ಟಾಲಿವುಡ್ ಸೂಪರ್ ಸ್ಟಾರ್ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಆಗಿದ್ದಾಗಲಿ ಒಂದು ಕೈ ನೋಡೇ ಬಿಡೋಣ ಅಂತಾ ಈ ಚುನಾವಣೆಯಲ್ಲಿ ತಮ್ಮ ಪಕ್ಷದ ಪ್ರಾಬಲ್ಯ ಮೆರೆಯಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಳೆದ ವರ್ಷದಿಂದಲೇ ರಾಜ್ಯಾದ್ಯಂತ ಸುತ್ತಾಟ ನಡೆಸಿ, ಪಕ್ಷದ ಬಲವರ್ಧನಗೆ ಪಣ ತೊಟ್ಟಿದ್ದಾರೆ. ಲೆಕ್ಕವಿಲ್ಲದಷ್ಟು ಸಾರ್ವಜನಿಕ ಸಭೆಗಳನ್ನು ನಡೆಸಿ ಮತದಾರರಿಗೆ ಹತ್ತಿರವಾಗುತ್ತಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಪವನ್, ಭೀಮಾವರಂ ಕ್ಷೇತ್ರ ಆಯ್ದುಕೊಂಡಿದ್ದಾರೆ. ಈ ಕುರಿತು ಮೊನ್ನೆಯಷ್ಟೆ ಅಧಿಕೃತವಾಗಿ ಘೋಷಿಸಿ, ಕ್ಷೇತ್ರ ಸುತ್ತಾಟ ನಡೆಸಿದ್ದಾರೆ. ಆದರೆ, ಈ ಪವರ್ ಸ್ಟಾರ್ಗೆ ಪಂಚ್ ಕೊಡಲು ಟಾಲಿವುಡ್, ಬಾಲಿವುಡ್ನ ಕಾಂಟ್ರವರ್ಸಿ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ರಾಮ್ಗೋಪಾಲ್ ವರ್ಮಾ ಮುಂದಾಗಿದ್ದಾರೆ. ತಾವು ಕೂಡ ಭೀಮಾವರಂ ಕ್ಷೇತ್ರದಲ್ಲಿ ಸ್ಪರ್ಧಿಸಿ, ಪವನ್ ವಿರುದ್ಧ ತೊಡೆ ತಟ್ಟುವುದಾಗಿ ಘೋಷಿಸಿದ್ದಾರೆ. ಬುಧವಾರ ರಾತ್ರಿ ಟ್ವಿಟ್ಟರ್ನಲ್ಲಿ ತಮ್ಮ ರಾಜಕೀಯ ಎಂಟ್ರಿ ರಿವೀಲ್ ಮಾಡಿರುವ ವರ್ಮಾ, ಶೀಘ್ರದಲ್ಲಿ ಪೂರ್ಣ ಮಾಹಿತಿ ನೀಡುವುದಾಗಿ ಹೇಳಿಕೊಂಡಿದ್ದಾರೆ.
I am contesting against @PawanKalyan in Bhimavaram ..Await DETAILS
— Ram Gopal Varma (@RGVzoomin) March 27, 2019 " class="align-text-top noRightClick twitterSection" data="
">I am contesting against @PawanKalyan in Bhimavaram ..Await DETAILS
— Ram Gopal Varma (@RGVzoomin) March 27, 2019I am contesting against @PawanKalyan in Bhimavaram ..Await DETAILS
— Ram Gopal Varma (@RGVzoomin) March 27, 2019
ಬಹುಶಃ ವರ್ಮಾ ಸೀರಿಯಸ್ ಆಗಿಯೇ ರಾಜಕೀಯ ಎಂಟ್ರಿ ಬಗ್ಗೆ ಟ್ವಿಟ್ ಮಾಡಿರಬಹುದು. ಆದರೆ, ಜನರು ಮಾತ್ತ ಆರ್‌ಜಿವಿಯ ಹೇಳಿಕೆಯನ್ನು ತುಂಬಾ ಕಾಮಿಡಿಯಾಗಿ ಸ್ವೀಕರಿಸಿದ್ದಾರೆ. ಅಷ್ಟೇ ಏಕೆ ಬಾಯಿಗೆ ಬಂದ ಹಾಗೆ ಟ್ರೋಲ್ ಮಾಡಿ ವರ್ಮಾ ಕಾಲೆಳೆದಿದ್ದಾರೆ.
ಏನ್ ವರ್ಮಾ ? ಕುಡಿದಿದ್ದು ಜಾಸ್ತಿ ಆಗಿದೆಯಾ.. ಇನ್ನೊಂದು ಸ್ವಲ್ಪ ಮಲಗು ಎಂದು ಒಬ್ಬರುಟ್ವೀಟಿಸಿದ್ರೇ, ಯಾವುದೋ ಕಡಿಮೆ ಬೆಲೆಯ ಎಣ್ಣೆ ಹೊಡಿದು ಟ್ವೀಟ್ ಮಾಡಿರಬಹುದು ಎಂದು ಕೆಲವರು ಚೇಡಿಸಿದ್ದಾರೆ. ಸುಮ್ನಿರಲಾರದೇ ಇರುವೆ ಬಿಟ್ಕೊಂಡ ಸ್ಥಿತಿಯಾಗಿದೆ ರಾಮಗೋಪಾಲ್ ವರ್ಮಾ ಸ್ಥಿತಿ.