ETV Bharat / sitara

ಸುಂದರಿ ಧಾರಾವಾಹಿಯ ಮೂಲಕ ನೇತ್ರ ಕಮ್​ಬ್ಯಾಕ್.. ಯಾವ ಪಾತ್ರ ಗೊತ್ತಾ? - sundari serial

ಕಿರುತೆರೆ ನಟಿ ನೇತ್ರ ಸ್ಮಾಲ್​ ಗ್ಯಾಪ್​ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಟ ರಮೇಶ್ ಅರವಿಂದ್ ನಿರ್ಮಾಣದ ಧಾರವಾಹಿಯಲ್ಲಿ ಬಣ್ಣ ಹಚ್ಚಲಿದ್ದಾರೆ.

Television actress Nethra
ಕಿರುತೆರೆ ನಟಿ ನೇತ್ರ
author img

By

Published : Mar 6, 2021, 5:28 PM IST

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿ ಆಕೃತಿಯಲ್ಲಿ ನಾಯಕಿ ದಿವ್ಯಾಳ ಅಮ್ಮನ ಪಾತ್ರದಲ್ಲಿ ನಟಿಸಿದ್ದ ನೇತ್ರ ಇದೀಗ ಕಿರುತೆರೆಗೆ ಕಮ್​ ಬ್ಯಾಕ್ ಮಾಡಲಿದ್ದಾರೆ.

ಹೌದು ನಟಿ ನೇತ್ರ, ನಟ ರಮೇಶ್ ಅರವಿಂದ್ ನಿರ್ಮಾಣದ ಸುಂದರಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಸುಂದರಿ ಧಾರಾವಾಹಿಯಲ್ಲಿ ಎರಡನೇ ನಾಯಕಿ ನಮ್ರತಾಳ ಅಮ್ಮಮ್ಮ ಆಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಆಗಲಿದೆ. ಸಾಗುತಾ ದೂರ ದೂರ, ರಥಸಪ್ತಮಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದ ನೇತ್ರ ತದ ನಂತರ ಬಣ್ಣದ ಲೋಕದಿಂದ ಒಂದಷ್ಟು ವರ್ಷಗಳ ಕಾಲ ದೂರವಿದ್ದರು.

ತದ ನಂತರ ಅಕೃತಿ ಧಾರಾವಾಹಿಯ ನಂತರ ಕಿರುತೆರೆಗೆ ಮರಳಿದ ನೇತ್ರ, ಚೈತ್ರಾ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾದರು. ಆಕೃತಿ ಧಾರಾವಾಹಿ ಈ ವರ್ಷದ ಆರಂಭದಲ್ಲಿ ಮುಗಿದಿದ್ದು, ನೇತ್ರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅಮ್ಮಮ್ಮನಾಗಿ ಮರಳುತ್ತಿದ್ದು ವೀಕ್ಷಕರ ಮನ ಗೆಲ್ಲುತ್ತಾರಾ ಕಾದು ನೋಡಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.