ETV Bharat / sitara

'ವೀಕೆಂಡ್​ ವಿತ್ ರಮೇಶ್'​​ ಗ್ರ್ಯಾಂಡ್ ಫಿನಾಲೆಯಲ್ಲಿ ಯುವ ವಿಜ್ಞಾನಿ

ಅಡಿಕೆ ಟೀ ಸಂಶೋಧಕ ನಿವೇದನ್ ತಮ್ಮ ಅನುಭವ ಹಾಗೂ ಯಶಸ್ಸಿನ ಜೀವನಗಾಥೆಯನ್ನು 'ವೀಕೆಂಡ್ ವಿತ್ ರಮೇಶ್' ಫಿನಾಲೆಯಲ್ಲಿ ಹಂಚಿಕೊಳ್ಳಲಿದ್ದಾರೆ.

author img

By

Published : Jul 13, 2019, 6:34 PM IST

ಯುವವಿಜ್ಞಾನಿ

ಅಡಿಕೆ ಟೀ ಸಂಶೋಧಕ ನಿವೇದನ್ ನೆಂಪೆ, ಈ ವಾರ 'ವೀಕೆಂಡ್​ ವಿಥ್ ರಮೇಶ್​​' ಗ್ರ್ಯಾಂಡ್ ಫಿನಾಲೆಯ ಅಪರೂಪದ ಅತಿಥಿಯಾಗಿದ್ದಾರೆ. ಮಲೆನಾಡು ಶಿವಮೊಗ್ಗದ ಮಂಡಗದ್ದೆಯ ಯುವ ವಿಜ್ಞಾನಿ ಮಂಗನ ಕಾಯಿಲೆಗೆ ಔಷಧಿ ಕಂಡುಹಿಡಿದು ಭೇಷ್ ಎನಿಸಿಕೊಂಡಿದ್ದರು. ಡಿಎಂಪಿ ಎಣ್ಣೆಯಿಂದ ತಯಾರಾದ ನಾಟಿ ಔಷಧಿ ಕೆಎಫ್‌ಡಿಆರ್​​​ಜೆಲ್‌‌ ಸಂಶೋಧಿಸಿದವರು ಇವರೇ. ಹೀಗೆ ಹಲವು ಹೊಸ ಸಂಶೋಧನೆಗಳ ಹರಿಕಾರ 4ನೇ ಸೀಸನ್​​​ನ 'ವೀಕೆಂಡ್ ವಿತ್ ರಮೇಶ್‌' ಗ್ರ್ಯಾಂಡ್‌ ಫಿನಾಲೆಯಲ್ಲಿ ಸಾಧಕರ ಸೀಟಿನ ಮೇಲೆ ಆಸೀನರಾಲಿದ್ದಾರೆ.

Nut Tea Researcher Nivendan
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ನಿವೇದನ್

ಒಂದು ಹೊತ್ತಿನ ಊಟಕ್ಕೆ ಪರದಾಡುವಂತ ಸ್ಥಿತಿಯಲ್ಲಿದ್ದ ನಿವೇದನ್, ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮುಗಿಸಿದರು. ಫಾರ್ಮಸಿಯಲ್ಲಿ ಪದವಿ ಪಡೆದರೂ ಊಟಕ್ಕೆ ದುಡ್ಡಿಲ್ಲದೇ ಕೇವಲ ಟೀ ಕುಡಿದು ದಿನ ಕಳೆದವರು.

ಕೆಲವು ಕಾಯಿಲೆಗಳಿಗೆ ನಾಟಿ ಔಷಧಿ ಮಾತ್ರ ಮದ್ದು ಎಂಬುದರ ಬಗ್ಗೆ ಅವರು ಸಂಶೋಧನೆ ನಡೆಸಿದಿದ್ದಾರೆ. ಸರ್ಕಾರದ ಸ್ಕಾಲರ್​ ಆಗಿ ಆಸ್ಟ್ರೇಲಿಯಾದಲ್ಲಿ ಮಾಸ್ಟರ್ ಇನ್ ಮ್ಯಾನುಫ್ಯಾಕ್ಚರ್ ಆ್ಯಂಡ್ ಮ್ಯಾನೆಜ್‌ಮೆಂಟ್ ಟೆಕ್ನಾಲಜಿಯಲ್ಲಿ ಡಿಗ್ರಿ ಮಾಡಿದ್ದಾರೆ.

