ಹಾಡು ಕರ್ನಾಟಕದ ರಿಯಾಲಿಟಿ ಶೋ ನಿರೂಪಕಿ ಚಂದನಾ ಅನಂತಕೃಷ್ಣ ಅವರಿಗೆ ಕಿರುತೆರೆ ಲೋಕ ಹೊಸದೇನಲ್ಲ. ಆದರೆ, ನಿರೂಪಣಾ ಜಗತ್ತು ತೀರಾ ಹೊಸದು. ರಾಜರಾಣಿ ಧಾರಾವಾಹಿಯಲ್ಲಿ ಎಡವಟ್ ರಾಣಿ ಆಲಿಯಾಸ್ ಚುಕ್ಕಿಯಾಗಿ ಅಭಿನಯಿಸಿದ ಚಂದನಾ, ಕಿರುತೆರೆ ವೀಕ್ಷಕರಿಗೆ ತೀರಾ ಹತ್ತಿರವಾದುದು ದೊಡ್ಮನೆಯೊಳಗೆ ಹೋದ ನಂತರವೇ!
ಬಿಗ್ಬಾಸ್ನಿಂದ ಹೊರಬಂದ ಚಂದನಾಗೆ ಹಾಡು ಕರ್ನಾಟಕದ ನಿರೂಪಣೆ ಮಾಡುವ ಅವಕಾಶ ದೊರೆಯಿತು. ತನಗೆ ಅನುಭವ ಇಲ್ಲದಿರುವಂತಹ ಕ್ಷೇತ್ರವಾದರೂ ಒಲ್ಲೆ ಎನ್ನದೇ ನೋಡೋಣ ಎಂದೇ ನಿರೂಪಣಾ ಕ್ಷೇತ್ರಕ್ಕೆ ಕಾಲಿಟ್ಟ ಈಕೆ ಇದೀಗ ನಿರೂಪಕಿಯಾಗಿಯೂ ಗಮನ ಸೆಳೆದಿದ್ದಾರೆ.
- " class="align-text-top noRightClick twitterSection" data="
">
ಚಂದನಾ ಅವರ ಪ್ರಯತ್ನಕ್ಕೆ ಒಳ್ಳೆಯ ಪ್ರಶಂಸೆ ಕೂಡಾ ದೊರತಿದೆ. ಹಾಡು ಕರ್ನಾಟಕ ಕಾರ್ಯಕ್ರಮದ ತೀರ್ಪುಗಾರರಾಗಿರುವ ರಘುದೀಕ್ಷಿತ್ ಅವರು ಚಂದನಾ ಅವರನ್ನು ಹಾಡಿಹೊಗಳಿದ್ದಾರೆ. ಚಂದನಾ ಅವರೊಂದಿಗೆ ತಾವಿರುವ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ರಘು ದೀಕ್ಷಿತ್, 'ಕಾರ್ಯಕ್ರಮದ ಡಾರ್ಲಿಂಗ್ನೊಂದಿಗೆ..! ಚಂದನಾ ವಯಸ್ಸಿನಲ್ಲಿ ತುಂಬಾ ಸಣ್ಣವಳಿರಬಹುದು. ಮಾತ್ರವಲ್ಲ ಈ ಕ್ಷೇತ್ರದ ಕುರಿತು ಅವಳಿಗೆ ಅನುಭವವೂ ಕಡಿಮೆ ಇರಬಹುದು. ಆದರೆ, ಅವಳ ಹಾರ್ಡ್ವರ್ಕ್ ಅನ್ನು ನಾವೆಲ್ಲಾ ಮೆಚ್ಚಲೇಬೇಕು. ಅವಳು ನೀಡುವ 100ರಷ್ಟು ಡೆಡಿಕೇಷನ್ಗೆ ತಲೆಬಾಗಿದ್ದೇನೆ. ಚಂದನಾ ಅವರೊಂದಿಗೆವೇದಿಕೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ನಿಜವಾಗಿಯೂ ತುಂಬಾ ಸಂತಸವಾಗುತ್ತಿದೆ. ಆಲ್ ದಿ ಬೆಸ್ಟ್ ಲಿಟ್ಲ್ ಗರ್ಲ್" ಎಂದು ಬರೆದುಕೊಂಡಿದ್ದಾರೆ ರಘು ದೀಕ್ಷಿತ್ .