
ಇನ್ನೂ, ಆ್ಯಂಕರ್ ಅನುಶ್ರೀ, ಗಟ್ಟಿಮೇಳದ ನಿಶಾ ರವಿಕೃಷ್ಣನ್, ನಿವೇದಿತಾ ಗೌಡ, ನಟಿ ಸ್ವಾತಿ, ಅಗ್ನಿಸಾಕ್ಷಿ ಪ್ರಿಯಾಂಕಾ, ಅಮೃತಾ ಮೂರ್ತಿ ಸೇರಿದಂತೆ ಹಲವರು ತಾಯಿ ಜೊತೆಗಿನ ಫೋಟೋವನ್ನ ಶೇರ್ ಮಾಡಿದ್ದಾರೆ.