ETV Bharat / sitara

ತಮಗಾಗಿ ನಿರ್ಮಿಸಿರುವ 'ಕಿಚ್ಚನ ಹೌಸ್'​​ಗೆ ಎಂಟ್ರಿ ಕೊಟ್ಟ ಸುದೀಪ್ - Big boss season 8

ಬಿಗ್​ ಬಾಸ್ ಸೀಸನ್ 8 ಆರಂಭವಾಗಿದ್ದು ಸುದೀಪ್ ಕೂಡಾ ತಮಗಾಗಿ ವಿಶೇಷವಾಗಿ ನಿರ್ಮಿಸಿರುವ 'ಕಿಚ್ಚನ ಹೌಸ್​​​'ಗೆ ಬಂದು ಸೇರಿದ್ದಾರೆ. ಪ್ರತಿ ಶನಿವಾರ ಹಾಗೂ ಭಾನುವಾರ ಸುದೀಪ್ ಈ ಮನೆಯಲ್ಲಿ ಉಳಿಯಲಿದ್ದಾರೆ.

Kiccha house
'ಕಿಚ್ಚನ ಹೌಸ್'​​
author img

By

Published : Mar 1, 2021, 5:54 PM IST

ಬಹಳ ದಿನಗಳಿಂದ ಕಿರುತೆರೆಪ್ರಿಯರು ಕಾತರದಿಂದ ಕಾಯುತ್ತಿದ್ದ ಬಿಗ್​ಬಾಸ್ ಸೀಸನ್ 8 ಕ್ಕೆ ಅದ್ಧೂರಿ ಓಪನಿಂಗ್ ದೊರೆತಿದೆ. 17 ಮಂದಿ ಸ್ಪರ್ಧಿಗಳು ಈ ಬಾರಿ ದೊಡ್ಮನೆಯೊಳಗೆ ಎಂಟ್ರಿ ನೀಡಿದ್ದಾರೆ. ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಡುತ್ತಿದ್ದಂತೆ ಇತ್ತ ಸುದೀಪ್ ಕೂಡಾ ಬಿಡದಿ ಬಳಿ ಇರುವ ಇನ್ನೋವೇಟಿವ್ ಸಿಟಿಯಲ್ಲಿ ತಮಗಾಗಿ ನಿರ್ಮಿಸಿರುವ ಹೊಸ ಮನೆಗೆ ಬಂದು ಸೇರಿದ್ದಾರೆ.

ಇನೋವೇಟಿವ್​​​​​​​ ಫಿಲ್ಮ್ ಸಿಟಿಯಲ್ಲಿ ಸುದೀಪ್​​​​​​ಗಾಗಿ ನಿರ್ಮಿಸಲಾಗಿರುವ ವಿಶೇಷ ಮನೆ

ಇದನ್ನೂ ಓದಿ: ಮೊದಲ ಬಾರಿಗೆ ಕಂಠದಾನ ಮಾಡಿದ ಖುಷಿಯಲ್ಲಿರುವ ರಾಧಾ ಮಿಸ್

ಪ್ರತಿ ಶನಿವಾರ ಹಾಗೂ ಭಾನುವಾರ ಸುದೀಪ್ ಉಳಿದುಕೊಳ್ಳುವ ಸಲುವಾಗಿ ದೊಡ್ಮನೆ ಸಮೀಪದಲ್ಲೇ ಸುದೀಪ್​​​ಗಾಗಿ ಮನೆಯೊಂದನ್ನು ವಿಶೇಷವಾಗಿ ನಿರ್ಮಾಣ ಮಾಡಲಾಗಿದೆ. ಈ ಮನೆಗೆ 'ಕಿಚ್ಚನ್ ಹೌಸ್' ಎಂದೇ ಹೆಸರಿಡಲಾಗಿದೆ. ಹೊಸ ಮನೆಗೆ ಎಂಟ್ರಿ ನೀಡುತ್ತಿದ್ದಂತೆ ಸುದೀಪ್, ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಮನೆಯನ್ನು ಉದ್ಘಾಟನೆ ಮಾಡಿದ್ದಾರೆ. ದೊಡ್ಮನೆಗೆ ಎಂಟ್ರಿ ನೀಡಿರುವ 17 ಸ್ಪರ್ಧಿಗಳು ಟಾಸ್ಕ್​​​ನಲ್ಲಿ ಏನೆಲ್ಲಾ ಆಟ ಆಡಿದ್ದಾರೆ..? ಅವರ ಆಸಕ್ತಿ ಹೇಗಿದೆ..?ಎಂಬ ವಿಚಾರವನ್ನು ಚರ್ಚೆ ಮಾಡಲು ಈ ಕಿಚ್ಚನ ಮನೆಯನ್ನು ನಿರ್ಮಿಸಲಾಗಿದೆ. ಸುದೀಪ್​ಗಾಗಿ ಐಷಾರಾಮಿ ಜಿಮ್, ಕಿಚನ್, ಮೇಕಪ್ ರೂಮ್, ವಿಶ್ರಾಂತಿ ಪಡೆಯಲು ಒಂದು ಕೋಣೆಯನ್ನು ಈ ಮನೆ ಒಳಗೊಂಡಿದೆ. ಬಿಗ್ ಬಾಸ್ ಮನೆಯಷ್ಟು ದೊಡ್ಡದಾಗಿಲ್ಲದಿದ್ದರೂ ಆ ಮನೆಯಷ್ಟೇ ನೋಡಲು ಸುಂದರವಾಗಿರುವುದು ಈ ಕಿಚ್ಚನ ಹೌಸ್​​​ ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.