ಲಾಕ್ ಡೌನ್ ನಿಂದಾಗಿ ನೋಡುಗರ ಮನರಂಜನೆಯಿಂದ ದೂರವಾಗಿದ್ದ ಸ್ಟಾರ್ ಸುವರ್ಣ ವಾಹಿನಿಯ ಪ್ರೇಮಲೋಕದ ಒಲವಿನ ಜೋಡಿ ಸೂರ್ಯ- ಪ್ರೇರಣಾ ಈಗ ಮತ್ತೆ ಅನುರಾಗದ ಅಲೆ ಮೂಡಿಸಲು ಬರುತ್ತಿದ್ದಾರೆ.
ಪ್ರೇಮದ ಸೆಳೆತ, ಭಾವುಕ ಸನ್ನಿವೇಶಗಳು, ತ್ಯಾಗದ ಹೊಸ ಭಾಷ್ಯವನ್ನು ಪಾತ್ರಗಳು ಬರೆದಿವೆ. ಮನರಂಜನೆಯ ಜೊತೆಗೆ ಭಾವುಕ ತುಡಿತ ಹುಟ್ಟಿಸಿ, ನೋಡುಗರನ್ನು ರಂಜಿಸಿದ ಧಾರಾವಾಹಿ ಪ್ರೇಮಲೋಕ.
ಧಾರಾವಾಹಿಯಲ್ಲಿ ಬರುವ ಸುಧೀರ್ ಪಾತ್ರಧಾರಿ ನಾಯಕ ಸೂರ್ಯ ಹಾಗೂ ನಾಯಕಿ ಪ್ರೇರಣಾರ ಬದುಕಿನ ಮೇಲೆ ದೊಡ್ಡ ಮಟ್ಟದ ಬದಲಾವಣೆ ತರಲಿದ್ದು, ಪ್ರೇಮಲೋಕದ ಕಥೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮನರಂಜನೆಯ ಆಗರವಾಗಲಿದ್ದು, ಪ್ರೀತಿಯ ಸ್ವಚ್ಛ ಸಂದೇಶವನ್ನು ಹೊತ್ತು ಬರಲಿದೆ.
ನಟ, ನಟಿಯರಾದ ವಿಜಯ್ ಸೂರ್ಯ, ಅಂಕಿತಾ ಗೌಡ, ಶಿಶಿರ್ ಶಾಸ್ತ್ರೀ ಹಾಗೂ ದರ್ಶಿನಿ ಗೌಡ ಹಲವು ತಿಂಗಳುಗಳ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡು ಉತ್ಸಾಹದಿಂದ ತೊಡಗಿಕೊಂಡಿದ್ದಾರೆ.
ಲಾಕ್ ಡೌನ್ ನಿಂದ ನಿಂತು ಹೋಗಿದ್ದ ಧಾರವಾಹಿ ಚಿತ್ರೀಕರಣ ಆರಂಭವಾಗಿದ್ದು, ಇದೇ ಜೂನ್.29 ಸೋಮವಾರದಿಂದ ರಾತ್ರಿ 10 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಎಸಿಸೋಡ್ ಗಳು ಪ್ರಸಾರವಾಗಲಿವೆ.
ಜೂನ್. 29ರಿಂದ 'ಪ್ರೇಮಲೋಕ' ಧಾರಾವಾಹಿ ಪ್ರಸಾರ - Premalokha serial telecast on suvarna tv
ಲಾಕ್ ಡೌನ್ ನಿಂದ ನಿಂತಿದ್ದ ಧಾರವಾಹಿಯ ಚಿತ್ರೀಕರಣ ಆರಂಭವಾಗಿದೆ. ಪ್ರೇಮಲೋಕ ಧಾರವಾಹಿಯೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಪ್ರಸಾರವಾಗಲಿದೆ.