'ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ' ಖ್ಯಾತಿಯ ನಟಿ ಶ್ವೇತಾ ಶ್ರೀವಾತ್ಸವ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಆಗಾಗ ತಮ್ಮ ಫೋಟೋಶೂಟ್ ಹಾಗೂ ಫನ್ನಿ ವಿಡಿಯೋಗಳ ಮೂಲಕ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಈಗಲೂ ಸಹ ಮುದ್ದು ಮಗಳೊಂದಿಗೆ ಈದ್ ಮುಬಾರಕ್ ಪ್ರಯುಕ್ತ ವಿಶೇಷ ಫೋಟೋಶೂಟ್ ಮಾಡಿಸಿ ನೆಟ್ಟಿಗರಿಗೆ ಟ್ರೀಟ್ ಕೊಟ್ಟಿದ್ದಾರೆ.

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ ನಟಿ ಶ್ವೇತಾ ಶ್ರೀವಾತ್ಸವ್, ವಿಭಿನ್ನ ಕಥೆಗಳ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರಿಯರ ಹೃದಯ ಕದ್ದಿದ್ದಾರೆ. ಸದ್ಯಕ್ಕೆ ಮೂರು ಸಿನಿಮಾಗಳಲ್ಲಿ ಬ್ಯೂಸಿ ಇರುವ ಅವರು, ಸೋಷಿಯಲ್ ಮೀಡಿಯಾದಲ್ಲಿ ಮಗಳ ಜೊತೆ ಆಗಾಗ ಗಮನ ಸೆಳೆಯುತ್ತಿರುತ್ತಾರೆ.

ಇಂದು ಮುಸ್ಲಿಂ ಬಾಂಧವರ ಬಕ್ರೀದ್ ಹಬ್ಬದ ಪ್ರಯುಕ್ತ ಮಗಳ ಜೊತೆ ಕಲರ್ಪುಲ್ ಫೋಟೋಶೂಟ್ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ವಿಭಿನ್ನವಾಗಿ ಈದ್ ಮುಬಾರಕ್ ಶುಭಾಶಯ ಹೇಳಿದ್ದಾರೆ.


ಇನ್ನು ಈ ಫೋಟೋಶೂಟ್ ಕುರಿತು ಮಾಹಿತಿ ನೀಡಿರುವ ನಟಿ ಶ್ವೇತಾ ಶ್ರೀವಾತ್ಸವ್, ಬಕ್ರೀದ್ ಹಬ್ಬದ ಪ್ರಯುಕ್ತ ಈ ಸ್ಪೆಷಲ್ ಫೋಟೋಶೂಟ್ ಮಾಡಿಸಿದೆ. ಕಾಸ್ಟೂಮ್ ಡಿಸೈನರ್ ಅನ್ನು ದಿಯಾ ಎಂಬುವರು ಮಾಡಿದ್ದು, ಕಿರಣ್ ಆಭರಣಗಳನ್ನು ಸೆಲೆಕ್ಟ್ ಮಾಡಿದ್ದಾರೆ ಎಂದಿದ್ದಾರೆ.
- " class="align-text-top noRightClick twitterSection" data="
">
