ಬೆಂಗಳೂರು: ನಟಿ ಅಮೂಲ್ಯ ಈಗ ತುಂಬು ಗರ್ಭಿಣಿ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ 'ಚೆಲುವಿನ ಚಿತ್ತಾರ'ದ ನಟಿ ಜೊತೆಗಿರುವ ಕೆಲವು ಫೋಟೋಗಳನ್ನು ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಖುಷಿ ಪಟ್ಟು ಶುಭ ಕೋರಿದ್ದಾರೆ.
ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಅಮೂಲ್ಯ. ‘ಚೆಲುವಿನ ಚಿತ್ತಾರ’, ‘ನಾನು ನನ್ನ ಕನಸು’, ‘ಗಜ ಕೇಸರಿ’ ಸೇರಿದಂತೆ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿ ಯಶಸ್ವಿ ಹೀರೋಯಿನ್ ಎನಿಸಿಕೊಂಡಿದ್ದಾರೆ. ದೊಡ್ಡ ಅಭಿಮಾನಿ ಬಳಗ ಕೂಡಾ ಹೊಂದಿದ್ದಾರೆ.
2017ರಲ್ಲಿ ಜಗದೀಶ್ ಜೊತೆಗೆ ಅಮೂಲ್ಯ ಸಪ್ತಪದಿ ತುಳಿದಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕುಟುಂಬದ ಕಡೆಗೆ ಗಮನ ಕೊಟ್ಟಿದ್ದರು. ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ವಿಚಾರವನ್ನು ಅಮೂಲ್ಯ ಮತ್ತು ಜಗದೀಶ್ ದಂಪತಿ ಇತ್ತೀಚೆಗೆ ತಿಳಿಸಿದ್ದರು. ವಿಶೇಷ ಫೋಟೋ ಶೂಟ್ ಮೂಲಕ ಸಿಹಿ ಸುದ್ದಿ ಹಂಚಿಕೊಂಡಿದ್ದರು.
ಇದೀಗ ಗೋಲ್ಡನ್ ಸ್ಟಾರ್ ಪತ್ನಿ, ಅಮೂಲ್ಯ ಮನೆಗೆ ಭೇಟಿ ನೀಡಿ ಶುಭ ಕೋರಿರುವುದು ಅಭಿಮಾನಿಗಳಿಗೆ ಸಾಕಷ್ಟು ಖುಷಿ ತಂದುಕೊಟ್ಟಿದೆ. ಅಮೂಲ್ಯ ಜೊತೆಗಿರುವ ಶಿಲ್ಪಾ ಗಣೇಶ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಓದಿ: 'ಸಮಾನತೆ ಪ್ರತಿಮೆ' ಲೋಕಾರ್ಪಣೆ ವೇಳೆ ಅಪರೂಪದ ಘಟನೆ... ಪ್ರಧಾನಿ ಕಾಲಿಗೆ ನಮಸ್ಕರಿಸಿದ ಪುಟಾಣಿ!