ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ‘ರಾಧಾರಮಣ‘ ಧಾರಾವಾಹಿ ಎಲ್ಲಾ ಮಹಿಳೆಯರಿಗೂ ಅಚ್ಚುಮೆಚ್ಚು. ಧಾರಾವಾಹಿಯಲ್ಲಿ ರಾಧಾ ಪಾತ್ರ ಮಾಡುತ್ತಿದ್ದ ಶ್ವೇತಾ ಪ್ರಸಾದ್ ಇದೀಗ ಧಾರಾವಾಹಿಯಿಂದ ಹೊರಬರುತ್ತಿದ್ದಾರೆ. ಇದು ನಿಜಕ್ಕೂ ವೀಕ್ಷಕರಿಗೆ ಬೇಸರ ಉಂಟುಮಾಡುವ ಸಂಗತಿ. ಮಿಸ್ ರಾಧಾ ಎಂದೇ ಫೇಮಸ್ ಆಗಿದ್ದ ಶ್ವೇತಾ ಕಿರುತೆರೆಯಿಂದ ಬ್ರೇಕ್ ಬಯಸಿ ಸಿರಿಯಲ್ನಿಂದ ಹೊರಬರಲು ನಿರ್ಧರಿಸಿದ್ದು, ಇನ್ನು 15 ದಿನಗಳು ಮಾತ್ರ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಧಾರಾವಾಹಿಯಲ್ಲಿ ಶ್ವೇತಾ ಅವರು ರಮಣ ಪಾತ್ರಧಾರಿಗೆ ಪತ್ನಿಯಾಗಿ ಶಾಂತ ಸ್ವಭಾವದ ಗೃಹಿಣಿಯಾಗಿ ಕಾಣಿಸಿಕೊಂಡಿದ್ದರು. ಇದರಿಂದ ಅಪಾರ ಪ್ರೇಕ್ಷಕರು ಇವರನ್ನು ಮೆಚ್ಚಿಕೊಂಡಿದ್ದರು. ಆದರೆ ಇದೀಗ ಈ ಧಾರಾವಾಹಿಯಿಂದ ಶ್ವೇತಾ ಅವರು ಹೊರ ಬರುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.
ಧಾರಾವಾಹಿಗಾಗಿ ನಟಿ ಶ್ವೇತಾ ಅವರು ಒಂದು ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಆ ಒಪ್ಪಂದ ಮುಗಿದು ವರ್ಷವೇ ಆಗಿದೆ. ಇದೇ ಕಾರಣದಿಂದ ಶ್ವೇತಾ ಸೀರಿಯಲ್‍ನಿಂದ ಹೊರ ಬರುವ ನಿರ್ಧಾರ ಮಾಡಿದ್ದಾರಂತೆ. ಶ್ವೇತಾ ಅವರು ಧಾರಾವಾಹಿ ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
'ರಾಧಾರಮಣ' ಧಾರಾವಾಹಿ ಕಲಾವಿದರು, ಕಥೆ, ಅಭಿನಯ ಹೀಗೆ ಎಲ್ಲಾ ಕಾರಣಕ್ಕೂ ಈ ಧಾರಾವಾಹಿ ಟಿಆರ್‌ಪಿ ಹೆಚ್ಚಿಸಿಕೊಂಡಿತ್ತು. ಕಿರುತೆರೆಯ 'ದಿ ಮೋಸ್ಟ್ ಡಿಸೈರಬಲ್ ವುಮೆನ್' ಪ್ರಶಸ್ತಿಗೆ ಕೂಡಾ ಶ್ವೇತಾ ಪಾತ್ರರಾಗಿದ್ದರು. ಇನ್ನು ಮುಂದೆ ರಾತ್ರಿ 9 ಗಂಟೆಗೆ ಅಭಿಮಾನಿಗಳು ರಾಧಾ ಮಿಸ್‌ನ ಮಿಸ್ ಮಾಡಿಕೊಳ್ಳುವುದಂತೂ ಗ್ಯಾರಂಟಿ. ಹೊಸ ರಾಧಾ ಮಿಸ್ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಕಾಡತೊಡಗಿದೆ.