ಬೆಂಗಳೂರಿನಲ್ಲಿ ಬಹುರೂಪಿ ಬುಕ್ ಹಬ್ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಿರುತರೆ ನಟಿ ರಂಜನಿಯವರ ಚೊಚ್ಚಲ ಕೃತಿ ಲೋಕಾರ್ಪಣೆಗೊಂಡಿತು.
ಧಾರಾವಾಹಿ ಮೂಲಕ ನಟಿಯಾಗಿ ಪರಿಚಯಗೊಂಡ ರಂಜನಿ, ಇದೀಗ ತಮ್ಮ ಬರಹಗಳ ಮೂಲಕ ಯುವ ಜನಾಂಗವನ್ನು ಓದು ಮತ್ತು ಬರಹಕ್ಕೆ ಪ್ರೇರೇಪಿಸಿದ್ದಾರೆ. ತಮಗೆ ಅನಿಸಿದ್ದನ್ನು, ತಾವು ಕಂಡಿದ್ದನ್ನು ಕತೆಯನ್ನಾಗಿಸಿದ್ದಾರೆ.
ಕತೆ ಡಬ್ಬಿಯಲ್ಲಿ ಹದಿನಾರು ಕತೆಗಳಿವೆ. ಪ್ರಸ್ತುತ ಸನ್ನಿವೇಶಗಳಿಗೆ ಸನಿಹವೆನಿಸುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮುಳುಗುತ್ತಿರುವ ಇಂದಿನವರಿಗೆ ಈ ಕತೆ ಡಬ್ಬಿ ಬದಲಾವಣೆ ತರಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಬರೆಯುವ ಆಶಯವಿದೆ ಎನ್ನುತ್ತಾರೆ ಲೇಖಕಿ ರಂಜನಿ ರಾಘವನ್.