ETV Bharat / sitara

ಪ್ರೇಮಂ ಪೂಜ್ಯಂ-2: ಪ್ರೇಮಿಗಳ ದಿನದಂದು ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಚಿತ್ರಕ್ಕೆ ಚಾಲನೆ - Lovely Star Prem new movies

'ನೆನಪಿರಲಿ' ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 'ಪ್ರೇಮಂ ಪೂಜ್ಯಂ' ಸಿನಿಮಾ ಬಿಡುಗಡೆಯಾಗಿ 50ನೇ ದಿನದ ಸನಿಹದಲ್ಲಿರುವ ಸಂದರ್ಭದಲ್ಲೇ, ಚಿತ್ರದ ನಿರ್ದೇಶಕ ಡಾ.ರಾಘವೇಂದ್ರ ಎರಡನೇ ಭಾಗದ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ್ದಾರೆ.

Lovely Star Prem
Lovely Star Prem
author img

By

Published : Dec 22, 2021, 7:34 AM IST

ಲವ್ಲಿ ಸ್ಟಾರ್ ಪ್ರೇಮ್ ನಟನೆಯ 25ನೇ ಚಿತ್ರವಾಗಿ ತೆರೆಕಂಡ ‘ಪ್ರೇಮಂ ಪೂಜ್ಯಂ’ ಸಿನಿಮಾ ಗೆಲುವು ಕಂಡಿತ್ತು. ಸಿನಿಮಾ ರಿಲೀಸ್​ ಆಗಿ 2 ತಿಂಗಳು ಪೂರ್ಣಗೊಳ್ಳುವ ಮೊದಲೇ ಸೀಕ್ವೆಲ್​ ಆಗುತ್ತಿದೆ. ಪ್ರೇಮ್​ ಅವರ 26ನೇ ಚಿತ್ರವಾಗಿ ‘ಪ್ರೇಮಂ ಪೂಜ್ಯಂ 2′ ಬರಲಿದೆ.

ಹೌದು, ಕನ್ನಡ ಚಿತ್ರರಂಗದಲ್ಲಿ ಪಾರ್ಟ್- 2 ಸಿನಿಮಾಗಳ ಟ್ರೆಂಡ್ ಶುರುವಾಗಿದೆ. ಈ ವರ್ಷ ಸೈಲೆಂಟ್ ಆಗಿ ಹಿಟ್ ಆದ 'ಪ್ರೇಮಂ ಪೂಜ್ಯಂ' ಸಿನಿಮಾ ಕೂಡ ಸಿಕ್ವೇಲ್ ಆಗುತ್ತಿದೆ. 'ನೆನಪಿರಲಿ' ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಸಿನಿಮಾಗಳು ಅಂದ್ರೆ ಕಾಲೇಜ್ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಆರಂಭದಿಂದಲೂ ಪ್ರೇಮ್​ ಯೂಥ್‌ ಬೇಸ್ ಲವ್‌ಸ್ಟೋರಿಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಈ ವರ್ಷ ಬಿಡುಗಡೆಯಾದ 'ಪ್ರೇಮಂ ಪೂಜ್ಯಂ' ದಲ್ಲಿ ಮೆಡಿಕಲ್ ವಿದ್ಯಾರ್ಥಿಯಾಗಿ ನಟ ಪ್ರೇಮ್ ಕಾಣಿಸಿಕೊಂಡು ಯುವಪ್ರೇಮಿಗಳ ಫೇವರಿಟ್ ಹೀರೋ ಆಗಿದ್ದಾರೆ. ಈ ಸಿನಿಮಾವನ್ನು ಡಾ.ಬಿ.ಎಸ್. ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಇದೀಗ ಚಿತ್ರ 50ನೇ ದಿನಕ್ಕೆ ಸನಿಹದಲ್ಲಿದ್ದು, ನೂರನೇ ದಿನದತ್ತ ದಾಪುಗಾಲು ಹಾಕಿದೆ.

ಲವ್ಲಿ ಸ್ಟಾರ್ ಪ್ರೇಮ್
ಲವ್ಲಿ ಸ್ಟಾರ್ ಪ್ರೇಮ್

ಈ ಚಿತ್ರವನ್ನು ವೀಕ್ಷಿಸಿದ ತಮಿಳು, ತೆಲುಗು ನಿರ್ಮಾಪಕರಿಂದ ರೀಮೇಕ್ ಹಕ್ಕಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆಯಂತೆ.‌ ಇದರ ಜೊತೆಗೆ ಓಟಿಟಿಯಿಂದಲೂ ಉತ್ತಮ ಆಫರ್ ಬರುತ್ತಿದ್ದು, ನಿರ್ಮಾಪಕರು ಸದ್ಯಕ್ಕೆ ಯಾವುದನ್ನು ಒಪ್ಪಿಕೊಳ್ಳದೆ ಚಿತ್ರವು ನೂರು ದಿನಗಳ ಪ್ರದರ್ಶನವಾದ ನಂತರ ಬೇರೆ ಭಾಷೆಗೆ ಕೊಡಬೇಕೆಂಬ ನಿರ್ಧಾರ ತಳೆದಿದ್ದಾರೆ. ಇದರ ಜೊತೆಗೆ ನಿರ್ದೇಶಕ ಡಾ.ಬಿ.ಎಸ್. ರಾಘವೇಂದ್ರ ಮತ್ತೊಂದು ಸಿಹಿ‌ ಸುದ್ದಿಯನ್ನ ಅನೌಸ್ ಮಾಡಿದ್ದಾರೆ. ಹೌದು, 'ಪ್ರೇಮಂ ಪೂಜ್ಯಂ' ಚಿತ್ರದ ಮುಂದುವರಿದ ಭಾಗವಾಗಿ ಪ್ರೇಮಂ ಪೂಜ್ಯಂನ ಸೀಕ್ವೆಲ್ ಮಾಡಲು ಮುಂದಾಗಿದ್ದು, ಈಗಾಗಲೇ ಇದಕ್ಕೆ ಚಿತ್ರಕಥೆಯನ್ನೂ ಸಹ ರೆಡಿ ಮಾಡಿಕೊಂಡಿದ್ದಾರೆ. ಮುಂದಿನ ಭಾಗದಲ್ಲಿ ಒಂದಷ್ಟು ಕುತೂಹಲದ ಕಥೆಯನ್ನು ಬಿಚ್ಚಿಡಲು ನಿರ್ದೇಶಕ ನಿರ್ಧರಿಸಿದ್ದಾರೆ.

Premam poojyam
ನಟ ಪ್ರೇಮ್ ಅಭಿಮಾನಿಗಳೊಂದಿಗೆ ಫೋಟೋ ತೆಗೆದುಕೊಳ್ಳುತ್ತಿರುವ ಕ್ಷಣ

ಪ್ರೇಮಿಗಳ ದಿನವಾದ 2022ರ ಫೆಬ್ರವರಿ 14ರಂದು 'ಪೇಮಂ ಪೂಜ್ಯಂ' ಚಿತ್ರದ ಪಾರ್ಟ್ 2 ಗೆ ಮುಹೂರ್ತ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ಕಲಾವಿದರು, ತಂತ್ರಜ್ಞರೇ ಈ ಚಿತ್ರದಲ್ಲೂ ಸಹ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.

ಲವ್ಲಿ ಸ್ಟಾರ್ ಪ್ರೇಮ್
ಲವ್ಲಿ ಸ್ಟಾರ್ ಪ್ರೇಮ್

ನಾಯಕನ ಪ್ರೀತಿಯ ಕಥೆಯ ವಿವಿಧ ಮಜಲುಗಳನ್ನು ಹೇಳುವ ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶವಿದೆ. ಡಾ.ರಕ್ಷಿತ್ ಕದಂಬಾಡಿ, ಡಾ. ರಾಜಕುಮಾರ್ ಜಾನಕಿರಾಮನ್, ಮನೋಜ್‌ಕೃಷ್ಣನ್ ಹಾಗೂ ರಾಘವೇಂದ್ರ ಎಸ್. ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಡಾ.ಮಾಧವಕಿರಣ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.