ಗುಳಿಕೆನ್ನೆ ಚೆಲುವ ವಿಜಯ್ ಸೂರ್ಯ 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರಬಂದ ನಂತರ 'ಪ್ರೇಮಲೋಕ' ಎಂಬ ವಿಭಿನ್ನ ಪ್ರೇಮಕಥೆ ಇರುವ ಧಾರಾವಾಹಿಯಲ್ಲಿ ನಟಿಸುತ್ತಿರುವುದು ತಿಳಿದ ವಿಷಯ. ಧಾರಾವಾಹಿ ತಂಡ ಇತ್ತೀಚೆಗಷ್ಟೇ ಹೊಸ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಾಯಕನಾಗಿ ವಿಜಯ್ ಸೂರ್ಯ ಹಾಗೂ ಹೊಸ ಪ್ರತಿಭೆ ಅಂಕಿತ ನವ್ಯಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಯಕ ಸೂರ್ಯಕಾಂತ್ ಮತ್ತು ನಾಯಕಿ ಪ್ರೇರಣಾ ನಡುವೆ ಇತ್ತೀಚೆಗಷ್ಟೇ ಪ್ರೀತಿ ಹುಟ್ಟಿದ್ದು, ತನ್ನ ಹೃದಯ ಕದ್ದ ಚೋರನಿಗೆ ಪ್ರೇರಣಾ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಲಿದ್ದಾರೆ. ಇವರಿಬ್ಬರ ಪ್ರೇಮ ಪ್ರಯಾಣ ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿರುವುದಂತೂ ನಿಜ. ಇದರ ಜೊತೆಗೆ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಕೂಡಾ ಸಾಕಷ್ಟು ಸುದ್ದಿ ಮಾಡುತ್ತಿದೆ. 'ಪ್ರೇಮಲೋಕ'ದಲ್ಲಿ ಹೊಸ ಅಲೆ ಎಂಬ ಶೀರ್ಷಿಕೆ ಅಡಿ ಹೊಸ ಅಧ್ಯಾಯ ಆರಂಭವಾಗಲಿದೆ.
ಸೂರ್ಯ ಹಾಗೂ ಪ್ರೇರಣಾ ತಮ್ಮಿಬ್ಬರ ಪ್ರೀತಿಯ ಬಗ್ಗೆ ಮಾತನಾಡುವಾಗ, ಮಾವ ಎಂದು ಕರೆಯುತ್ತಾ ಹೊಸ ಪಾತ್ರದಲ್ಲಿ ನಟಿಸುತ್ತಿರುವ ಹುಡುಗಿಯೊಬ್ಬಳು ನಾಯಕ ಸೂರ್ಯಕಾಂತ್ಗೆ ಹೂವು ತಂದುಕೊಡುತ್ತಾಳೆ. ಪ್ರೋಮೋ ನೋಡಿದರೆ ನಾಯಕ ಸೂರ್ಯಕಾಂತ್ ಹಾಗೂ ನಾಯಕಿ ಪ್ರೇರಣಾ ನಡುವೆ ಮತ್ತೊಂದು ಹುಡುಗಿ ಬಂದಂತೆ ಕಾಣುತ್ತದೆ. ನಾಯಕ-ನಾಯಕಿಯ ಪ್ರೀತಿ, ಮುಂದೆ ಯಾವ ತಿರುವು ಪಡೆದುಕೊಳ್ಳುವುದು ಎಂಬುದನ್ನು ಮುಂದಿನ ಎಪಿಸೋಡ್ಗಳಲ್ಲಿ ಕಾದು ನೋಡಬೇಕು.
- " class="align-text-top noRightClick twitterSection" data="
">