ETV Bharat / sitara

ಮತ್ತೆ ನಿಮ್ಮನ್ನೆಲ್ಲಾ ನಕ್ಕು ನಗಿಸಲು ಬರ್ತಿದ್ದಾರೆ ಶಿವರಾಜ್​ ಕೆ.ಆರ್​. ಪೇಟೆ - Zee Kannada Comedy Kiladigalu

ಕಿರುತೆರೆ ರಿಯಾಲಿಟಿ ಶೋ ನಂತರ ಬೆಳ್ಳಿತೆರೆಯಲ್ಲಿ ಬ್ಯುಸಿ ಆಗಿರುವ ನಟ ಶಿವರಾಜ್ ಕೆ.ಆರ್. ಪೇಟೆ ಇದೀಗ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಚಾಂಪಿಯನ್​ ಶಿಪ್​​-2 ಮೂಲಕ ಮತ್ತೆ ನಿಮ್ಮನ್ನು ನಗಿಸಲು ಬರುತ್ತಿದ್ದಾರೆ.

Shivaraj KR pete
ಶಿವರಾಜ್​ ಕೆ.ಆರ್​. ಪೇಟೆ
author img

By

Published : Sep 11, 2020, 3:34 PM IST

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಖ್ಯಾತರಾದ ಶಿವರಾಜ್​ ಕೆ.ಆರ್​. ಪೇಟೆ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ನಾನು ಮತ್ತು ಗುಂಡ' ಸಿನಿಮಾ ಕೂಡಾ ಒಳ್ಳೆ ಪ್ರತಿಕ್ರಿಯೆ ಪಡೆದಿದ್ದು ಈ ಚಿತ್ರ 'ನೇನು ನಾ ನೇಸ್ತಮ್​​​' ಹೆಸರಿನಲ್ಲಿ ತೆಲುಗಿಗೆ ಡಬ್ಬಿಂಗ್ ಕೂಡಾ ಆಗಿದೆ.

ತಮ್ಮದೇ ವಿಭಿನ್ನ ಶೈಲಿಯ ಕಾಮಿಡಿ ಮೂಲಕ ಪ್ರೇಕ್ಷಕರನ್ನು ನಕ್ಕುನಲಿಸುವ ಶಿವರಾಜ್​ ಕೆ.ಆರ್​. ಪೇಟೆ ಮತ್ತೆ ನಿಮ್ಮನ್ನು ನಗಿಸಲು ಕಿರುತೆರೆಗೆ ಬರ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್​​​​-2 ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು ಶೀಘ್ರದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಮೊದಲ ಮೂರೂ ಸೀಸನ್​ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಈ ಮೂಲಕ ಶಿವರಾಜ್​ ಕೆ.ಆರ್​. ಪೇಟೆ ಜೊತೆ ಇತರ ಸ್ಪರ್ಧಿಗಳು ವಾರಾಂತ್ಯದಲ್ಲಿ ನಿಮ್ಮನ್ನು ನಗಿಸಲು ಸಿದ್ಧರಾಗಿದ್ದಾರೆ.

Shivaraj KR pete
ಶಿವರಾಜ್​ ಕೆ.ಆರ್​. ಪೇಟೆ

'ಅಯೋಗ್ಯ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಹಿರಿತೆರೆಗೆ ಕಾಲಿಟ್ಟ ಶಿವರಾಜ್​ ಕೆ.ಆರ್​. ಪೇಟೆ ಮದುವೆ ದಿಬ್ಬಣ, ರುಸ್ತುಂ, ಸಿಂಗ, ಅಂಬಿ ನಿಂಗ್ ವಯಸ್ಸಾಯ್ತೋ, ಸೀತಾರಾಮ ಕಲ್ಯಾಣ, ಅಧ್ಯಕ್ಷ ಇನ್ ಅಮೇರಿಕ, ರಾಬರ್ಟ್, ಶಿವಾರ್ಜುನ ಹಾಗೂ ಇನ್ನಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾನು ಮತ್ತು ಗುಂಡ ಚಿತ್ರದಲ್ಲಿ ಶಿವರಾಜ್​ ಕೆ.ಆರ್​. ಪೇಟೆ ಪ್ರೇಕ್ಷಕರ ಕಣ್ಣಂಚು ಒದ್ದೆಯಾಗುವಂತೆ ನಟಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.