ETV Bharat / sitara

ಭೂಮಿ ಶೆಟ್ಟಿ ಜಾಗಕ್ಕೆ ಬಂದ್ರು ದಂತ ವೈದ್ಯೆ ಸಿಂಧು ಶ್ರೀಕಾಂತ್ - RJ Sindhu Srikant

ದಂತ ವೈದ್ಯೆ, ಆರ್​​​ಜೆ ಸಿಂಧು ಶ್ರೀಕಾಂತ್ ಈಗ ಮಜಾಭಾರತದ ನಿರೂಪಕಿ. ಈ ಮುನ್ನ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಭೂಮಿಶೆಟ್ಟಿ ತೆಲುಗು ಧಾರಾವಾಹಿಯಲ್ಲಿ ನಟಿಸುವ ಕಾರಣದಿಂದ ಈ ಕಾರ್ಯಕ್ರಮದಿಂದ ಹೊರ ಹೋಗಿದ್ದಕ್ಕೆ ಆ ಸ್ಥಾನಕ್ಕೆ ಸಿಂಧು ಬಂದಿದ್ದಾರೆ.

Sindhu srikant
ಸಿಂಧು ಶ್ರೀಕಾಂತ್
author img

By

Published : Jan 29, 2021, 7:22 AM IST

ಭೂಮಿ ಶೆಟ್ಟಿ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿರುವ ಕಾರಣದಿಂದ ಮಜಾಭಾರತದಿಂದ ಹೊರಬಂದಿದ್ದಾರೆ ಎಂಬುದು ಈಗಾಗಲೇ ತಿಳಿದ ವಿಚಾರ. ಇದೀಗ ಅವರ ಜಾಗಕ್ಕೆ ಆರ್​​​​​​​​​​​​​​​​​​​​​​ಜೆ ಹಾಗೂ ನಟಿ ಸಿಂಧು ಶ್ರೀಕಾಂತ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಮಜಾಭಾರತದ ಶೂಟಿಂಗ್​​​​​​​​​​​​​​​​​ನಲ್ಲಿ ಸಿಂಧು ಭಾಗವಹಿಸಿದ್ದು ಇದೇ ಜನವರಿ 30 ರಿಂದ ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Sindhu srikant
ನಿರೂಪಕಿ ಸಿಂಧು ಶ್ರೀಕಾಂತ್

ಸಿಂಧು ಮಜಾಭಾರತ ಶೋ ಮೂಲಕ ಮೊದಲ ಬಾರಿಗೆ ನಿರೂಪಕಿ ಆಗುತ್ತಿದ್ದಾರೆ. "ಈ ಜನಪ್ರಿಯ ಶೋ ನಿರೂಪಕಿಯಾಗಿ ಆಯ್ಕೆಯಾಗಿದ್ದಕ್ಕೆ ಖುಷಿಯಾಗಿದೆ. ನಾನು ದಂತವೈದ್ಯೆಯಾಗಿದ್ದರೂ ನನಗೆ ಮನರಂಜನಾ ಕ್ಷೇತ್ರದಲ್ಲಿ ಬಹಳ ಆಸಕ್ತಿ ಇದೆ. ಈ ಕಾರಣದಿಂದಲೇ ನಾನು ಆರ್​ಜೆ ಆದೆ. ಈಗ ನಾನು ಮಜಾಭಾರತ ಕಾರ್ಯಕ್ರಮವನ್ನು ನಿರೂಪಿಸುವ ಮೂಲಕ ಕಿರುತೆರೆಯಲ್ಲಿ ಪಯಣ ಆರಂಭಿಸುತ್ತಿದ್ದೇನೆ. ಈ ಶೋ ನಿಮಗೆ ಖಂಡಿತ ಇನ್ನೂ ಹೆಚ್ಚಿನ ಮನರಂಜನೆ ನೀಡುತ್ತದೆ" ಎಂದು ಸಿಂಧು ಹೇಳಿದ್ದಾರೆ.

Sindhu srikant
ಸಿಂಧು ದಂತವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ

ಇದನ್ನೂ ಓದಿ: ಸುಮಲತಾ ಜೊತೆಗೆ ಅಮೆರಿಕ ಸೆನೆಟರ್​​​...ಫೋಟೋ ಹಿಂದಿನ ಅಸಲಿ ಸತ್ಯ ಏನು..?

ಮಣಿರತ್ನಂ ನಿರ್ದೇಶನದ 'ಚೆಕ್ಕ ಚಿವಂತ ವಾನಂ' ಹಾಗೂ 'ಕೆನಡಿ ಕ್ಲಬ್' ಚಿತ್ರಗಳಲ್ಲಿ ನಟಿಸಿರುವ ಸಿಂಧು ಇತ್ತೀಚೆಗೆ ನಡೆದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಮಜಾ ಭಾರತ ಶೋ ಅಕ್ಟೋಬರ್​​​​​​​​​​​​ನಲ್ಲಿ ಆರಂಭವಾಗಿತ್ತು. ಕರ್ನಾಟಕದ ಹಲವು ಪ್ರತಿಭೆಗಳಿಗೆ ತಮ್ಮ ಹಾಸ್ಯ ಕೌಶಲ್ಯ ಪ್ರದರ್ಶಿಸಲು ಈ ವೇದಿಕೆ ಅವಕಾಶ ನೀಡಿದೆ. ಉತ್ತಮ ಪ್ರತಿಭೆಗಳಿಗೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶವನ್ನು ನೀಡುತ್ತದೆ. ಹಿರಿತೆರೆ ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆಗೆ ಸಂಗೀತ ನಿರ್ದೇಶಕ ಗುರುಕಿರಣ್ ಈ ಕಾರ್ಯಕ್ರಮದ ತೀರ್ಪುಗಾರ ತೀರ್ಪುಗಾರರಾಗಿದ್ದಾರೆ. ನಟ ಹರೀಶ್ ರಾಜ್ ಕೂಡಾ ಈ ಶೋನ ಭಾಗವಾಗಿದ್ದಾರೆ.

Sindhu srikant
ಮಜಾಭಾರತ ನಿರೂಪಕಿ ಸಿಂಧು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.