ETV Bharat / sitara

ಸರಿಗಮಪ-17 ಫೈನಲ್ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀನಿಧಿ ಶಾಸ್ತ್ರಿ - Srinidhi shastry winner of Sa re ga ma pa 17

ಶ್ರೀನಿಧಿ ಶಾಸ್ತ್ರಿ ಸರಿಗಮಪ ಸೀಸನ್ 17 ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಅಂತಿಮ ಹಂತದಲ್ಲಿ ಮೂವರು ಸ್ಪರ್ಧಿಗಳಿದ್ದು ಉಳಿದ ಇಬ್ಬರು ಸ್ಪರ್ಧಿಗಳನ್ನು ಹಿಂದಿಕ್ಕಿ ಶ್ರೀನಿಧಿ ಈ ಬಾರಿ ವಿನ್ನರ್ ಆಗಿ 10 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.

Srinidhi Shastry
ಶ್ರೀನಿಧಿ ಶಾಸ್ತ್ರಿ
author img

By

Published : Dec 21, 2020, 12:49 PM IST

Updated : Dec 22, 2020, 6:43 AM IST

ಜೀ ಕನ್ನಡದ ಖ್ಯಾತ ಕಾರ್ಯಕ್ರಮ ಸರಿಗಮಪ ಸೀಸನ್ 17 ರ ಚಾಂಪಿಯನ್ ಪಟ್ಟವನ್ನು ಶ್ರೀನಿಧಿ ಶಾಸ್ತ್ರಿ ಪಡೆದುಕೊಂಡಿದ್ದಾರೆ. ‌ಸರಿಗಮಪ ಸೀಸನ್ 17ರ ಫೈನಲ್​​​​​​​​​​​​​​​​​​ನಲ್ಲಿ ಎರಡು ರೌಂಡ್​​​​​​ಗಳಿದ್ದು ಅದರಲ್ಲಿ ಕಿರಣ್ ಪಾಟೀಲ್ ಮತ್ತು ಶರಧಿ ಪಾಟೀಲ್ ಮೊದಲ ರೌಂಡ್ ನಲ್ಲಿ ಎಲಿಮಿನೇಟ್ ಆಗಿದರು. ಫೈನಲ್ ರೌಂಡ್ ಗೆ ಶ್ರೀನಿಧಿ ಶಾಸ್ತ್ರಿ, ಅಶ್ವಿನ್ ಶರ್ಮ ಹಾಗೂ ಕಂಬದ ರಂಗಯ್ಯ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ: 'ಎಂಆರ್' ಚಿತ್ರಕ್ಕೆ ಅಡ್ಡಿಯಾಗುತ್ತಿರುವ ಪದ್ಮನಾಭ್ ಇಷ್ಟು ದಿನ ಏಕೆ ಸುಮ್ಮನಿದ್ದರು...?

ಫೈನಲ್ ರೌಂಡ್​​​​​ನಲ್ಲಿ ವೀಕ್ಷಕರ ಮತದ ಜೊತೆಗೆ ತೀರ್ಪುಗಾರರು ನೀಡಿದ ಅಂಕಗಳು ಎರಡನ್ನೂ ಪರಿಗಣನೆಗೆ ತೆಗೆದುಕೊಂಡು ಶ್ರೀನಿಧಿ ಶಾಸ್ತ್ರಿಯನ್ನು ಚಾಂಪಿಯನ್ ಆಗಿ ಘೋಷಿಸಲಾಯ್ತು. ಅಶ್ವಿನ್ ಶರ್ಮ ಮೊದಲ ರನ್ನರ್ ಅಪ್ ಆದರೆ, ಕಂಬದ ರಂಗಯ್ಯ 2ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಚಾಂಪಿಯನ್ ಆದ ಶ್ರೀನಿಧಿ ಶಾಸ್ತ್ರಿಗೆ ಕಾರ್ಯಕ್ರಮದ ವತಿಯಿಂದ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. ಮೊದಲ ರನ್ನರ್ ಅಪ್ ಅಶ್ವಿನ್ ಶರ್ಮಗೆ 5 ಲಕ್ಷ ರೂಪಾಯಿ ಬಹುಮಾನ ಹಾಗೂ ಕಂಬದ ರಂಗಯ್ಯಗೆ 2.5 ಲಕ್ಷ ರೂಪಾಯಿ ಬಹುಮಾನ ದೊರೆತಿದೆ. ಕೊರೊನಾ ಕಾರಣದಿಂದ ಈ ಬಾರಿಯ ಸೀಸನ್​​​, ಒಂದು ವರ್ಷದ ಕಾಲ ನಡೆದಿದೆ. ಎಂದಿನಂತೆ ಈ ಬಾರಿ ಕೂಡಾ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ಹಂಸಲೇಖ ಹಾಗೂ ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

Last Updated : Dec 22, 2020, 6:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.