ETV Bharat / sitara

'ರಾಜಾ ರಾಣಿ'ಯಾಗಿ ಬರ್ತಾರಾ ಬಿಗ್​ಬಾಸ್ ಅರ್ವಿಯಾ ಜೋಡಿ? - ಅರ್ವಿಯಾ ಜೋಡಿ

ಇತ್ತೀಚೆಗಷ್ಟೇ ಕಲರ್ಸ್‌ ಕನ್ನಡದಲ್ಲಿ ಪ್ರಾರಂಭವಾಗಿರುವ ರಾಜಾ-ರಾಣಿ ರಿಯಾಲಿಟಿ ಶೋನಲ್ಲಿ ವೈಲ್ಡ್ ಕಾರ್ಡ್ ಮೂಲಕ ಅರ್ವಿಯಾ ಜೋಡಿಯನ್ನು ಕರೆತರುವ ಯೋಚನೆಯಲ್ಲಿದೆ.

Arvind and Divya uruduga
ಬಿಗ್​ಬಾಸ್ ಅರ್ವಿಯಾ ಜೋಡಿ
author img

By

Published : Aug 11, 2021, 11:46 AM IST

ಬಿಗ್​ಬಾಸ್ ಸೀಸನ್ 8ರ ಸ್ಪರ್ಧೆಯಲ್ಲಿ ರನ್ನರ್‌ಅಪ್​ ಅರವಿಂದ್ ಹಾಗೂ ಮೂರನೇ ಸ್ಥಾನದ ಪಡೆದ ದಿವ್ಯಾ ಉರುಡುಗ ಜೋಡಿಗೆ ಅಭಿಮಾನಿ ಬಳಗವೇ ಇದೆ. ಈ ಜೋಡಿ ಈಗಾಗಲೇ 'ಅರ್ವಿಯಾ' ಎಂದೇ ಜನಪ್ರಿಯತೆ ಗಳಿಸಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಪ್ರತ್ಯೇಕ​ ಫ್ಯಾನ್ಸ್​​ ಗ್ರೂಪ್​ ಹೊಂದಿದೆ. ಇದೀಗ ಇಬ್ಬರನ್ನು ಮತ್ತೆ ಕಿರುತೆರೆಗೆ ತರುವ ಚಿಂತನೆಯಲ್ಲಿದೆ ಕಲರ್ಸ್ ಕನ್ನಡ ವಾಹಿನಿ.

ಇತ್ತೀಚೆಗಷ್ಟೇ ಪ್ರಾರಂಭವಾಗಿರುವ ಈ ರಿಯಾಲಿಟಿ ಶೋನಲ್ಲಿ ವಾಹಿನಿಯು ವೈಲ್ಡ್ ಕಾರ್ಡ್ ಮೂಲಕ ಅರ್ವಿಯಾ ಜೋಡಿಯನ್ನು ಕರೆತರುವ ಯೋಚನೆಯಲ್ಲಿದೆ. ಇದರಿಂದಾಗಿ ಟಿಆರ್​ಪಿ (ಟೆಲಿವಿಷನ್ ರೇಟಿಂಗ್‌ ಪಾಯಿಂಟ್‌) ಕೂಡ ಹೆಚ್ಚಾಗಬಹುದು ಅನ್ನೋದು ವಾಹಿನಿಯ ಯೋಜನೆಯೂ ಆಗಿದೆ.

Arvind and Divya uruduga
ಅರ್ವಿಯಾ ಜೋಡಿ (ಬಿಗ್‌ ಬಾಸ್ ಕಾರ್ಯಕ್ರಮ)

ದಿವ್ಯಾ ಉರುಡುಗ ಹಾಗೂ ಅರವಿಂದ್ ಮೊದಲ ಇನ್ನಿಂಗ್ಸ್​ನಿಂದಲೇ ಸ್ನೇಹ ಹಾಗೂ ಪ್ರೀತಿ ಗಳಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡರು. ಎರಡನೇ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲೇ ಇಬ್ಬರಲ್ಲೂ ಪ್ರೀತಿ ಆರಂಭವಾಗಿದೆ ಎನ್ನಲಾಗಿತ್ತು.

ಈ ಜೋಡಿಯು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು ಅನ್ನೋದಕ್ಕೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಪಡೆದ ಮತಗಳೇ ಸಾಕ್ಷಿ. ಹೀಗಾಗಿ, ಅದೇ ಗುಂಗಿನಲ್ಲಿರುವ ಪ್ರೇಕ್ಷಕರಿಗೆ ರಾಜಾ ರಾಣಿ ರಿಯಾಲಿಟಿ ಶೋ ಮೂಲಕ ಇವರನ್ನು ಮತ್ತೆ ತೆರೆಯ ಮೇಲೆ ತೋರಿಸಲು ವಾಹಿನಿಯು ಉತ್ಸುಕವಾಗಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.