ETV Bharat / sitara

'ಸೋಲೇ ಇಲ್ಲ ಗೆಲುವೇ ಎಲ್ಲಾ' ಎನ್ನುತ್ತಿದ್ದಾರೆ ಗಾಯಕಿ ಐಶ್ವರ್ಯ - IPL 2020 live update

ಐಪಿಎಲ್ ಪಂದ್ಯಾವಳಿ ಆರಂಭವಾದಾಗಿನಿಂದ 3 ಪಂದ್ಯಗಳನ್ನು ಜಯಗಳಿಸಿರುವ ಆರ್​ಸಿಬಿ ತಂಡಕ್ಕೆ ಗಾಯಕಿ ಐಶ್ವರ್ಯ ಹಾಗೂ ಸಹೋದರ ಶ್ರೀನಿಧಿ ರಂಗರಾಜನ್ ಹಾಡು ಹಾಡುವ ಮೂಲಕ ವಿಭಿನ್ನವಾಗಿ ಶುಭ ಕೋರಿದ್ದಾರೆ.

Singer Aishwarya wished RCB team
ಐಪಿಎಲ್ ಪಂದ್ಯಾವಳಿ 2020
author img

By

Published : Oct 5, 2020, 4:54 PM IST

ಕೊರೊನಾ ಭೀತಿ ನಡುವೆಯೂ ಕ್ರೀಡಾಪ್ರಿಯರು ಐಪಿಎಲ್​​​ ಪಂದ್ಯಾವಳಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. 3 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆರ್​​ಸಿಬಿ ತಂಡಕ್ಕೆ ಗಾಯಕಿ ಐಶ್ವರ್ಯ ರಂಗರಾಜನ್ ವಿಭಿನ್ನವಾಗಿ ಶುಭ ಕೋರಿದ್ದಾರೆ.

ಆರ್​ಸಿಬಿ ತಂಡಕ್ಕೆ ಶುಭ ಕೋರಿದ ಗಾಯಕಿ

ಗೆಲುವಿನ ಹಾದಿಯಲ್ಲಿರುವ ಆರ್​ಸಿಬಿ ತಂಡಕ್ಕೆ ರೀಮಿಕ್ಸ್ ಹಾಡಿನ ಮೂಲಕ ಐಶ್ವರ್ಯ ಶುಭ ಕೋರಿದ್ದಾರೆ. 'ಸೋಲೇ ಇಲ್ಲ ನಿನ್ನ ಹಾಡು ಹಾಡುವಾಗ' ಹಾಡಿನ ಮ್ಯೂಸಿಕ್ ಬಳಸಿ ಆ ಹಾಡಿಗೆ ಬೇರೆ ಸಾಹಿತ್ಯ ಬಳಸುವ ಮೂಲಕ ಆರ್​ಸಿಬಿ ತಂಡಕ್ಕೆ ಶುಭ ಕೋರಿದ್ದಾರೆ. ಐಶ್ವರ್ಯ ಅವರ ಅಣ್ಣ ಶ್ರೀನಿಧಿ ರಂಗರಾಜನ್ ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ಅಣ್ಣ,ತಂಗಿ ಇಬ್ಬರೂ ಈ ಹಾಡನ್ನು ಹಾಡಿದ್ದಾರೆ. ''ಸೋಲೇ ಇಲ್ಲಾ ನಮ್ಮ ಬಾಸ್ ಫಾರ್ಮ್​ನಲ್ಲಿ ಇರುವಾಗ ಗೆಲುವೇ ಎಲ್ಲಾ ಆರ್​​​​​ಸಿಬಿ ಫ್ಯಾನ್ಸ್ ಇರುವಾಗ ಕಪ್ ನಮ್ದೆ...''‌ ಎಂಬ ಹಾಡು ಆರ್​ಸಿಬಿ ಅಭಿಮಾನಿಗಳನ್ನು ರಂಜಿಸಿದೆ. ಐಶ್ವರ್ಯ ಹಾಗೂ ಅವರ ಅಣ್ಣನಿಗೆ ಕ್ರಿಕೆಟ್ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಬೆಂಗಳೂರಿನಲ್ಲಿ ಯಾವುದೇ ಪಂದ್ಯ ನಡೆದರೂ ಅಣ್ಣ ತಂಗಿ ಅಲ್ಲಿ ಹಾಜರಿರುತ್ತಾರೆ. ಈಗ ದುಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್​​​​​​ಸಿಬಿ ತಂಡಕ್ಕೆ ಇವರಿಬ್ಬರೂ ಬೆಂಬಲ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.