ETV Bharat / sitara

ಕಾಯಿಸಿ ಕಾಯಿಸಿ ಅಂದುಕೊಂಡಿದ್ದಕ್ಕಿಂತ ದೊಡ್ಡ ಸರ್ಪ್ರೈಸ್ ಕೊಟ್ಟೇ ಬಿಟ್ರು ಶೈನ್​​​​​​​​​​​​​​​​​​ ಶೆಟ್ಟಿ..! - Shine shetty project with Sanjeeta Neene Neena Album song

ಶೈನ್ ಶೆಟ್ಟಿ ಹಾಗೂ ಸಂಗೀತ ರಾಜೀವ್ ಮದುವೆಯಾಗುತ್ತಾರೆ ಎಂದುಕೊಂಡವರಿಗೆ ನಿರಾಸೆ ಆಗಿದೆ. ಒಂದು ವಾರದಿಂದ ಸರ್ಪ್ರೈಸ್ ಕೊಡ್ತೀನಿ ಎಂದು ಹೇಳುತ್ತಿದ್ದ ಶೈನ್ ಶೆಟ್ಟಿ ಇದೀಗ ಸಂಗೀತ ಅವರೊಂದಿಗೆ ಮಾಡುತ್ತಿರುವ ಹೊಸ ಪ್ರಾಜೆಕ್ಟ್​ ಬಗ್ಗೆ ಅನೌನ್ಸ್ ಮಾಡಿದ್ದಾರೆ.

Shine shetty surprise to Fans
ಶೈನ್​​​​​​​​​​​​​​​​​​ ಶೆಟ್ಟಿ
author img

By

Published : Sep 29, 2020, 12:17 PM IST

ಬಿಗ್​ಬಾಸ್​​​​ ಸೀಸನ್​ 7 ವಿಜೇತ ಶೈನ್ ಶೆಟ್ಟಿ ದೊಡ್ಮನೆಗೆ ಹೋಗಿ ಬಂದಾಗಿನಿಂದ ಅವರ ಫಾಲೋವರ್ಸ್​ಗಳ ಸಂಖ್ಯೆ ಭಾರೀ ಹೆಚ್ಚಾಗಿದೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಶೈನ್ ಶೆಟ್ಟಿ ಅಷ್ಟು ಗುರುತಿಸಿಕೊಂಡಿರಲಿಲ್ಲ. ಆದರೆ ಈಗ ಅವರು ಕಿರುತೆರೆಯ ಸ್ಟಾರ್ ಆಗಿ ಹೋಗಿದ್ದಾರೆ.

  • " class="align-text-top noRightClick twitterSection" data="">

ಇನ್ನು ಶೈನ್ ಶೆಟ್ಟಿ ವಾರದ ಹಿಂದೆ ಹಾಕಿದ್ದ ಪೋಸ್ಟ್ ಒಂದು ಬಹಳ ಕುತೂಹಲ ಉಂಟುಮಾಡಿತ್ತು. ಶೈನ್​​​​​​ಯುವತಿಯೊಬ್ಬರ ಕೈ ಹಿಡಿದುಕೊಳ್ಳುವ ವಿಡಿಯೋ ತುಣುಕೊಂದನ್ನು ಹಾಕಿ ಶೀಘ್ರದಲ್ಲೇ ನಿಮಗೆ ಸರ್ಪ್ರೈಸ್ ನೀಡುತ್ತೇನೆ ಎಂದು ಹೇಳಿದ್ದರು. ಅದೇ ರೀತಿ ಗಾಯಕಿ ಸಂಗೀತ ರಾಜೀವ್ ಕೂಡಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದೇ ರೀತಿ ಶೈನ್ ಶೆಟ್ಟಿ ಕೈ ಫೋಟೋ ಹಾಕಿ ಸರ್ಪ್ರೈಸ್ ಎಂದು ಹೇಳಿದ್ದರು. ಅಭಿಮಾನಿಗಳಂತೂ ಬಹುಶ: ಇವರಿಬ್ಬರೂ ಲವ್​​ನಲ್ಲಿ ಇರಬಹುದು ಅದನ್ನು ಅನೌನ್ಸ್ ಮಾಡಲು ಹೀಗೆ ಸರ್ಪ್ರೈಸ್ ನೀಡುವುದಾಗಿ ಹೇಳುತ್ತಿದ್ದಾರೆ ಎಂದುಕೊಂಡಿದ್ದರು. ಇದೀಗ ಸತ್ಯ ಏನು ಎಂಬುದು ರಿವೀಲ್ ಆಗಿದೆ. ಅಷ್ಟೇ ಅಲ್ಲ, ಅಭಿಮಾನಿಗಳಿಗೆ ನಿರಾಸೆ ಕೂಡಾ ಉಂಟಾಗಿದೆ.

Shine shetty surprise to Fans
ಶೈನ್ ಶೆಟ್ಟಿ

ಎಲ್ಲರೂ ಅಂದುಕೊಂಡಂತೆ ಇವರಿಬ್ಬರೂ ಲವ್​​​​ನಲ್ಲಿಲ್ಲ, ಅಥವಾ ಮದುವೆಯಾಗುತ್ತಿಲ್ಲ. ಇಬ್ಬರೂ ಸೇರಿ ಮಾಡುತ್ತಿರುವ ಹೊಸ ಪ್ರಾಜೆಕ್ಟ್​​​​ವೊಂದನ್ನು ಇಬ್ಬರೂ ಸೇರಿ ಈ ರೀತಿ ಅನೌನ್ಸ್ ಮಾಡಿದ್ದಾರೆ ಅಷ್ಟೇ. ಸಂಗೀತ ಹಾಗೂ ಶ್ರೀನಾಥ್ ಸಾಹಿತ್ಯ ಬರೆದಿರುವ 'ನೀನೆ ನೀನೆ' ಎಂಬ ಆಲ್ಪಂ ಹಾಡಿನಲ್ಲಿ ಇವರಿಬ್ಬರೂ ನಟಿಸುತ್ತಿದ್ದಾರೆ. ಈ ಹಾಡಿಗೆ ಸಂಗೀತ ರಾಗ ಸಂಯೋಜಿಸಿದ್ದಾರೆ. ಅಷ್ಟೇ ಅಲ್ಲ ಸಂಗೀತ ಹಾಗೂ ಸೋನು ನಿಗಮ್ ಇಬ್ಬರೂ ಈ ಆಲ್ಪ ಗೀತೆಯನ್ನು ಹಾಡಿದ್ದಾರೆ. ಈ ಹಾಡಿನ ಪ್ರೋಮೋ ಕೂಡಾ ಬಿಡುಗಡೆಯಾಗಿದೆ. ಒಟ್ಟಿನಲ್ಲಿ ಇಬ್ಬರೂ ಅಭಿಮಾನಿಗಳಿಗೆ ಶಾಕ್ ನೀಡಿದ್ದಂತೂ ನಿಜ.

Shine shetty surprise to Fans
ಸಂಗೀತ ರಾಜೀವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.