ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೀತಾ ವಲ್ಲಭ' ಧಾರಾವಾಹಿಯಲ್ಲಿ ನಾಯಕಿ ಮೈಥಿಲಿ ಅಲಿಯಾಸ್ ಗುಬ್ಬಿಯಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಸುಪ್ರಿತಾ ಸತ್ಯನಾರಾಯಣ್ ಇದೀಗ ಮತ್ತೆ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ಗೆ ತಯಾರಾಗಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿರುವ 'ಸರಸು' ಹೊಸ ಧಾರಾವಾಹಿಯಲ್ಲಿ ಸುಪ್ರಿತಾ ಸತ್ಯನಾರಾಯಣ್ ಸರಸು ಪಾತ್ರಕ್ಕೆ ಜೀವ ತುಂಬಲಿದ್ದಾರೆ. 'ಸೀತಾವಲ್ಲಭ' ಧಾರಾವಾಹಿ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟ ಸುಪ್ರಿತಾ ಬಯಸದೇ ಈ ಕ್ಷೇತ್ರಕ್ಕೆ ಬಂದವರು. ಮೂಲತ: ಇಂಜಿನಿಯರಿಂಗ್ ಪದವಿ ಪಡೆದಿರುವ ಈಕೆ, ಬಣ್ಣದ ಲೋಕಕ್ಕೆ ಬರಲು ಇವರ ವಿಶೇಷ ಹವ್ಯಾಸವೇ ಕಾರಣ. ಸುಪ್ರಿತಾ ಅವರಿಗೆ ಕಥೆ ಹೇಳುವ ಗೀಳು ಇತ್ತು. ಕಾಲೇಜಿನಲ್ಲಿ ಬಿಡುವಿದ್ದಾಗ ಕೂಡಾ ಫ್ರೆಂಡ್ಸ್ಗೆ ಕಥೆ ಹೇಳುತ್ತಿದ್ದ ಆಕೆ ಸ್ನೇಹಿತೆಯ ಒತ್ತಾಯಕ್ಕೆ ಮಣಿದು ಸ್ಕ್ರಿಪ್ಟ್ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಯಶಸ್ವಿ ಕೂಡಾ ಆದರು. ಆದರೆ ಕಥೆಗಾರ್ತಿ ಬದಲು ಆಕೆಗೆ ಅವಕಾಶ ದೊರೆತದ್ದು ನಟಿಯಾಗಿ.
- " class="align-text-top noRightClick twitterSection" data="
">
ಮೊದಲ ಧಾರಾವಾಹಿಯಲ್ಲೇ ಪ್ರೇಕ್ಷಕರಿಗೆ ಹತ್ತಿರವಾದ ಸುಪ್ರಿತಾ ಇದೀಗ ಮತ್ತೊಮ್ಮೆ ಸರಸು ಆಗಿ ನಿಮ್ಮನ್ನು ರಂಜಿಸಲು ಬರುತ್ತಿದ್ದಾರೆ. 'ಸರಸು' ಧಾರಾವಾಹಿ ಒಬ್ಬ ಹೆಣ್ಣು ಮಗಳ ಶಿಕ್ಷಣದ ಕುರಿತಾದ ಕಥೆ. ಧಾರಾವಾಹಿ ನಾಯಕಿ ಸರಸು ಓದಿನಲ್ಲಿ ಟಾಪರ್, ಮನೆಯಲ್ಲಿ ಆಕೆಗೆ ಮದುವೆ ಮಾಡುವ ಪ್ರಯತ್ನ ನಡೆಯುತ್ತಿರುತ್ತದೆ. ಆದರೆ ಓದಬೇಕು ಎಂಬ ಆಸೆಯಿಟ್ಟುಕೊಂಡ ಸರಸು, ಮದುವೆಯಿಂದ ತಪ್ಪಿಸಿಕೊಂಡು ಶಿಕ್ಷಕಿಯೊಬ್ಬರ ಸಹಾಯದಿಂದ ಬೆಂಗಳೂರಿಗೆ ಬರುತ್ತಾಳೆ.
ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬರುವ ಸರಸುಗೆ ಕಾಲೇಜು ಸಂಸ್ಥಾಪಕನಾದ ಕಥಾನಾಯಕ ಅಡ್ಮಿಷನ್ ನೀಡುವುದಿಲ್ಲ. ಮುಂದೆ ಏನಾಗುತ್ತದೆ..? ಸರಸು, ಕಥಾನಾಯಕನನ್ನು ಹೇಗೆ ಬದಲಿಸುತ್ತಾಳೆ..? ನಾಯಕ-ನಾಯಕಿ ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರಾ...? ಎಂಬುದೇ ಈ ಧಾರಾವಾಹಿ ಕಥೆ. ಧಾರಾವಾಹಿಯಲ್ಲಿ ನಾಯಕನಾಗಿ 'ರಾಧಾ ರಮಣ' ಖ್ಯಾತಿಯ ಸ್ಕಂದ ಅಶೋಕ್ ನಟಿಸುತ್ತಿದ್ದಾರೆ.