ನಟ ರಾಘವೇಂದ್ರ ರಾಜ್ಕುಮಾರ್ ಅವರು ನಿರ್ಮಾಪಕರಾಗಿ ಕಿರುತೆರೆಗೆ ಮರಳಿರುವುದು ತಿಳಿದ ವಿಷಯ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿ ನಿರ್ಮಿಸಲಾಗಿರುವ 'ಮರಳಿ ಬಂದಳು ಸೀತೆ' ಧಾರಾವಾಹಿ ವಿಭಿನ್ನ ಕಥಾ ಶೈಲಿಯ ಮೂಲಕ ವೀಕ್ಷಕರ ಮನ ಸೆಳೆಯುತ್ತಿದೆ.
'ಮರಳಿ ಬಂದಳು ಸೀತೆ' ಧಾರಾವಾಹಿ ಯಶಸ್ವಿಯಾಗಿ ಸಾಗುತ್ತಿದ್ದು, ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ ರಾಘವೇಂದ್ರ ರಾಜ್ಕುಮಾರ್ ಕೈ ಹಾಕಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದನ್ನು ನಿರ್ಮಾಣ ಮಾಡಲು ರಾಘಣ್ಣ ತಯಾರಾಗಿದ್ದಾರೆ. ಧಾರಾವಾಹಿಯ ಹೆಸರು ಮಾತ್ರ ಬಹಿರಂಗವಾಗಿದ್ದು, ಉಳಿದ ಮಾಹಿತಿ ಗೌಪ್ಯವಾಗಿದೆ. ಬಹುತಾರಾಗಣ ಹೊಂದಿರುವ ಈ ಧಾರಾವಾಹಿಗೆ 'ಜೀವ ಹೂವಾಗಿದೆ' ಎಂದು ಹೆಸರಿಡಲಾಗಿದೆ. ಇನ್ನು ಧಾರಾವಾಹಿಯಲ್ಲಿ ಯಾರೆಲ್ಲಾ ನಟಿಸಲಿದ್ದಾರೆ, ನಿರ್ದೇಶಕ ಯಾರು, ಪ್ರಸಾರವಾಗುವುದು ಯಾವಾಗ ಎಂಬ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ.