ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ. 3-10 ನಿಮಿಷ ಅವಧಿಯ ಕಿರುಚಿತ್ರಗಳಿಗೆ ಈ ಸ್ಪರ್ಧೆಯಲ್ಲಿ ಅವಕಾಶವಿದೆ. ಮೊದಲ ಬಹುಮಾನ 2 ಲಕ್ಷ ರೂಪಾಯಿ, ಎರಡನೆ ಬಹುಮಾನ 1.50 ಲಕ್ಷ ಹಾಗೂ ಮೂರನೇ ಬಹುಮಾನ 1 ಲಕ್ಷ ರೂಪಾಯಿ ಎಂದು ಘೋಷಿಸಲಾಗಿದೆ.
ಈ ನಗದು ಬಹುಮಾನದೊಂದಿಗೆ ಕಿರುಚಿತ್ರ ಪ್ರಶಸ್ತಿ ಸಮಿತಿಯ ಸೂಚನೆ ಮೇರೆಗೆ ಪ್ರಮಾಣಪತ್ರ ಹಾಗೂ ಫಲಕಗಳನ್ನು ನೀಡಲಾಗುವುದು. ಯಾವುದೇ ಶುಲ್ಕ ಇಲ್ಲದೆ, ಭಾರತದ ಯಾವುದೇ ಭಾಷೆ, ರಾಜ್ಯದ ಪ್ರತಿಭೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆದರೆ ಈ ಕಿರುಚಿತ್ರ ಕಾಪಿ ಆಗಿರಬಾರದು. ಯೂಟ್ಯೂಬ್ ಅಥವಾ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕಂಡಿರಬಾರದು. 15 ಅಕ್ಟೋಬರ್ 2020 ಒಳಗೆ ಸ್ಪರ್ಧಿಗಳು ತಮ್ಮ ಕಿರುಚಿತ್ರವನ್ನು nhrcshortfilm@gmail.com ಕಳಿಸಬಹುದು. ಈ ಸ್ಪರ್ಧೆಗೆ ಅರ್ಜಿ ಫಾರ್ಮ್ ಕೂಡಾ ಲಭ್ಯವಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಕಿರುಚಿತ್ರಗಳನ್ನು ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್ ವೆಬ್ ಸೈಟ್ನಲ್ಲಿ ಪ್ರಕಟಿಸಲಾಗುವುದು. ಆಯ್ಕೆ ಆದ ಮೂವರು ವಿಜೇತರನ್ನು ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್ ದೆಹಲಿಗೆ ಆಹ್ವಾನಿಸಿ ಪ್ರಶಸ್ತಿ ನೀಡಲಿದೆ.