ETV Bharat / sitara

ಇನ್ಮುಂದೆ ವಾರಕ್ಕೊಂದು ಕಥೆ ಬರೆಯಲಿದ್ದಾರೆ ಕನ್ನಡತಿ ಖ್ಯಾತಿಯ ರಂಜನಿ - ಇನ್ಮುಂದೆ ವಾರಕ್ಕೊಂದು ಕಥೆ ಬರೆಯಲಿದ್ದಾರೆ ರಂಜನಿ ರಾಘವನ್

ನಟಿ ರಂಜನಿ ರಾಘವನ್ ಇದೀಗ ಮತ್ತೊಂದು ಹೊಸ ಸುದ್ದಿಯನ್ನು ತಮ್ಮ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದಾರೆ. ಹೌದು, ರಂಜನಿ ರಾಘವನ್ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ‘ಅವಧಿ’ ವೆಬ್ ಸೈಟ್​​ನಲ್ಲಿ ಇನ್ನು ಮುಂದೆ ವಾರಕ್ಕೊಮ್ಮೆ ಕಥೆಗಳನ್ನು ಬರೆಯುವುದಾಗಿ ತಿಳಿಸಿದ್ದಾರೆ.

ನಟಿ ರಂಜನಿ ರಾಘವನ್
ನಟಿ ರಂಜನಿ ರಾಘವನ್
author img

By

Published : May 12, 2021, 5:17 PM IST

ನಟಿ ರಂಜನಿ ರಾಘವನ್ ಕನ್ನಡ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ ಮುಖ. ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಭಾರೀ ಜನಪ್ರಿಯತೆ ಪಡೆದ ರಂಜನಿ, ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡತಿ’ ಧಾರಾವಾಹಿಯಲ್ಲಿ ಭುವಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ರಂಜನಿ, ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ತಮ್ಮ ಹೊಸ ಹೊಸ ಫೋಟೋಗಳನ್ನು, ಧಾರಾವಾಹಿ ಮತ್ತು ಸಿನಿಮಾಗೆ ಸಂಬಂಧಿಸಿದಂತೆ ಹೊಸ ಹೊಸ ಮಾಹಿತಿಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

“ಎಲ್ಲರಿಗೂ ಹಾಯ್! ಇವತ್ತು ನನ್ ಫೋನ್​​ನ ಸ್ಕ್ರೀನ್ ಟೈಮ್ ಅಪ್ಡೇಟ್ ನೋಡ್ದಾಗ ಅನ್ಸಿದ್ದು, ಹೋದ್ ವರ್ಷ ಲಾಕ್​ಡೌನ್​ ಆದಾಗ್ಲಿಂದ ನಾವು ಮೊಬೈಲ್​ಗೆ ತುಂಬಾ ಹತ್ರವಾಗಿದ್ದೀವಿ ಅಂತ. ಅದ್ರಲ್ಲೇ ಸಿನಿಮಾ ನೋಡ್ತೀವಿ, ಫೇಸ್​ಬುಕ್, ಯೂಟ್ಯೂಬ್ ವಿಡಿಯೋಗಳು, ಆರ್ಟಿಕಲ್​ಗಳು, ನ್ಯೂಸ್​ ಎಲ್ಲಾ ಅದ್ರಲ್ಲೇ ನೋಡ್ತೀವಿ. ಹಾಗೇ ಪುಸ್ತಕಾನೂ ಅದ್ರಲ್ಲೇ ಓದೋದನ್ನ ಅಭ್ಯಾಸ ಮಾಡ್ಕೋಬೋದಲ್ವಾ? ಕೈಲಿ ಹಿಡ್ಕೊಂಡು ಪೇಜ್ ತಿರುಗಿಸಿ ಓದೋದ್ರ ಮುಂದೆ ಇದು ಸ್ವಲ್ಪ uncomfortable ಅನ್ಸಿದ್ರೂ we will end up reading more books ಅನ್ಸುತ್ತೆ. ಮತ್ತೆ ಈಗಾಗ್ಲೆ ಪೋಸ್ಟ್​​ನಲ್ಲಿ ಇರೋದನ್ನ ನೀವು ಓದಿರ್ತೀರಿ, ಅವಧಿ ವೆಬ್​ಸೈಟ್​​ಗೆ ಇನ್ಮುಂದೆ ನಾನು ವಾರಕ್ಕೊಂದು ಸಣ್ಣ ಕಥೆ ಬರೀತಿದ್ದೀನಿ. ನೀವು ಸಮಯ ಮಾಡ್ಕೊಂಡು ಓದ್ತೀರಿ ಅಂದುಕೊಂಡಿದ್ದೀನಿ. ಸ್ವಲ್ಪ ನರ್ವಸ್ನೆಸ್ ಇದೆ. ಹಾಗೇ ಏನಾದ್ರು ಕಲಿಯೋಕೆ ಸಿಗುತ್ತೆ ಅನ್ನೋ ಖುಷಿನೂ ಇದೆ” ಎಂದು ಬರೆದುಕೊಂಡಿದ್ದಾರೆ ರಂಜನಿ ರಾಘವನ್.

ಕನ್ನಡತಿ ಖ್ಯಾತಿಯ ರಂಜನಿ
ಕನ್ನಡತಿ ಖ್ಯಾತಿಯ ರಂಜನಿ ರಾಘವನ್

ಇಷ್ಟು ದಿನ ನಟಿಯಾಗಿ ತಮ್ಮ ಪ್ರತಿಭೆಯನ್ನು ತೋರಿದ್ದ ರಂಜನಿ, ಇನ್ನು ಮುಂದೆ ಕಥೆಗಾರ್ತಿಯಾಗಿ ಯಾವ ರೀತಿ ಮೋಡಿ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.