Nut Tea Researcher Nivendan
ಯುವವಿಜ್ಞಾನಿ ನಿವೇದನ್

ಇನ್ನು ಬಲವಾಗಿ ಕೇಳಿ ಬಂದಿದ್ದ ಅಡಿಕೆ ನಿಷೇಧ ಕೂಗಿನ ವಿರುದ್ಧ ಹೋರಾಟಕ್ಕೆ ನಿಂತ ನಿವೇದನ್, ಅಡಿಕೆಯ ಬದಲಿ ಬಳಕೆ ಬಗ್ಗೆ ಸಂಶೋಧಿಸಿ ಇದು ಅನಾರೋಗ್ಯಕಾರಿಯಲ್ಲ. ಬದಲಿಗೆ ಇದರಲ್ಲೂ ಔಷಧೀಯ ಗುಣಗಳಿವೆ ಎಂಬುವುದನ್ನು ಜಗತ್ತಿಗೆ ತೋರಿಸಲು, ಅಡಿಕೆಯಿಂದ ಟೀ ತಯಾರಿಸಿದರು. ಹಾಗೆಯೇ, ಮಂಗನಕಾಯಿಲೆಗೂ ಔಷಧಿ ಕಂಡು ಹಿಡಿದರು. ಇದಕ್ಕಾಗಿ ಇವರನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಬಂದಿವೆ.

