ETV Bharat / sitara

ಕೋಟ್ಯಧಿಪತಿ ವೇದಿಕೆಯಲ್ಲಿ ಜ್ಯೂ. ಎನ್​​ಟಿಆರ್​ ನೆನಪಿಸಿಕೊಂಡ ಪುನೀತ್ ರಾಜ್​​​​ಕುಮಾರ್

author img

By

Published : Sep 23, 2019, 10:15 AM IST

ನಿನ್ನೆಯ ಕನ್ನಡದ ಕೋಟ್ಯಧಿಪತಿ ಎಪಿಸೋಡ್​​ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ತೆಲುಗು ನಟ ಜ್ಯೂನಿಯರ್ ಎನ್​​​​ಟಿಆರ್ ಹಾಗೂ ತಮ್ಮ ಸ್ನೇಹವನ್ನು ನೆನೆದರು. ತಮ್ಮ ‘ಚಕ್ರವ್ಯೂಹ’ ಸಿನಿಮಾಗೆ ಹಾಡು ಹೇಳಿದ ಜ್ಯೂ. ಎನ್​​ಟಿಆರ್​​​​​ಗೆ ಧನ್ಯವಾದ ಕೂಡಾ ಅರ್ಪಿಸಿದರು.

ಪುನೀತ್, ಜ್ಯೂ.ಎನ್​​ಟಿಆರ್

ಡಾ. ರಾಜ್​​​​​​​​ಕುಮಾರ್ ಹಾಗೂ ಎನ್​​.ಟಿ. ರಾಮರಾವ್​​​​ ಕುಟುಂಬಕ್ಕೆ ಬಹಳ ವರ್ಷಗಳ ಸ್ನೇಹ ಇರುವುದು ಎಲ್ಲರಿಗೂ ತಿಳಿದ ವಿಷಯ. ಅದು ಅವರ ಮುಂದಿನ ತಲೆಮಾರಿಗೆ ಕೂಡ ಹಬ್ಬಿರುವುದು ನಿಜ. ಬಾಲಕೃಷ್ಣ ಅವರು ಶಿವಣ್ಣ ಅವರ ಬಹುತೇಕ ಸಿನಿಮಾಗಳ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ. ಶಿವರಾಜ್​​ಕುಮಾರ್ ಕೂಡ ಬಾಲಕೃಷ್ಣ ಅವರ ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಚಕ್ರವ್ಯೂಹ’ಕ್ಕೆ ಜ್ಯೂನಿಯರ್ ಎನ್​ಟಿಆರ್ ಒಂದು ಸಾಂಗ್​ಅನ್ನೂ ಹೇಳಿದ್ದಾರೆ.

ಇನ್ನು ಪುನೀತ್ ರಾಜ್​ಕುಮಾರ್ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಭಾನುವಾರ ರಾತ್ರಿ ‘ಕನ್ನಡದ ಕೋಟ್ಯಧಿಪತಿ’ ಎಪಿಸೋಡ್​​​​​​ನಲ್ಲಿ ಹಾಟ್​ ಸೀಟಿನಲ್ಲಿ ಕುಳಿತಿದ್ದ ತುಮಕೂರಿನ ತನ್ಮಯ ಅವರಿಗೆ ಒಂದು ಆಡಿಯೋ ಪ್ರಶ್ನೆ ಎದುರಾಯಿತು. ಪುನೀತ್ ರಾಜ್​ಕುಮಾರ್ ಅಭಿನಯದ ‘ಚಕ್ರವ್ಯೂಹ’ ಸಿನಿಮಾದ 'ಗೆಳೆಯ ಗೆಳೆಯ ಗೆಲುವು ನಮ್ಮದಯ್ಯ' ಹಾಡನ್ನು ಕೇಳಿಸಿ ಆ ಹಾಡು ಹಾಡಿದ ಗಾಯಕ ಯಾರು ಎಂದು ಕೇಳಲಾಯಿತು. ಕಡೆಗೂ ತನ್ಮಯ ಆ ಧ್ವನಿ ಜ್ಯೂನಿಯರ್ ಎನ್​​ಟಿಆರ್ ಅವರದ್ದು ಎಂದು ಉತ್ತರಿಸಿದರು.

ನಂತರ ಜ್ಯೂ. ಎನ್​​ಟಿಆರ್ ನೆನಪಿಸಿಕೊಂಡ ಪುನೀತ್ ರಾಜಕುಮಾರ್ ಆತ ನನ್ನ ನೆಚ್ಚಿನ ಸ್ನೇಹಿತ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಸಹೋದರ ಇದ್ದಂತೆ ಎಂದು ಇಬ್ಬರ ಸ್ನೇಹವನ್ನು ನೆನೆದರು. ಜ್ಯೂನಿಯರ್ ಎನ್​​ಟಿಆರ್ ಅವರ ತಾಯಿ ಉಡುಪಿಯ ಕುಂದಾಪುರದವರು. 'ಚಕ್ರವ್ಯೂಹ' ಚಿತ್ರಕ್ಕೆ ಹಾಡು ಹೇಳುವಾಗ ತಾರಕ್ ತಾಯಿ ತಮ್ಮ ಮನೆಗೆ ಕರೆಸಿ ಒಳ್ಳೆ ಆತಿಥ್ಯ ನೀಡಿದ್ದರು. ನಮಗೆ ಇಷ್ಟವಾದ ಅಡುಗೆ ಮಾಡಿದ್ದರು ಎಂದು ಪುನೀತ್​ ನೆನಪಿಸಿಕೊಂಡರು. ಅವರ ಸ್ನೇಹವನ್ನು ಎಂದಿಗೂ ಮರೆಯಲಾರೆ ಎಂದು ತಮ್ಮ ಚಿತ್ರಕ್ಕೆ ಹಾಡಿದ ಜ್ಯೂ. ಎನ್​ಟಿಆರ್​ಗೆ ಇದೇ ಸಂದರ್ಭದಲ್ಲಿ ಧನ್ಯವಾದ ಹೇಳಿದ್ರು.

