ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಕ್ಷಾ ಬಂಧನ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರಧಾರಿಯಾಗಿ ಅಭಿಯಿಸುತ್ತಿರುವ ಭವಾನಿ ಸಿಂಗ್ ಅವರು ಸಹನಟಿ ಪಂಕಜಾ ಶಿವಣ್ಣ ಅವರೊಂದಿಗೆ ಎಂಗೇಜ್ ಆಗಿದ್ದು ವೀಕ್ಷಕರಿಗೆಲ್ಲಾ ತಿಳಿದೇ ಇತ್ತು. ಇದೀಗ ಈ ಮುದ್ದಾದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಹಿಂದೆ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ನಾಯಕ ಗುರುಮೂರ್ತಿ ಅಲಿಯಾಸ್ ಗ್ಯಾರಿ ಆಗಿ ಭವಾನಿ ಸಿಂಗ್ ನಟಿಸುದ್ದರು. ಸುಬ್ಬಿಯ ಸ್ನೇಹಿತೆ ರೇವತಿ ಪಾತ್ರದಲ್ಲಿ ಪಂಕಜಾ ಶಿವಣ್ಣ ನಟಿಸಿದ್ದರು. ಎರಡು ವರ್ಷಗಳಿಂದ ಸ್ನೇಹಿತರಾಗಿದ್ದ ಇವರ ಮಧ್ಯೆ ಪ್ರೀತಿ ಅಂಕುರಿಸಿ, ಮನೆಯವರ ಸಮ್ಮುಖದಲ್ಲಿ ಗ್ರ್ಯಾಂಡ್ ಆಗಿ ನಿಶ್ಚಿತಾರ್ಥ ಕೂಡಾ ಮಾಡಿಕೊಂಡಿದ್ದರು. ಈಗ ಸತಿ-ಪತಿಗಳಾಗಿದ್ದು, ನವಜೀವನ ಆರಂಭಿಸಲಿದ್ದಾರೆ.
ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯ ಸಹನಾ ಪಾತ್ರಧಾರಿ ದಿವ್ಯಾ ಮೂರ್ತಿ ಇವರ ಮದುವೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು "ಎ ಗುಡ್ ಮ್ಯಾರೇಜ್ ಈಸ್ ದಿ ಯೂನಿಯನ್ ಆಫ್ ಗುಡ್ ಫಾರ್ ಗಿವರ್ಸ್,… ಹ್ಯಾಪಿ ಮ್ಯಾರೀಡ್ ಲೈಫ್ " ಎಂದು ವಿಶ್ ಮಾಡಿದ್ದಾರೆ.