Intro:Body:ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಯಲ್ಲಿ ಅಪರೂಪದ ಅಥಿತಿ ಕಾಣಿಸಿಕೊಳ್ಳಲಿದ್ದಾರೆ.
ಅಡಿಕೆ ಟೀ ಸಂಶೋಧಕ ಹಾಗೂ ಯುವ ವಿಜ್ಞಾನಿ ನಿವೇದನ್ ನೆಂಪೆ.
ಮಲೆನಾಡಿನ ಅಂದರೆ ಶಿವಮೊಗ್ಗದ ಮಂಡಗದ್ದೆ ಇವರ ಹುಟ್ಟೂರು. ಮಂಗನಕಾಯಿಲೆಯಿಂದ ಬಳಲುತ್ತಿದ್ದ ಮಲೆನಾಡಿನ ಜನರಿಗೆ ಔಷಧಿ ಕಂಡುಹಿಡಿದು ಭೇಷ್ ಎನಿಸಿಕೊಂಡ ಯುವಕ. ಡಿಎಂಪಿ ಎಣ್ಣೆಯಿಂದ ತಯಾರಾದ ನಾಟಿ ಔಷಧಿ ಕೆಎಫ್‌ಡಿಆರ್ ಜೆಲ್‌‌ ಸಂಶೋಧಿಸಿದರು. ಹೀಗೆ ಹಲವು ಹೊಸ ಸಂಶೋಧನೆಗಳ ಸಾಧಕ ವೀಕೆಂಡ್ ವಿತ್ ರಮೇಶ್‌ ಗ್ರ್ಯಾಂಡ್‌ ಫಿನಾಲೆಯಲ್ಲಿ.
ತೆರೆಮರೆಯಲ್ಲಿ ಸಾಧನೆ ಮಾಡಿದ ಶ್ರೀಸಾಮಾನ್ಯನ ಸಾಧನೆಯನ್ನು ಐದು ನಿಮಿಷದಲ್ಲಿ ನಿವೇದನ್ ತಮ್ಮ ಸಾಧನೆ ಹಂಚಿಕೊಳ್ಳಲಿದ್ದಾರೆ.
ಒಂದು ಹೊತ್ತಿಗೂ ಊಟಕ್ಕೆ ಇಲ್ಲದ ಸ್ಥಿತಿಯಲ್ಲಿದ್ದ ನಿವೇದನ್, ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮುಗಿಸಿದರು. ಫಾರ್ಮಸಿಯಲ್ಲಿ ಪದವಿ ಪಡೆದರೂ ಊಟಕ್ಕೆ ದುಡ್ಡಿಲ್ಲದೆ ಕೇವಲ ಟೀ ಕುಡಿದು ದಿನ ಕಳೆದಿದ್ದಾರೆ.
ಕೆಲವೊಂದು ಕಾಯಿಲೆಗಳಿಗೆ ನಾಟಿ ಔಷಧಿ ಮಾತ್ರ ಕೆಲಸಕ್ಕೆ ಬರುವುದೆಂದು ಔಷಧಿಗಳನ್ನು ಕಂಡು ಹಿಡಿಯುವುದು ಹೇಗೆ, ಏನು ಮಾಡಬಹುದು ಎಂಬ ಬಗ್ಗೆ ರಿಸರ್ಚ್ ಮಾಡಿ ಸುಪ್ರೀಂ ಕೋರ್ಟ್‌ಗೆ ಅಧ್ಯಯನದ ವರದಿ ಸಲ್ಲಿಸಿದರು. ನಂತರ ಸರ್ಕಾರದ ಸ್ಕಾಲರ್ ಆಸ್ಟ್ರೇಲಿಯಾದಲ್ಲಿ ಮಾಸ್ಟರ್ ಇನ್ ಮ್ಯಾನುಫ್ಯಾಕ್ಚರ್ ಆ್ಯಂಡ್ ಮ್ಯಾನೆಜ್‌ಮೆಂಟ್ ಟೆಕ್ನಾಲಜಿ ಡಿಗ್ರಿ ಮಾಡುವ ಅವಕಾಶ ಸಿಕ್ಕಿತು. ಅಲ್ಲಿ ವಾಸ ಮಾಡಲು ಮನೆ, ಕಾಲೇಜ್ ಫೀಸ್ ಹಣ ಹೊಂದಿಸಲು ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರು.  ನಂತರ ಕನ್ಸಲ್ ಟೆಂಟ್ ಬ್ಯುಸಿನೆಸ್ ಡೆವಲಪರ್ ಆಗಿ 6 ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಅನಂತರ ಸ್ವದೇಶಕ್ಕೆ ಮರಳಿ, ಅದರಲ್ಲಿಯೂ ಹಳ್ಳಿಗೆ ಮರಳಲು ನಿರ್ಧರಿಸಿದರು.
ಅಡಿಕೆ ನಿಷೇಧ ಕೂಗನ್ನು ನಿಲ್ಲಿಸುವ ಅನಿವಾರ್ಯತೆ ನಿವೇದನ್ ಗಿತ್ತು. ಅಡಿಕೆಯ ಬದಲಿ ಬಳಕೆ ಬಗ್ಗೆ ಸಂಶೋಧನೆ ಮಾಡುವುದು ಅನಿವಾರ್ಯವಾಗಿತ್ತು. ಅಡಿಕೆ ಅನಾರೋಗ್ಯಕಾರಿಯಲ್ಲ. ಬದಲಿಗೆ ಇದರಲ್ಲೂ ಔಷಧೀಯ ಗುಣಗಳಿವೆ ಎಂಬುವುದನ್ನು ಜಗತ್ತಿಗೆ ತೋರಿಸಲು, ಅಡಿಕೆಯಿಂದ ಟೀ ತಯಾರಿಸಿದರು. ಹಾಗೆಯೇ, ಮಂಗನಕಾಯಿಲೆಗೂ ಔಷಧಿ ಕಂಡು ಹಿಡಿದರು. ಇದಕ್ಕಾಗಿ ಹಲವು ಪ್ರಶಸ್ತಿಗಳು ಬಂದಿವೆ.
ನಿವೇದನ್ ತಮ್ಮ ಅನುಭವ ಹಾಗೂ ಯಶಸ್ಸಿನ ಜೀವನಗಾಥೆಯನ್ನು ವಿಕೇಂಡ್ ವಿಥ್ ರಮೇಶ್ ಫಿನಾಲೆಯಲ್ಲಿ ಹಂಚಿಕೊಂಡಿದ್ದಾರೆ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.