ಜೂನಿಯರ್ ಎನ್ ಟಿ ಆರ್ ನೆನಪಿಸಿಕೊಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್

ಡಾ ರಾಜಕುಮಾರ್ ಹಾಗೂ ಎನ್ ಟಿ ರಾಮ ರಾವ್ ಕುಟುಂಬಕ್ಕೂ ಬಹಳ ವರ್ಷಗಳ ನಂಟು, ಸ್ನೇಹ ಇರುವುದು ತಿಳಿದಿದೆ. ಅದು ಮುಂದಿನ ತಲೆಮಾರುಗಳಿಗೂ ಸಹ ಹಬ್ಬಿದೆ ಎಂಬುದು ನಿಜ. ಬಾಲಕೃಷ್ಣ ಅವರು ಶಿವಣ್ಣ ಚಿತ್ರಗಳ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ, ಶಿವಣ್ಣ ಸಹ ಬಾಲಕೃಷ್ಣ ಅವರ ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ದಾರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರ ಚಕ್ರವ್ಯೂಹಕ್ಕೆ  ಜೂನಿಯರ್ ಎನ್ ಟಿ ಆರ್ ಒಂದು ಹಾಡನ್ನು ಸಹ ಹೇಳಿದ್ದಾರೆ.

ನಿನ್ನೆ ರಾತ್ರಿ ಕನ್ನಡದ ಕೋಟ್ಯಾದಿಪತಿ ಕಾರ್ಯಕ್ರಮದಲ್ಲಿ ಒಂದು ಪ್ರಶ್ನೆ ಆಡಿಯೋ ಕೇಳಿ ಗುರುತಿಸಬೇಕಾದ್ದು ಹಾಟ್ ಸೀಟ್ ಅಲ್ಲಿ ಕುಳಿತಿದ್ದ ತುಮಕೂರಿನ ತಣ್ಮಯಿ ಅವರಿಗೆ ಎದುರಾಯಿತು. ಅದು ಜೂನಿಯರ್ ಎನ್ ಟಿ ಆರ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರಕ್ಕೆ ಹಾಡಿದ ಗೆಳೆಯ ಗೆಳೆಯ ಗೆಲುವು ನಮ್ಮದಯ್ಯ....ಎಂಬ ಹಾಡು. ಈ ಹಾಡಿಗೆ ತಣ್ಮಯಿ ಉತ್ತರಿಸಿದರು ಸ್ವಲ್ಪ ತಡವರಿಸಿ.

ಆದರೆ ಪುನೀತ್ ರಾಜಕುಮಾರ್ ತಮ್ಮ ನೆಚ್ಚಿನ ಸ್ನೇಹಿತ, ಸಹೋದರನಂತೆ ಎಂದು ಜೂನಿಯರ್ ಎನ್ ಟಿ ಆರ್ ಅವರನ್ನು ನೆನೆದು. ಅವರ ಕುಟುಂಬದ ಜೊತೆ ಇರುವ ಹಲವಾರು ವರ್ಷಗಳ ಸ್ನೇಹವನ್ನು ನೆನೆದರು. ಚಕ್ರವ್ಯೂಹ ಚಿತ್ರದ ಹಾಡು ಹೇಳುವಾಗ ಜೂನಿಯರ್ ಎನ್ ಟಿ ಆರ್ ಅವರು ಹೈದರಾಬಾದಿಗೆ ಕರೆಸಿಕೊಂಡು ತಮ್ಮ ಮನೆಯಲ್ಲಿ ಅಥಿತ್ಯವನ್ನು ಸಹ ನೀಡಿದರು. ಅವರ ತಾಯಿ ಉಡುಪಿ-ಕುಂದಾಪುರದವರು. ನಮಗೆ ಇಷ್ಟವಾಗುವ ಅಡಿಗೆ ಸಹ ಮಾಡಿದ್ದರು. ಜೂನಿಯರ್ ಎನ್ ಟಿ ಆರ್ ಸ್ನೇಹ ಎಂದಿಗೂ ಮರೆಯಲಾರೆ, ಗೆಳೆಯ ಗೆಳೆಯ...ಅಂತಲೇ ಹಾಡು ಹೇಳಿದರು ನನ್ನ ಚಿತ್ರಕ್ಕೆ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತೆ ಧನ್ಯವಾದ ಹೇಳಿದರು. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.